ಭಾರತದ ಅರ್ಥ ವ್ಯವಸ್ಥೆಯಲ್ಲಿ ಮಹಿಳಾ ಶ್ರಮಿಕಪಡೆಯ ಭಾಗವಹಿಸುವಿಕೆ ದರ 2011-12 ರಲ್ಲಿ ಶೇ 31.2 ಇದ್ದದ್ದು 2017-18 ರಲ್ಲಿ 23.3 ಕ್ಕೆ ಕುಸಿದು 2023-24 ಕ್ಕೆ 41.7 ಕ್ಕೆ ಏರಿದೆ. ಮೇಲ್ನೋಟಕ್ಕೆ ಇದು ಬಹಳ ಆಶಾದಾಯಕವಾಗಿ ಕಂಡರೂ, ಇದರ ಆಳಕ್ಕೆ ಇಳಿದರೆ ಮಹಿಳೆಯರ ಶ್ರಮಕ್ಕೆ ಸಿಗುವ ಪ್ರತಿಫಲ ಮತ್ತು ಅವರಿಗೆ ಸಿಗುವ ಕೆಲಸ ಎರಡರಲ್ಲೂ ಹಲವು ನ್ಯೂನತೆಗಳು ಕಾಣತೊಡಗುತ್ತವೆ. ಶ್ರಮ
-ಜಿ. ಎಸ್. ಮಣಿ
ಆರ್ಥಿಕ ಪ್ರಗತಿ ಸಾಧಿಸಬೇಕೆಂದರೆ ಲಿಂಗ ಸಮಾನತೆ ಇರಬೇಕು. ಸಮಾಜದ ಅರ್ಧದಷ್ಟಿರುವ ಮಹಿಳೆಯರು ದುಡಿಮೆಯ ಫಲಗಳಿಂದ ವಂಚಿತರಾದರೆ ಅಭಿವೃದ್ದಿ ಹೇಗೆ ತಾನೇ ಸಾಧ್ಯವಾಗುತ್ತದೆ? ಸರ್ಕಾರ ಸಾಧನೆಯ ತುತ್ತೂರಿ ಊದುತ್ತಲೇ ಇದೇ. ಆದರೆ ಅಂಕಿ ಸಂಖ್ಯೆಗಳ ಹಿಡಿದು ಕುಳಿತು ವಿಶ್ಲೇಷಣೆಗೆ ತೊಡಗಿದರೆ ಸರ್ಕಾರಿ ಘೋಷಿತ ಸಾಧನೆಗಳ ಟೊಳ್ಳುತನ ಕಣ್ಣಿಗೆ ರಾಚುವಂತೆ ತೆರೆದುಕೊಳ್ಳುತ್ತದೆ. ಶ್ರಮ
ನಮ್ಮ, ಅಂದರೆ ಭಾರತದ ಆರ್ಥಿಕ ಹಣೆಬರಹವನ್ನು ಬದಲಿಸಬೇಕೆಂದರೆ ಮಹಿಳೆಯರು ಆರ್ಥಿಕದಲ್ಲಿ ತೊಡಗಿ ರಚನಾತ್ಮಕ ಪಾತ್ರ ವಹಿಸಿದರೆ ಮಾತ್ರ ಸಾಧ್ಯ ಎಂಬುದೊಂದು ದೊಡ್ಡ ಚಿಂತನೆ ಇದೆ. ಇಂತಹ ಚಿಂತನೆಯ ಅನುಷ್ಠಾನ ಇನ್ನೂ ಆಗಬೇಕಿದೆ. ಅದು ಸುಲಭದಲ್ಲಿ ಸಾಧ್ಯವಿರುವ ಕೃಷಿ ಕ್ಷೇತ್ರದಲ್ಲೂ ಇದು ಇನ್ನೂ ಕನಸಿನ ಗಂಟಾಗಿಯೇ ಉಳಿದಿದೆ. ಕೃಷಿಯಲ್ಲಿ ಮಹಿಳೆಯರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿಯೇ ಇದೆ. ಆದರೆ ಅದು ಅವರಿಗೆ ಆರ್ಥಿಕ ಪ್ರತಿಫಲ ನೀಡುತ್ತಿದೆ ಎಂಬುದು ಸುಳ್ಳು. ಇಂದು ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ತಂತ್ರಜ್ಞಾನ ಮತ್ತು ವ್ಯಾಪಾರಿ ಬದಲಾವಣೆಗಳು ಈ ವಿಷಯದಲ್ಲಿ ಅಪಾರ ಅವಕಾಶಗಳನ್ನು ತೆರೆಯುವ ಸಾಮರ್ಥ್ಯಗಳನ್ನು ಹೊಂದಿವೆ ಎಂಬುದು ವಾಸ್ತವದ ಮಾತು. ಶ್ರಮ
