ಜಾತಿಗಣತಿ ಸಮೀಕ್ಷೆಯಿಂದ ಮತಾಂತರ ಸಾಧ್ಯವೇ? : ಪ್ರಿಯಾಂಕ್ ಖರ್ಗೆ ಪ್ರಲ್ಹಾದ ಜೋಶಿಗೆ ಪ್ರಶ್ನೆ

ಬೆಂಗಳೂರು: “ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದ ಮತಾಂತರ ಸಾಧ್ಯವೇ? ನಿಮ್ಮ ಪ್ರಕಾರ ಹಿಂದೂ ಧರ್ಮ ಅಷ್ಟೋಂದು ದುರ್ಬಲವೇ?” ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಸಾಮಾಜಿಕ ಜಲತಾಣ ʻಫೇಸ್‌ಬುಕ್‌ʼ ಪೋಸ್ಟ್‌ ಮೂಲಕ ಪ್ರಶ್ನಿಸಿದ್ದಾರೆ.

ಸಮೀಕ್ಷೆಯು ಮತಾಂತರಕ್ಕೆ ಪ್ರೋತ್ಸಾಹಿಸುತ್ತದೆ ಎಂದಿರುವ ಜೋಶಿಯವರೇ, ‘ನಿಮ್ಮ ಪಕ್ಷದ ನಾಯಕರು ಕುಟುಂಬ ಸಮೇತ ಮತಾಂತರಗೊಂಡಿದ್ದಾರೆ ಎಂಬುದಾಗಿ ನಿಮ್ಮದೇ ಪಕ್ಷದವರು ತಿಳಿಸಿದ್ದಾರೆ. ಅವರ ಮತಾಂತರಕ್ಕೆ ಪ್ರೇರಣೆಯಾದ ಸಂಗತಿ ಯಾವುದು? ನಿಮ್ಮ ಪಕ್ಷದವರಿಗಾಗಿ ‘ಘರ್‌ ವಾಪಸಿ’ ಕಾರ್ಯಕ್ರಮ ಹಮ್ಮಿಕೊಳ್ಳುವಿರಾ’ ಎಂದು ಕೇಳಿದ್ದಾರೆ.

ಇದನ್ನೂ ಓದಿ: ನವದೆಹಲಿ | ಎನ್‌ಸಿಆರ್‌ಬಿ ವರದಿ ಪ್ರಕಟ 2023ರಲ್ಲಿ ಬಾಲ್ಯ ವಿವಾಹ 6 ಪಟ್ಟು ಹೆಚ್ಚಳ : 17,000 ಬಾಲಕಿಯರ ಅಪಹರಣ

ಹಿಂದೂ ಧರ್ಮ ಸಮೀಕ್ಷೆಯಿಂದ ಮತಾಂತರವಾಗುವಷ್ಟು ದುರ್ಬಲವೇ ಎಂದು ಪ್ರಶ್ನಿಸಿರುವ ಪ್ರಿಯಾಂಕ್‌, ‘ನಿಮಗೆ ತಿಳಿದಿರಲಿ, ಜನರಿಗೆ ಬೇಕಿರುವುದು ಮ್ಯಾಜಿಕ್‌ ಮಾತುಗಳಲ್ಲ, ಲಾಜಿಕ್‌ ಮಾತುಗಳು’ ಎಂದು ತಿವಿದಿದ್ದಾರೆ.

‘ಜನಗಣತಿಯು ಹಿಂದೂಗಳನ್ನು ಮತಾಂತರಕ್ಕೆ ಪ್ರೋತ್ಸಾಹಿಸುತ್ತದೆ’ ಎಂದು ಜೋಶಿಯವರು ಹೇಳಿರುವುದಾಗಿ ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಅದೇ ರೀತಿ, ‘ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷರೇ ಕುಟುಂಬ ಸಮೇತ ಹಿಂದೂ ಧರ್ಮದಿಂದ ಮತಾಂತರಗೊಂಡಿದ್ದಾರೆ’ ಎಂಬುದಾಗಿ ಬಿಜೆಪಿ ನಾಯಕರೇ ಹೇಳಿರುವುದಾಗಿ 2021ರಲ್ಲಿ ವರದಿಯಾಗಿತ್ತು. ಈ ಎರಡನ್ನೂ ಉಲ್ಲೇಖಿಸಿರುವ ಪ್ರಿಯಾಂಕ್‌, ಜೋಶಿಯವರಿಗೆ ಕುಟುಕಿದ್ದಾರೆ.

ಇದನ್ನೂ ನೋಡಿ: ಬುರುಡೆ ಹಾಡು| ರಾಶಿಯಿಂದ ಬುರುಡೆಯೊಂದ ತಂದನಾತ| ಹೂತಿರುವೆ ನೂರಾರು ಎಂದನಾತಾ |Janashakthi Media #viralsong

Donate Janashakthi Media

Leave a Reply

Your email address will not be published. Required fields are marked *