ರಾಮನಗರ | ಸರಕಾರಿ ಶಾಲೆಗೆ ‘ಉತ್ತಮ ಶಾಲೆ’ ಪ್ರಶಸ್ತಿ ಹಾಗೂ ಸ್ಮಾರ್ಟ್ ಟಿವಿ ವಿತರಣೆ

ರಾಮನಗರ : ಡಿಎಎಸ್‌ಎಫ್ (DASF) ಆಕ್ಟಿಜನ್ ಕ್ಲಬ್‌ನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ ರಾಮನಗರ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (GHPS), ಲಕ್ಷ್ಮಿಪುರಕ್ಕೆ ‘ಉತ್ತಮ ಶಾಲೆ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.  ರಾಮನಗರ 

ಇದನ್ನೂ ಓದಿ : ಬೆಂಗಳೂರಿಗೆ ಬರಲಿರುವ ಸುರಂಗ ರಸ್ತೆಯ ಕತೆ (ವ್ಯಥೆ?)

ಆಕ್ಟಿಜನ್ ಕ್ಲಬ್ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುವುದರ ಮೂಲಕ ಲಕ್ಷ್ಮಿಪುರ ಶಾಲೆಯು ತಾಲೂಕಿನಲ್ಲಿ ಚಾಂಪಿಯನ್ ಶಾಲೆಯಾಗಿ ಹೊರಹೊಮ್ಮಿದೆ. ಇದರ ಅಂಗವಾಗಿ, ಡಿಎಎಸ್‌ಎಫ್ ಸಂಸ್ಥೆಯು ಶಾಲೆಗೆ ಶೈಕ್ಷಣಿಕ ಉದ್ದೇಶಗಳಿಗಾಗಿ ಸ್ಮಾರ್ಟ್ ಟಿವಿಯನ್ನು ವಿತರಿಸಲಾಯಿತು.

ರಾಮನಗರ | ಸರಕಾರಿ ಶಾಲೆಗೆ 'ಉತ್ತಮ ಶಾಲೆ' ಪ್ರಶಸ್ತಿ ಹಾಗೂ ಸ್ಮಾರ್ಟ್ ಟಿವಿ ವಿತರಣೆ
ರಾಮನಗರ | ಸರಕಾರಿ ಶಾಲೆಗೆ ‘ಉತ್ತಮ ಶಾಲೆ’ ಪ್ರಶಸ್ತಿ ಹಾಗೂ ಸ್ಮಾರ್ಟ್ ಟಿವಿ ವಿತರಣೆ

ಈ ಉಪಕ್ರಮವು ರಾಮನಗರ ತಾಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಪ್ರಸ್ತುತ ತಾಲೂಕಿನ ಒಟ್ಟು 72 ಸರ್ಕಾರಿ ಶಾಲೆಗಳು ಆಕ್ಟಿಜನ್ ಕ್ಲಬ್‌ನ ಚಟುವಟಿಕೆಗಳನ್ನು ಸಕ್ರಿಯವಾಗಿ ನಡೆಸುತ್ತಿವೆ. ಈ ಎಲ್ಲಾ ಶಾಲೆಗಳ ಉತ್ತಮ ಕಾರ್ಯನಿರ್ವಹಣೆಗೆ ಜಿಲ್ಲಾ ಮಟ್ಟದಲ್ಲಿ ಸಹಕಾರ ಮತ್ತು ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಜಿಲ್ಲಾ ಸಂಯೋಜಕರಾದ ಸಚಿನ್ ಕುಮಾರ್ ರವರು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.

ಇದನ್ನೂ ನೋಡಿ : ಧರ್ಮಸ್ಥಳ | ‘ಒಂದೇ ದಿನ 72 ಶವಗಳ ದಫನ್‌ ʼ – ಪಂಚಾಯತ್ ದಾಖಲೆಗಳಿಂದ ಬಹಿರಂಗ Janashakthi Media #Dharmasthala

Donate Janashakthi Media

Leave a Reply

Your email address will not be published. Required fields are marked *