ಇದನ್ನೂ ಓದಿ: ಹೊಸದಿಲ್ಲಿ | ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವುದು ಹಸ್ತಕ್ಷೇಪಕ್ಕೆ ಸಮಾನ – ಸುಪ್ರೀಂ ಕೋರ್ಟ್
ಕೆಲಸವೆಲ್ಲ ಮಹಿಳೆಯರಿಗೆ – ಪ್ರತಿಫಲ ಗಂಡಸರಿಗೆ
ಈ ವಿಚಿತ್ರವನ್ನು ನೋಡಿ: ಕಳೆದೊಂದು ದಶಕದಲ್ಲಿ ದೊಡ್ಡ ಪ್ರಮಾಣದಲ್ಲಿ ಗಂಡಸರು ಲಾಭದಾಯಕ ಕೃಷಿಯೇತರ ವೃತ್ತಿಗಳಿಗೆ ಸ್ಥಾನಾಂತರಗೊಂಡರು. ಕೃಷಿಯಲ್ಲಿಅವರ ಸ್ಥಾನಗಳನ್ನು ಮಹಿಳೆಯರು ವಹಿಸಿಕೊಂಡರು. ಈಗ ಕೃಷಿಯಲ್ಲಿ ಸರಿಸುಮಾರು ಅರ್ಧದಷ್ಟು ಅಂದರೆ ಶೇ 42 ರಷ್ಟು ಮಹಿಳೆಯರು ಇದ್ದಾರೆ. ಆದರೆ ಇದರ ಫಲ ಕುಂಠಿತಗೊಂಡಿದೆ. ಕಾರಣ ಹುಡುಕಿಕೊಂಡು ಹೋದರೆ ಗೊತ್ತಾಗುವುದು ಇದು: ಈಮಹಿಳೆಯರಲ್ಲಿ ಅರ್ಧಕ್ಕಿಂತ ಹೆಚ್ಚು ಕುಟುಂಬದ ವೃತ್ತಿ ವಹಿಸಿಕೊಂಡಿರುವುದು ಮತ್ತು ಅದರ ಪ್ರತಿಫಲ ಅವರಿಗೆ ಸಿಗುವುದಿಲ್ಲ! ಕಳೆದ ಎಂಟು ವರ್ಷಗಳಲ್ಲಿ ಮಹಿಳಾ ಕೆಲಸಗಾರರ ಸಂಖ್ಯೆ ಎರಡೂವರೆ ಪಟ್ಟು ಹೆಚ್ಚಾಗಿದ್ದರೂ ಈ ಮಹಿಳಾ ಸಮುದಾಯದ ವೇತನ ಹೆಚ್ಚಾಗಿಲ್ಲ. ಶ್ರಮ
ವಿವರಕ್ಕೆ ಕೋಷ್ಟಕ 1 ನೋಡಿ

ಕೋಷ್ಟಕ 1- ವೇತನವಿಲ್ಲದೆ ಕೌಟುಂಬಿಕ ಕೃಷಿಯಲ್ಲಿ ತೊಡಗಿರುವ ಮಹಿಳಾ ಕೆಲಸಗಾರರ ಸಂಖ್ಯೆ (ದಶಲಕ್ಷಗಳಲ್ಲಿ)
ಇದು ಯಾಕೆ ಎಂದು ಕಾರಣ ಹುಡುಕಿಕೊಂಡು ಹೋದರೆ ಗೊತ್ತಾಗುವುದು ಮೂರನೇ ಒಂದು ಪಾಲು ಮಹಿಳಾ ಕೆಲಸಗಾರರಿಗೆ ವೇತನ ಎಂಬುದೇ ಇಲ್ಲ. ಯಾಕೆಂದರೆ ಅವರು ಕುಟುಂಬದ ಸದಸ್ಯರು. ಬಿಹಾರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಶೇ 80 ರಷ್ಟು ಮಹಿಳಾ ಕೆಲಸಗಾರರು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಇವರಲ್ಲಿ ಶೇ 50 ರಷ್ಟು ಜನರಿಗೆ ವೇತನಗಳಿಲ್ಲ/ ಪ್ರತಿಫಲವಿಲ್ಲ. ಇದು ವಾಸ್ತವ. ಶ್ರಮ
ನಕಾಶೆ 2 ನೋಡಿ

ನಕಾಶೆ 2- ವೇತನವಿಲ್ಲದೆ ಕೃಷಿಯಲ್ಲಿ ತೊಡಗಿರುವ ಮಹಿಳೆಯರ ಪ್ರಮಾಣ (ಶೇಕಡವಾರು) -PLFS ಸಮೀಕ್ಷೆಯ ಪ್ರಕಾರ(ಶೇ.)
