ಮುಂಬೈ | ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 2 ಸಾವಿರ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರ

ಮುಂಬೈ: ಮಕ್ಕಳ ಅಭಿವೃದ್ಧಿ ಸೇವೆಗಳು (ICDS) ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ  ದೀಪಾವಳಿ ಉಡುಗೊರೆಯಾಗಿ ₹2 ಸಾವಿರ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.  ಮುಂಬೈ

ಇದನ್ನೂ ಓದಿ : ಧಾರವಾಡ| ವಿವಿಧ ಹುದ್ದೆಗಳ ನೇಮಕಾತಿಗೆ ಎಕೆಎಸ್ಎಸ್ಎ ಪ್ರತಿಭಟನೆ

ಈ ವಿಷಯವನ್ನು ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಸಚಿವೆ ಅದಿತಿ ತಟ್ಕರೆ ಶುಕ್ರವಾರ ತಿಳಿಸಿದ್ದಾರೆ. ‘ಇದಕ್ಕಾಗಿ ಸರ್ಕಾರವು ₹40.61 ಕೋಟಿಯನ್ನು ಮಂಜೂರು ಮಾಡಿದೆ. ಈ ಕುರಿತು ಸರ್ಕಾರದ ನಿರ್ಣಯವು ಗುರುವಾರಕ್ಕೆ ಅನ್ವಯಿಸುವಂತೆ ಜಾರಿಗೊಳಿಸಲಾಗಿದೆ’ ಎಂದಿದ್ದಾರೆ.

‘ಮಹಿಳೆ ಮತ್ತು ಮಕ್ಕಳ ಆರೈಕೆ, ಪೋಷಣೆ ಮತ್ತು ಸರ್ವಾಂಗೀಣ ಅಭಿವೃದ್ಧಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕೊಡುಗೆ ದೊಡ್ಡದು. ಅನನ್ಯ ಸೇವೆಗಾಗಿ ಮತ್ತು ಹಬ್ಬದ ಸಂದರ್ಭದಲ್ಲಿ ಅವರ ಸಂಭ್ರಮ ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಸರ್ಕಾರವು ’ಭಾವು ಬೀಜ ಉಡುಗೊರೆ’ ನೀಡಲು ನಿರ್ಧರಿಸಿದೆ’ ಎಂದಿದ್ದಾರೆ.

‘ಪ್ರತಿಯೊಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಮ್ಮ ಸಮಾಜದ ಸಾಮರ್ಥ್ಯ. ಐಸಿಡಿಎಸ್‌ ಆಯುಕ್ತರ ಮೂಲಕ ಫಲಾನುಭವಿಗಳ ಖಾತೆಗಳಿಗೆ ಅತಿ ಶೀಘ್ರದಲ್ಲಿ ಹಣ ಹಾಕಲಾಗುವುದು. ಅದರಿಂದ ಅವರ ದೀಪಾವಳಿ ಇನ್ನಷ್ಟು ಪ್ರಕಾಶಮಾನವಾಗಲಿ ಎಂಬುದು ಸರ್ಕಾರದ ಉದ್ದೇಶ’ ಎಂದು ಸಚಿವೆ ಅದಿತಿ ಹೇಳಿದ್ದಾರೆ.

ಇದನ್ನೂ ನೋಡಿ : ಸಾಮಾಜಿಕ, ಆರ್ಥಿಕ ಸಮೀಕ್ಷೆ (ಜಾತಿ ಗಣತಿ)‌ ಜಾರಿ: ಮು.ಮಂ. ಸಿದ್ದರಾಮಯ್ಯ ಕೊಟ್ಟ ಕುದುರೆ ಏರುವರೇ? Janashakthi Media

Donate Janashakthi Media

Leave a Reply

Your email address will not be published. Required fields are marked *