ಕಲ್ಯಾಣ ಕರ್ನಾಟಕದ ಅತಿವೃಷ್ಟಿ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು KPRS ಆಗ್ರಹ

ಬೆಂಗಳೂರು: ಸುಮಾರು ಮೂರು ತಿಂಗಳುಗಳ ಕಾಲ ಸುರಿದ ಸತತ ಮಳೆಯಿಂದ ಎಲ್ಲಾ ರೀತಿಯ ಬೆಳೆಗಳು, ಉದ್ಯೋಗ ಮತ್ತಿತರ ಜೀವನಾಧಾರಗಳನ್ನು ಕಳೆದುಕೊಂಡಿರುವ ಕಲ್ಯಾಣ ಕರ್ನಾಟಕದ ರೈತರು, ಕೃಷಿ ಕೂಲಿಕಾರರು ಹಾಗೂ ಇನ್ನಿತರ ಎಲ್ಲಾ ರೀತಿಯ ದೈಹಿಕ ದುಡಿಮೆಗಾರರ ಪರಿಸ್ಥಿತಿ ಶೋಚನಿಯವಾಗಿದೆ. ಅತಿವೃಷ್ಟಿ

ಕಲ್ಯಾಣ ಕರ್ನಾಟಕದ ಅತಿವೃಷ್ಟಿ,ಪ್ರವಾಹ ವಿಕೋಪವನ್ನು ಕೂಡಲೇ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಹಾಗೂ ಈ ಸಂಬಂಧ ಅಗತ್ಯ ಶಿಪಾರಸ್ಸು ಮಾಡುವಂತೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವನ್ನು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ ಎಂದು ಅಧ್ಯಕ್ಷರಾದ ಯು. ಬಸವರಾಜ ಹಾಗೂ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಜಂಟಿ ಹೇಳಿಕೆ ನೀಡಿದ್ದಾರೆ.

ಕಲ್ಯಾಣ ಕರ್ನಾಟಕದ ಕಲ್ಬುರ್ಗಿ, ಯಾದಗಿರಿ ಸೇರಿದಂತೆ ಹಲವಾರು ಪ್ರದೇಶಗಳು ಈ ನೈಸರ್ಗಿಕ ವಿಕೋಪದಿಂದ ತೀವ್ರ ಸ್ವರೂಪದ ಹಾನಿಗೆ ತುತ್ತಾಗಿವೆ. ಪ್ರತಿ ಎಕರೆ ಬೆಳೆ ನಷ್ಟಕ್ಕೆ ಕನಿಷ್ಠ 50 ಸಾವಿರ ರೂ ಪರಿಹಾರ ನೀಡಬೇಕು, ಮನೆ ಕಳೆದುಕೊಂಡವರಿಗೆ ತಕ್ಷಣ ಒಂದು ಲಕ್ಷ ರೂ ಪರಿಹಾರ ನೀಡಿ ಮನೆ ನಿರ್ಮಿಸಲು ವಿಶೇಷ ನೆರವು ಪ್ರಕಟಿಸಬೇಕು, ಉದ್ಯೋಗ ನಷ್ಟ ಅನುಭವಿಸಿರುವ ಪ್ರತಿಯೊಂದು ಬಡರೈತರು,ಕೃಷಿ ಕೂಲಿಕಾರರು ಹಾಗೂ ಎಲ್ಲಾ ರೀತಿಯ ದೈಹಿಕ ದುಡಿಮೆಗಾರರಿಗೆ ಕನಿಷ್ಠ ಇಪ್ಪತ್ತೈದು ಸಾವಿರ ರೂ ಉದ್ಯೋಗ ನಷ್ಟ ಪರಿಹಾರ ಒದಗಿಸಬೇಕು ಎಂದರು. ಅತಿವೃಷ್ಟಿ