ಲಿಂಗ ಅಸಮಾನತೆ ಮೂಲ ಕಾರಣ
ಇದನ್ನೂ ಬಗೆದು ನೋಡಿದರೆ ನಮ್ಮ ವ್ಯವಸ್ಥೆಯಲ್ಲಿ ಇರುವ ಲಿಂಗ ಅಸಮಾನತೆ ಕಣ್ಣಿಗೆ ರಾಚುತ್ತದೆ. ಬರೀ ಶೇ 13-14 ರಷ್ಟು ಮಹಿಳೆಯರು ಭೂಮಿ ಹೊಂದಿದ್ದಾರೆ. ಮಹಿಳೆಯರನ್ನು ರೈತರೆಂದು ಗುರುತಿಸುವುದೇ ಇಲ್ಲ. ಆಸ್ತಿ ಅನುಭವ, ಪತ್ತಿನ ಹಕ್ಕು ಇತ್ಯಾದಿಗಳೆಲ್ಲ ಅನೂಚಾನವಾಗಿ ಪುರುಷರ ಹಕ್ಕುಗಳಾಗೇ ಉಳಿದುಕೊಂಡು ಬಂದಿರುವುದರಿಂದ ಮಹಿಳೆಯರು ಕಡಿಮೆ ಮೌಲ್ಯದ ಚಟುವಟಿಕೆಗಳಿಗೆ ಸೀಮಿತರಾಗುತ್ತಾರೆ! ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾದರೂ ಸಿಗುವ ಪ್ರತಿಫಲ ಆರ್ಥಿಕ ನಲುವಾಗಿ ಪರಿವರ್ತನೆ ಆಗಿಲ್ಲ. ಆರ್ಥಿಕಕ್ಕೆ ಕೃಷಿಯ ಕೊಡುಗೆ 2017-18 ರಲ್ಲಿ ಶೇ 15.3 ರಷ್ಟು ಇದ್ದದ್ದು 2024-25 ರಲ್ಲಿ ಶೇ 14.4 ಕ್ಕೆ ಕುಸಿದಿದೆ.ಇನ್ನೊಂದು ದೃಷ್ಟಿಯಿಂದ ನೋಡಿದರೆ ಬೇರೆ ವಲಯಗಳ ಕೊಡುಗೆ ಹಿಗ್ಗಿದೆ ಎಂಬುದು ಗೊತ್ತಾಗುತ್ತದೆ. ಕೃಷಿಯಸ್ತ್ರೀಕರಣನಮ್ಮ ಸಮಾಜದಲ್ಲಿನ ಅಸಮಾನತೆಗಳನ್ನು ಗಟ್ಟಿಗೊಳಿಸಿದೆ ಎಂದು ಹೇಳಬೇಕಾಗುತ್ತದೆ. ಶ್ರಮ
ಹೊಸ ಸಾಧ್ಯತೆಗಳು
ಜಾಗತಿಕ ವ್ಯಾಪಾರ ಚಟುವಟಿಕಗಳು ಕೃಷಿಯಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ತೆರೆಯುತ್ತಿದೆ ಎಂಬುದೂ ನಿಜ. ಇಂಥ ಸಾಧ್ಯತೆಗಳು ತೆರೆದಾಗ ಅದು ಮಹಿಳೆಯರ ಅವಕಾಶಗಳನ್ನು ಹೆಚ್ಚಿಸುತ್ತದೆ ಎಂಬ ವಾದ ಇದೆ. ಕೋಷ್ಟಕ 3 ಅನ್ನು ನೋಡಿ. ಇದು ಮಹಿಳೆಯರು ಸಾಂಬಾರು ಪದಾರ್ಥಗಳು, ಚಹಾ,ಹೈನುಗಾರಿಕೆ, ಕೋಳಿ ಸಾಕಾಣಿಕೆ ಮತ್ತು ಮಾಂಸ, ಸಿರಿಧಾನ್ಯಗಳು, ಇತ್ಯಾದಿ ವ್ಯವಸಾಯಗಳಲ್ಲಿದೊಡ್ಡದಾಗಿ ತೊಡಗಿಸಿಕೊಂಡಿರುವುದನ್ನು ತೋರಿಸುತ್ತದೆ. ತಂತ್ರಜ್ಞಾನಗಳಲ್ಲಿ ಸಾಕಷ್ಟು ಪ್ರಗತಿ ಆಗಿದ್ದು,ಮೊಬೈಲ್ ಸಲಹೆ ಸೇವೆಗಳು,ನಿಖರ ಕೃಷಿ ಸಾಧನಗಳು, ಜ್ಞಾನ ಪಸರಣ ವ್ಯವಸ್ಥೆ, ತರಹೇವಾರಿ ಹಣಕಾಸು ಸೇವೆಗಳು, ಇತ್ಯಾದಿ ಇವತ್ತು ಲಭ್ಯವಿದ್ದು ಮಹಿಳೆಯರು ಈ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗುವ ಹಾಗೆ ಬೆಂಬಲ ನೀಡುವ ಪರಿಕರಗಳು ಇವೆ. ಶ್ರಮ
ಆದರೆ ಇದನ್ನು ಸಾಧ್ಯ ಮಾಡುವ ಸ್ಪಷ್ಟ ಯೋಜನೆಗಳು ಮತ್ತು ಅನುಷ್ಠಾನ ವ್ಯವಸ್ಥೆ ಬೇಕು. ಇದಕ್ಕೆ ದೃಢ ಸಂಕಲ್ಪ ಶಕ್ತಿ ಇರುವ ಸರ್ಕಾರ ಬೇಕು. ದೇಶದ ವಿವಿಧ ಭಾಗಗಳಲ್ಲಿ ಆಂಶಿಕವಾಗಿ ಇಂತಹ ಯೋಜನೆಗಳು ಸಮರ್ಪಕವಾಗಿ ಅನುಷ್ಟಾನಗೊಂಡು ಫಲ ನೀಡಿದ ಹಲವು ಉದಾಹರಣೆಗಳಿವೆ. ಇವುಗಳ ಪಾಠಗಳನ್ನು ಎಳೆ ಎಳೆಯಾಗಿ ಗ್ರಹಿಸಿ. ರಾಷ್ಟ್ರವ್ಯಾಪಿ ಯೋಜನೆ ರೂಪಿಸಿ ಯಶಸ್ಸುಗೊಳಿಸುವ ದೃಢ ನಿಲುವಿನ ಸರ್ಕಾರ ಬೇಕು. ಇದಲ್ಲದೆ ದೇಶದ ಆರ್ಥಿಕದಲ್ಲಿ ಮಹಿಳೆಯರ ಪಾತ್ರವನ್ನು ಗಟ್ಟಿಗೊಳಿಸಲು ಭೂ ಮತ್ತು ಕಾರ್ಮಿಕ ಕ್ಷೇತ್ರಗಳಲ್ಲಿ ಸುಧಾರಣೆಗಳ ತೀವ್ರ ಅವಶ್ಯಕತೆ ಇದೆ. ಶ್ರಮ

ಕೋಷ್ಟಕ 3- ರಫ್ತು ಸಾಧ್ಯತೆ ಹೆಚ್ಚಿಗೆ ಇರುವ ಬೆಳೆಗಳ ಕೆಲಸದಲ್ಲಿ ತೊಡಗಿರುವ ಪುರುಷ ಮತ್ತು ಮಹಿಳೆಯರ ಪ್ರಮಾಣ
ಮಹಿಳಾ ಕಾರ್ಮಿಕ ಪಡೆಯ ಭಾಗವಹಿಸುವಿಕೆ
ಆರ್ಥಿಕದಲ್ಲಿ ಮಹಿಳಾ ಶ್ರಮಿಕ ಪಡೆಯ ಭಾಗವಹಿಸುವಿಕೆ ದರ(FLFPR) ಎಂಬ ಒಂದು ಪರಿಕಲ್ಪನೆ ಅಥವಾ ವಿಶ್ಲೇಷಣೆ ಇದೆ. ಇಂತಹ ಭಾಗವಹಿಸುವಿಕೆಯಿಂದ ಲಿಂಗ ಅಸಮಾನತೆ ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಶ್ರಮ ಮಾರುಕಟ್ಟೆ ಹೆಚ್ಚು