ಭೀಮಾ ನದಿಯ ಪ್ರವಾಹ: ನಲುಗಿಹೋದ 117 ಗ್ರಾಮಗಳು; ಎಲ್ಲಾ ಬೆಳೆಗಳು ನೀರು ಪಾಲು

ಲಬುರಗಿ: ಜಿಲ್ಲೆಯ ಮೂರು ತಾಲೂಕಿನ ಒಟ್ಟು 117 ಗ್ರಾಮಗಳು ಕಳೆದ 10 ದಿನಗಳಿಂದ ಉಂಟಾದ ಭೀಮಾ ನದಿಯ ಪ್ರವಾಹದಿಂದ ನಲುಗಿ ಹೋಗಿವೆ. 58 ಕಾಳಜಿ ಕೇಂದ್ರಗಳಲ್ಲಿ 7,104 ಸಂತ್ರಸ್ತರಿಗೆ ಆಶ್ರಯ ನೀಡಲಾಗಿದ್ದು, ಅಲ್ಲಿಂದ ತಮ್ಮ ಮನೆಗಳಿಗೆ ಮರಳಿದ ಜನ ಆಘಾತಕ್ಕೀಡಾಗಿದ್ದಾರೆ. ಇದೀಗ ಪ್ರವಾಹ ಕಡಿಮೆಯಾದ ಹಿನ್ನಲೆ ಸಂತ್ರಸ್ಥರು ಮನೆಗೆ ಬಂದು ಅಳಿದುಳಿದ ವಸ್ತುಗಳನ್ನು ರಕ್ಷಿಸಿಕೊಳ್ಳುತ್ತಿದ್ದಾರೆ.

ಅದೇ ರೀತಿ ಕಲಬುರಗಿ ಜಿಲ್ಲೆಯ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಎಲ್ಲಾ ಬೆಳೆಗಳು ಸಂಪೂರ್ಣ ನೀರು ಪಾಲಾಗಿವೆ. ಅದರಲ್ಲಿಯೂ ಇನ್ನೇನು 15 ದಿನ‌ ಕಳೆದರೆ ಕೈಗೆ ಬರಲಿದ್ದ ಹತ್ತಿ ಕೂಡಾ ಭೀಮಾ‌ನದಿಯ ಪಾಲಾಗಿದೆ. ಹೀಗಾಗಿ ಸರ್ಕಾರ ಪರಿಹಾರ ಕೊಡಲಿಲ್ಲ ಎಂದರೆ ನೇಣು ಹಾಕಿಕೊಳ್ಳುವುದು ಬಿಟ್ಟರೆ ಬೇರೆ ದಾರಿಯಿಲ್ಲ ಎಂದು ರೈತರು ಕಣ್ಣಿರು ಹಾಕುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು |ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನ ಕಳೆದ ಬಳಿಕವೂ ಸಂಘದ ಸಾಧನೆ ಶೂನ್ಯ ಎಂದ ಸಚಿವ ಪ್ರಯಾಂಕ್ ಖರ್ಗೆ

ಭೀಮಾ ನದಿಯ ಪ್ರವಾಹಕ್ಕೆ ಜೆಸ್ಕಾಂ ಟ್ರಾನ್ಸಫಾರ್ಮರ್, ಎಲೆಕ್ಟ್ರಿಕ್ ಪೋಲ್ಗಳು ಸಹ ನೀರಿನಲ್ಲಿ‌ ಕೊಚ್ಚಿ ಹೋಗಿದ್ದು, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭೀಮಾ ಹಾಗೂ ಕಾಗಿಣಾ ನದಿ ಪ್ರವಾಹದಿಂದ 270 ಟ್ರಾನಫಾರ್ಮರ್, 600 ಕ್ಕೂ ಹೆಚ್ಚು ಪೋಲ್ಗಳು ಹಾಳಾಗಿರುವುದು ಪ್ರಾಥಮಿಕ ಪರಿಶೀಲನೆಯಲ್ಲಿ ಕಂಡು ಬಂದಿದ್ದು, ಈ ಮೂಲಕ ಜೆಸ್ಕಾಂ ಇಲಾಖೆಗೂ ಸಹ ಕೋಟ್ಯಂತರ ರೂಪಾಯಿ ಹಣ ನಷ್ಟವಾಗಿದೆ.

ಭೀಮಾ ನದಿ ಪ್ರವಾಹದ ವಿಚಾರವಾಗಿ 2500 ಕೋಟಿ ರೂ. ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಆದರೆ, ಸದ್ಯ ಸೂರು ಕಳೆದುಕೊಂಡವರಿಗೆ ಮನೆ ಹಾಗೂ ದವಸ ಧಾನ್ಯ ಕಳೆದುಕೊಂಡವರಿಗೆ ತುತ್ತು ಅನ್ನ ಕೊಡುವ ಕೆಲಸ ಮೊದಲು ಮಾಡಬೇಕಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಈಗ ಸ್ವಲ್ಪ ಮಟ್ಟಿಗೆ ಹಗುರವಾಗಿದ್ದೂ, ಭೀಮಾ ನದಿಯ ಅಬ್ಬರವೂ ಕಡಿಮೆಯಾಗಿದೆ. ಆದರೂ ವಿಜಯಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ.

ಇದನ್ನೂ ಓದಿ: ಮೈಸೂರು ದಸರಾ | ದರ್ಗಾಕ್ಕೆ ಭೇಟಿ ನೀಡುತ್ತವೆ ಆನೆಗಳು! ಏನಿದರ ಹಿನ್ನಲೆ? Janashakthi Media #MysuruDasara

Donate Janashakthi Media

Leave a Reply

Your email address will not be published. Required fields are marked *