ಧರ್ಮಸ್ಥಳ ಪ್ರಕರಣ: ಪಿಡಿಒ ಹಾಗೂ ಸಿಬ್ಬಂದಿಗಳ ವಿಚಾರಣೆ

ರ್ಮಸ್ಥಳ: ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳು ನಡೆದಿವೆ ಎಂಬ ಆರೋಪದ ಮೇಲೆ ರಚನೆಯಾದ ವಿಶೇಷ ತನಿಖಾ ತಂಡ, ಸಾಕ್ಷಿ ದೂರುದಾರ ಚಿನ್ನಯ್ಯನನ್ನು ಬಂಧಿಸಿದ ಬಳಿಕ ಬಂಗ್ಲೆ ಗುಡ್ಡದಲ್ಲಿ ವಿಠಲ ಗೌಡ ನೀಡಿದ ಮಾಹಿತಿಯ ಆಧಾರದ ಮೇಲೆ ಸ್ಥಳ ಮಹಜರು ನಡೆಸಿ 7 ಅಸ್ತಿಪಂಜರದ ಅವಶೇಷಗಳನ್ನು ಸಂಗ್ರಹಿಸಿತ್ತು. ಪ್ರಕರಣ

ಈ ಮಹತ್ವದ ಬೆಳವಣಿಗೆ ಬಳಿಕ ಸೈಲೆಂಟ್‌ ಆಗಿದ್ದ ಎಸ್‌ಐಟಿ ಇದೀಗ ಧರ್ಮಸ್ಥಳ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಸಿಬ್ಬಂದಿಗಳನ್ನು ವಿಚಾರಣೆಗೆ ಕರೆಸುವ ಮೂಲಕ ಮತ್ತೊಂದು ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ನವದೆಹಲಿ | ಎನ್‌ಸಿಆರ್‌ಬಿ ವರದಿ ಪ್ರಕಟ 2023ರಲ್ಲಿ ಬಾಲ್ಯ ವಿವಾಹ 6 ಪಟ್ಟು ಹೆಚ್ಚಳ : 17,000 ಬಾಲಕಿಯರ ಅಪಹರಣ

ಬುರುಡೆ ಗ್ಯಾಂಗ್‌ ಎಂದೇ ಕರೆಸಿಕೊಂಡು ಪ್ರಕರಣಕ್ಕೆ ಟ್ವಿಸ್ಟ್‌ ಕೊಟ್ಟ ವಿಠಲ ಗೌಡ ಹಾಗೂ ಗಿರೀಶ್‌ ಮಟ್ಟಣ್ಣವರ್‌ ಎಸ್‌ಐಟಿ ಅಧಿಕಾರಿಗಳಿಗೆ ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಕ್ರಮ ಹೆಣ ಹೂಳಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪದ ಕಾರಣ ಎಸ್‌ಐಟಿ ಅಧಿಕಾರಿಗಳು ಧರ್ಮಸ್ಥಳ ಗ್ರಾಮ ಪಂಚಾಯಿತಿಯಲ್ಲಿ 1996ರಿಂದ 2014ರವರೆಗೆ ಕೆಲಸ ನಿರ್ವಹಿಸಿದ ಪಿಡಿಒ ಹಾಗೂ ಸಿಬ್ಬಂದಿಗಳನ್ನು ವಿಚಾರಣೆಗೆ ಕರೆಸಿದ್ದಾರೆ.

ಈ ವಿಚಾರಣೆಯಲ್ಲಿ 1996ರಿಂದ 2014ರವರೆಗೆ ಧರ್ಮಸ್ಥಳದಲ್ಲಿ ಎಷ್ಟು ಶವಗಳನ್ನು ಹೂತುಹಾಕಲಾಗಿದೆ? ಅವುಗಳಲ್ಲಿ ನಿಯಮಗಳನ್ನು ಪಾಲಿಸಿ ಹೆಣಗಳೆಷ್ಟು? ಕೆಲ ಶವಗಳನ್ನು ಗುರುತು ಪತ್ತೆಹಚ್ಚಲು ಸಮಯ ನೀಡದೇ ಹೂತು ಹಾಕಲಾಗಿದೆಯೇ? ಎಂಬ ಪ್ರಶ್ನೆಗಳನ್ನು ಪಿಡಿಒ ಹಾಗೂ ಸಿಬ್ಬಂದಿಗಳಿಗೆ ಕೇಳಲಾಗಲಿದೆ.

ಇದನ್ನೂ ನೋಡಿ: ಗಾಂಧೀಜಿಯವರ ಐದು ಮುಖ್ಯ ಚಿಂತನೆಗಳು ಮುಂದೆ ಆರೆಸ್ಸೆಸ್ ಸಿದ್ಧಾಂತದ ಬೆಳವಣಿಗೆಗೆ ಪೂರಕವಾಗಿದ್ದವೇ? Janashakthi Media

Donate Janashakthi Media

Leave a Reply

Your email address will not be published. Required fields are marked *