ಕ್ರಿಯಾತ್ಮಕ ಆಗುತ್ತದೆ ಎಂದು ವಾದಿಸಲಾಗುತ್ತದೆ. ಭಾರತದಲ್ಲಿ FLFPR 2011-12 ರಲ್ಲಿ ಶೇ 31.2 ಇದ್ದದ್ದು 2017-18 ರಲ್ಲಿ 23.3 ಕ್ಕೆ ಕುಸಿದು 2023-24 ಕ್ಕೆ 41.7 ಕ್ಕೆ ಏರಿದೆ. ಕೋಷ್ಟಕ 4 ನೋಡಿ. ಮೇಲ್ನೋಟಕ್ಕೆ ಇದು ಬಹಳ ಆಶಾದಾಯಕವಾಗಿ ಕಂಡರೂ ಆಳಕ್ಕೆ ಇಳಿದರೆ ಇದರ ನ್ಯೂನತೆಗಳು ಕಾಣತೊಡಗುತ್ತವೆ. ಮಹಿಳೆಯರ ವೇತನ ಮತ್ತು ಅವರಿಗೆ ಸಿಗುವ ಕೆಲಸ ಎರಡರಲ್ಲೂ ಟೊಳ್ಳುತನ ಇದೆ. ಶ್ರಮ

ಕೋಷ್ಟಕ 4- ಮಹಿಳಾ ಕೆಲಸಗಾರರ ಭಾಗವಹಿಸುವಿಕೆಯ ಪ್ರಮಾಣ (15 ವರ್ಷಕ್ಕೆ ಮೇಲ್ಪಟ್ಟ ಮಹಿಳಾ ಕೆಲಸಗಾರರು)
ಕಾರ್ಮಿಕರನ್ನು ಮೂರು ಪಂಗಡಗಳಲ್ಲಿ ವಿಂಗಡಿಸುವ ಪದ್ದತಿಯಿದೆ. ಸ್ವ-ಉದ್ಯೋಗಿಗಳು, ಸಂಬಳ ಕಾರ್ಮಿಕರು ಮತ್ತು ದಿನಗೂಲಿಗಳು. ಮಹಿಳಾ ಕಾರ್ಮಿಕರಿಗೂ ಇದೇ ಮಾನದಂಡಅನ್ವಯಿಸಲಾಗುತ್ತದೆ. ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ ಈ ಪಂಗಡಗಳ ವರಮಾನಗಳ ಮಾಹಿತಿ ಸಂಗ್ರಹಿಸುತ್ತದೆ. ಅದರ ಪ್ರಕಾರ FLFPR ಏರಿರುವ ಸಂದರ್ಭದಲ್ಲೇ ಮಹಿಳೆಯರ ಗಳಿಕೆ (ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ) ಕಡಿಮೆ ಆಗಿದೆ.ಇದರ ಅರ್ಥ ಹೆಚ್ಚು ಮಹಿಳೆಯರು ಕೆಲಸಕ್ಕೆ ಸೇರುತ್ತಾರೆ. ಆದರೆ ಅವರ ಗಳಿಕೆ ಬಹಳ ಕಡಿಮೆ.ಕೋಷ್ಟಕ 5 ನೋಡಿ. ಪ್ರಗತಿ ಆಗಲು ದುಡಿಮೆಗಾರರು ಕೃಷಿ ಕ್ಷೇತ್ರದಿಂದ ಹೊರಬಂದು ಇತರ ಚಟುವಟಿಕೆಗಳಲ್ಲಿ ತೊಡಗಬೇಕು ಎಂಬುದು ಒಂದು ಆರ್ಥಿಕ ತತ್ವ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆನಿಜ. ಆದರೆ ಅವರು ಕೃಷಿಯಿಂದ ಹೊರಬಂದಿಲ್ಲ. ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಮಹಿಳೆಯರ ಪ್ರಮಾಣ 2018-19 ರಲ್ಲಿ ಶೇ 71.1 ಇದ್ದದ್ದು 2023-24 ರಲ್ಲಿ ಶೇ 76.9 ಕ್ಕೆ ಏರಿದೆ.ಇದೇ ಸಮಯದಲ್ಲಿ ಕೃಷಿಯೇತರ ಚಟುವಟಿಕೆಗಳಲ್ಲಿ ಅವರ ಪ್ರಮಾಣ ಕುಸಿದಿದೆ.

ಕೋಷ್ಟಕ 5- ವಲಯವಾರು ಮಹಿಳೆಯರ ಭಾಗವಹಿಸುವಿಕೆ (ಕೃಷಿ ಮತ್ತು ಇತರೆ ವಲಯಗಳು)
ಮಹಿಳೆಯರ ದೊಡ್ಡ ಪ್ರಮಾಣದ ಕೆಲಸ ಕೌಟುಂಬಿಕ ಚಟುವಟಿಕೆಗಳಲ್ಲಿ ಆಗುತ್ತದೆ. ಅಧಿಕೃತ ಅಂಕಿ ಸಂಖ್ಯೆಗಳಲ್ಲಿ ಇದು ವೇತನಾರ್ಹ (ಪ್ರತಿಫಲದಾಯಕ) ಕೆಲಸವೆಂದು ಪರಿಗಣಿಸಲ್ಪಡುವುದಿಲ್ಲ. ಲೆಕ್ಕಕ್ಕೆ ಒಳಪಡುವ ಕೆಲಸದಲ್ಲೂ ಕೌಟುಂಬಿಕ ಉದ್ಯಮಗಳಲ್ಲಿ ಸಹಾಯಕಿ ಎಂದು ಪರಿಗಣಿಸಲ್ಪಡುವ ಒಂದು ವರ್ಗ ಇದೆ. ಇದೂ ವೇತನವಿಲ್ಲದ ಕೌಟುಂಬಿಕ ಕೆಲಸ.
ಆಟಕ್ಕುಂಟು ಲೆಕ್ಕಕ್ಕಿಲ್ಲ
ಗ್ರಾಮೀಣ ಪ್ರದೇಶಗಳಲ್ಲಿ 15 ವರ್ಷ ವಯಸ್ಸಿಗೆ ಮೇಲ್ಪಟ್ಟ ಕೌಟುಂಬಿಕ ಕರ್ತವ್ಯ ನಿರ್ವಹಿಸುವವರ ಪ್ರಮಾಣ ಶೇ 57.8 ರಿಂದ (2017-18) ಶೇ 35.7 ಕ್ಕೆ (2023-24) ಕುಸಿದಿದೆ. ಇದು 20ಅಂಶಗಳ ಕುಸಿತ. ಈ 20 ಅಂಶಗಳಲ್ಲಿ 10 ರಷ್ಟು ಅಂಶಗಳುಕೌಟುಂಬಿಕ ಉದ್ಯಮಗಳಲ್ಲಿ ಸಹಾಯಕಿ ಎಂಬ ವರ್ಗಕ್ಕೆ ಸೇರಿದರೆ ಇನ್ನೊಂದು ಶೇ 10 ರಷ್ಟು ಸ್ವ-ಉದ್ಯೋಗ ಮತ್ತು ಮಾಲಕತ್ವ ಎಂಬ ಗುಂಪಿಗೆ ಸೇರಿದ್ದಾರೆ. ಕೋಷ್ಟಕ 6 ನೋಡಿ. ಅಂದರೆ ವೇತನರಹಿತ ಕೌಟುಂಬಿಕ ಕೆಲಸ ಎಂಬುದು ಸ್ವ-ಉದ್ಯೋಗ ಎಂಬ ಗುಂಪಿಗೆ ಸೇರಿಕೊಂಡಿದೆ. ಇದು ವೇತನ ತರುವ ಕೆಲಸವಲ್ಲ ಎಂಬುದು ಗಮನಾರ್ಹ! ಹೀಗೆ ‘ಮಹಿಳೆಯರಕೆಲಸ ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತೆ!