ಇದನ್ನೂ ಓದಿ: ಕರ್ನಾಟಕದಲ್ಲಿ ಭೂ ಸುಧಾರಣೆಯ ವೈಪರೀತ್ಯ

ಎಲ್ಲಾ ಖಾಸಗಿ, ಸರ್ಕಾರಿ ಶಾಲಾ ಕಾಲೇಜುಗಳ ಬಾಕಿ ಶುಲ್ಕವನ್ನು ಮನ್ನಾ ಮಾಡಬೇಕು, ರೈತರ, ಕೂಲಿಕಾರರ,ಮಹಿಳೆಯರ ಎಲ್ಲಾ ರೀತಿಯ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಕಳೆದ ಒಂದು ತಿಂಗಳುಗಳಿಂದ ಕಲ್ಯಾಣ ಕರ್ನಾಟಕದ ಜನತೆ ಪಕ್ಷಾತೀತವಾಗಿ ಪ್ರತಿಭಟಿಸುತ್ತಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮೀಕ್ಷೆ ಮುಂತಾದ ಸಬೂಬುಗಳನ್ನು ಹೇಳಿಕೊಂಡು ಕಾಲಹರಣ ಮಾಡುತ್ತಿವೆ .ಇದು ಈ ಎರಡೂ ಸರ್ಕಾರಗಳ ಜನ ವಿರೋಧಿ ನೀತಿಗಳಿಗೆ ಸ್ಪಷ್ಟ ಸಾಕ್ಷಿ ಯಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಕಟುವಾಗಿ ಟೀಕಿಸುತ್ತದೆ ಎಂದು ಹೇಳಿದ್ದಾರೆ.

ಜೀವನದ ಸಂಕಟ, ಸಾಲಭಾಧೆ ಮುಂತಾದ ಕಿರುಕುಳದಿಂದ ಈಗಾಗಲೇ ಕಲ್ಯಾಣ ಕರ್ನಾಟಕದಲ್ಲಿ ರೈತ ಆತ್ಮಹತ್ಯೆಗಳು ವರದಿಯಾಗುತ್ತಿವೆ. ಇದು ಮತ್ತಷ್ಟು ತೀವ್ರಗೊಳ್ಳಲಿದೆ.

ಮಳೆ-ಪ್ರವಾಹ ನಂತರದ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ದುಸ್ಥಿತಿ ಪರಿಸ್ಥಿತಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎರಡೂ ಹೊಣೆಗಾರರಾಗಿವೆ. ಕೂಡಲೇ ಆತ್ಮಹತ್ಯೆ ತಡೆಗಟ್ಟಲು ಹಾಗೂ ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು.

ರಾಜ್ಯದ ಪ್ರಧಾನ ವಿರೋಧ ಪಕ್ಷ ಬಿಜೆಪಿ ಹಾಗೂ ಕಲ್ಯಾಣ ಕರ್ನಾಟಕದ ಎಲ್ಲಾ ಶಾಸಕರು, ಸಂಸದರು ಕೂಡಲೇ ರಾಷ್ಟ್ರೀಯ ವಿಪತ್ತು ಘೋಷಣೆ ಮಾಡುವಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ಹಾಗೂ ಈ ಸಂಬಂಧ ಸೂಕ್ತ ಶಿಪಾರಸ್ಸು ಮಾಡುವಂತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೇಲೆ ಪರಿಣಾಮಕಾರಿ ಒತ್ತಡ ಉಂಟು ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ ಎಂದು ಹೇಳಿದರು.

ಇದನ್ನೂ ನೋಡಿ: ಸೌಜನ್ಯ ಕೊಲೆ ಪ್ರಕರಣ | ತನಿಖೆಯ ಮೇಲಿನ ನಂಬಿಕೆಯೇ ಹೊರಟು ಹೋಗಿದೆ: ಕುಸುಮಾವತಿ Janashakthi Media

Donate Janashakthi Media

Leave a Reply

Your email address will not be published. Required fields are marked *