ಸುಭಾಷಿಣಿ ಅಲಿ ಅವರು ದೇಶದ ಅತಿ ದೊಡ್ಡ ಮಹಿಳಾ ಸಂಘಟನೆ AIDWA (All India Democratic Women’s Association) ದ ಸಕ್ರಿಯ ಕಾರ್ಯಕರ್ತರಾಗಿದ್ದು ಅದರ ಅಖಿಲ ಭಾರತ ಅಧ್ಯಕ್ಷರಾಗಿದ್ದು, ದೇಶದ ಮಹಿಳೆಯರ ಸಮಸ್ಯೆಗಳ ಆಳವಾದ ಅರಿವು ಇರುವ ಮತ್ತು ಅವುಗಳ ಪರಿಹಾರಕ್ಕೆ ಸಮರಧೀರ ಹೋರಾಟಗಳನ್ನು ಸಂಘಟಿಸಿದವರು. ಅವರು CPI(M) (ಭಾರತ ಕಮ್ಯುನಿಸ್ಟ್ ಪಕ್ಷ – ಮಾರ್ಕ್ಸ್ ವಾದಿ) ನ ಹಿರಿಯ ನಾಯಕರಲ್ಲೊಬ್ಬರು. ಅವರು ದೀರ್ಘಕಾಲ ಪಕ್ಷದ ಕೇಂದ್ರ ಸಮಿತಿ ಸದಸ್ಯರು ಮತ್ತು ಎರಡನೆಯ ಮಹಿಳಾ ಪೊಲಿಟ್ ಬ್ಯುರೋ ಸದಸ್ಯರೂ ಆಗಿದ್ದರು. ಕಾನಪುರ ಕ್ಷೇತ್ರದಿಂದ 1989ರ ಚುನಾವಣೆಯಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯೂ ಆಗಿದ್ದರು. ಸಮಾವೇಶ
ಅವರು ಆಜಾದ್ ಹಿಂದ್ ಫೌಜ್ ನಲ್ಲಿ ಸೇವೆ ಸಲ್ಲಿಸಿದ್ದ ಕರ್ನಲ್ ಶಾ ನವಾಝ್ ಮತ್ತು ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಅವರ ಪುತ್ರಿ. ಮಧ್ರಾಸ್, ಯು.ಎಸ್ ಮತ್ತು ಕಾನಪುರದಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿದ ಸುಭಾಷಿಣಿ ಯು.ಎಸ್ ನಲ್ಲಿ ಓದುತ್ತಿದ್ದಾಗ 1960ರ ದಶಕದ ಕೊನೆಯ ಅವಧಿಯಲ್ಲಿ ಅಲ್ಲಿ ಭುಗಿಲೆದ್ದ ವಿಯೇಟ್ನಾಂ ಯುದ್ಧ-ವಿರೋಧಿ ಚಳುವಳಿಯ ಸಮರಶೀಲ ವಿಭಾಗದಿಂದ ಪ್ರಭಾವಿತರಾಗಿ ಮಾರ್ಕ್ಸ್ ವಾದದತ್ತ ಅಕರ್ಷಿತರಾದರು. ಸಮಾವೇಶ
ಇದನ್ನೂ ಓದಿ: ದೇವನಹಳ್ಳಿ | ಪೌರ ಕಾರ್ಮಿಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ – ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ್
ಯು.ಎಸ್ ನಿಂದ ಬಂದ ಕೂಡಲೇ ಅಕಾಡೆಮಿಕ್ ಅಥವಾ ಉದ್ಯೋಗದ ಹಾದಿಯನ್ನು ನಿರಾಕರಿಸಿ, ಕಮ್ಯುನಿಸ್ಟ್ ಚಳುವಳಿಯ ಸಕ್ರಿಯ ಸದಸ್ಯರಾಗಲು ಬಯಸಿದರು. 1969ರಲ್ಲಿ ಸಿಪಿಐ(ಎಂ) ಸದಸ್ಯರು ಮತ್ತು ಸಕ್ರಿಯ ಕಾರ್ಯಕರ್ತರಾದರು. ಅವರು ಹಲವು ವರ್ಷಗಳ ಕಾಲ ಕಾನಪುರದಲ್ಲೇ ಟ್ರೇಡ್ ಯೂನಿಯನ್ ಕಾರ್ಯಕರ್ತರೂ ನಾಯಕರೂ ಆಗಿದ್ದರು. ಮುಂದೆ ಪಕ್ಷದ ಮತ್ತು ಮಹಿಳಾ ಚಳುವಳಿಯ ಉತ್ತರ ಪ್ರದೇಶ ರಾಜ್ಯ ಮತ್ತು ಅಖಿಲ ಭಾರತ ನಾಯಕರೂ ಆಗಿ ಬೆಳೆದರು.
ಮಹಿಳಾ ಸಮಸ್ಯೆಗಳ ಹೋರಾಟದಲ್ಲಿ ಮುಂಚೂಣಿಯ ಪಾತ್ರ ವಹಿಸುತ್ತಿದ್ದ ಅವರು ಇತ್ತೀಚೆಗೆ ಗುಜರಾತಿನ ಬಿಲ್ಕೀಸ್ ಬಾನು ಅತ್ಯಾಚಾರದ ಹೇಯ ಪ್ರಕರಣದಲ್ಲಿ ಅಪರಾಧಿಗಳಾಗಿ ಶಿಕ್ಷಿತರನ್ನು ಜೈಲುವಾಸದಿಂದ ಬಿಡುಗಡೆ ಮಾಡಿದ್ದರ ವಿರುದ್ಧ ಸುಪ್ರೀಂ ಕೋರ್ಟಿಗೆ ಅಹವಾಲು ಸಲ್ಲಿಸಿ ಅದನ್ನು ರದ್ದು ಪಡಿಸಿದ ಮೂವರು ಪ್ರಸಿದ್ಧ ಮಹಿಳಾ ನಾಯಕರಲ್ಲಿ ಒಬ್ಬರಾಗಿದ್ದರು. ಸುಭಾಷಿಣಿ ಕರ್ನಾಟಕಕ್ಕೆ ಹೊಸಬರಲ್ಲ. ಇತ್ತೀಚೆಗಿನ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ ಸೇರಿದಂತೆ ಹಲವು ಚಳುವಳಿಗಳಲ್ಲಿ ನಾಯಕತ್ವ ನೀಡಿ ಭಾಗವಹಿಸಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಬಂಧನ, ಶಿಕ್ಷೆಯಾಗಬೇಕೆಂದು ಒತ್ತಾಯಿಸಿ ಜಯಶಾಲಿಯಾದ ಪ್ರಸಿದ್ಧ ‘ಹಾಸನ ಚಲೋ’ ಚಳುವಳಿಯ ನಾಯಕತ್ವ ವಹಿಸಿದ್ದರು.
ಅವರು ಉತ್ತಮ ಲೇಖಕರೂ, ಕಲಾವಿದರೂ ಆಗಿದ್ದಾರೆ. ಅವರ ಆಗಿನ ಪತಿ ಮುಜಫ್ಫರ್ ಅಲಿ ನಿರ್ದೇಶಿಸಿದ್ದ ಪ್ರಸಿದ್ಧ ಚಿತ್ರ ‘ಉಮರಾವ್ ಜಾನ್’ ಗೆ ವಸ್ತ್ರವಿನ್ಯಾಸ ಮಾಡಿದ್ದರು. ‘ಅಶೋಕ’ ಮತ್ತು ‘ಅಮು’ ಸಿನಿಮಾಗಳಲ್ಲಿ ನಟಿಸಿದ್ದರು ಕೂಡಾ. ಅವರ ಮಗ ಶಾದ್ ಅಲಿ ಸಹ ಸಿನಿಮಾ ನಿರ್ದೇಶಕರಾಗಿದ್ದಾರೆ.
ಇದನ್ನೂ ನೋಡಿ: ಧರ್ಮಸ್ಥಳ ಪ್ರಕರಣ | ಅಸಹಜ ಸಾವುಗಳಿಗೂ, ಭೂ ಕಬಳಿಕೆ, ಮೈಕ್ರೋಫೈನಾನ್ಸ್ಗೂ ಲಿಂಕ್ ಇದೆಯಾ?