ಕೋಷ್ಟಕ 6 ಮಹಿಳೆಯರ ಕೆಲಸಗಳ ಪ್ರಮಾಣ : ವೇತನ ಸಹಿತ ಮತ್ತು ವೇತನ ರಹಿತ
ಸ್ವ ಉದ್ಯೋಗ ಎಂಬುದರಿಂದ ಮಹಿಳೆಯರ ಆದಾಯ ಹೆಚ್ಚಿಲ್ಲ ಎಂಬುದೇ ಇದರ ತಾತ್ಪರ್ಯ. ಮಹಿಳೆಯರು ಕುಟುಂಬದಲ್ಲಿ ಮಾಡುವ ಕೆಲಸವನ್ನು ಬೇರೆ ಬೇರೆ ರೀತಿಯಲ್ಲಿ ವಿಂಗಡಿಸಿ ಅದನ್ನು ಉದ್ಯೋಗ ಎಂದು ತೋರಿಸುವ ಹುನ್ನಾರ ಇದು ಅಷ್ಟೇ. (ಕೋಷ್ಟಕ 7 ನೋಡಿ)

ಕೋಷ್ಟಕ 7- ಭಾರತದಲ್ಲಿ ಮಹಿಳಾ ಕೆಲಸಗಾರರ ನೈಜ ವೇತನ ಮತ್ತು ಗಳಿಕೆ (ರೂ.ಗಳಲ್ಲಿ)
ಲಿಂಗ ಸಮಾನತೆ ತರುವ ನಿಜವಾದ ಕಾಳಜಿ ಬರೀ ಬಾಯಿ ಮಾತಿನಿಂದ ಸಿದ್ದವಾಗುವುದಿಲ್ಲ. ಅದಕ್ಕೆ ಸ್ಪಷ್ಟ ಯೋಜನೆಗಳು ಇರಬೇಕು ಮತ್ತು ಅವುಗಳನ್ನುಅನುಷ್ಟಾನಕ್ಕೆ ತರುವ ದೃಢ ಸಂಕಲ್ಪ ಇರಬೇಕು. ಜನರನ್ನು ಸರಿಯಾದ ರೀತಿಯಲ್ಲಿ ಒಳಗೊಳ್ಳುವ ಕಾರ್ಯಕ್ರಮಗಳು ಇರಬೇಕು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರಕ್ಕೆ ಇಷ್ಟು ಸ್ಪಷ್ಟ ಕಾಳಜಿ ಮತ್ತು ಚಿಂತನೆ ಎರಡೂ ಇಲ್ಲವೆಂದು ಹೇಳೋಣವೇ?
(ಆಧಾರ: ‘ದಿ ಹಿಂದು’ ದಿನ ಪತ್ರಿಕೆಯಲ್ಲಿ ದಿನಾಂಕ 30.09.25 ಮತ್ತು 01.10.25 ರಂದು ಪ್ರಕಟವಾದ ಡಾಟಾ ಪಾಯಿಂಟ್ ದತ್ತಾಂಶಗಳು ಮತ್ತು ಅವುಗಳ ವಿಶ್ಲೇಷಣಾ ಲೇಖನಗಳು)
ಇದನ್ನೂ ನೋಡಿ: ಬಿಪಿಎಲ್ ರೇಷನ್ ಕಾರ್ಡ್ |”ರದ್ದಿಗೆ ಸಿದ್ದತೆ” ; ತಪ್ಪು ಯಾರದ್ದು?! Janashakthi Media
