ತುಮಕೂರು| ಕಾಂಗ್ರೆಸ್ ಭವನ ನಿರ್ಮಾಣ: ಜಾಗ ವಿವಾದ ಮುಂದುವರಿಕೆ

ತುಮಕೂರು: ಕೊಪ್ಪಳ, ಬಾದಾಮಿ ಮತ್ತು ಪುತ್ತೂರಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸೂಕ್ತ ಜಾಗವನ್ನು ಕಾಂಗ್ರೆಸ್​​ ಭವನ ಟ್ರಸ್ಟ್​ಗೆ ಮಂಜೂರು ಮಾಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಆದರೆ ಇತ್ತ ತುಮಕೂರಿನಲ್ಲಿ ಕಾಂಗ್ರೆಸ್ ಭವನ ಜಾಗ ವಿವಾದ ಮುಂದುವರಿದಿದೆ.

ನಿಯಮ ಗಾಳಿಗೆ ತೂರಿ 2 ಎಕರೆ ಜಮೀನು ಮಂಜೂರು ಆರೋಪ ಕೇಳಿಬಂದಿದ್ದು, ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಇಡಿ ಅಧಿಕಾರಿಗಳಿಗೆ ಸಾಮಾಜಿಕ ಹೋರಾಟಗಾರ ಬಸವರಾಜು ದೂರು ನೀಡಿದ್ದಾರೆ. ತುಮಕೂರು

ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುವ ಮರುಳೂರು ದಿಣ್ಣೆಯಲ್ಲಿರುವ 87/1 ಮತ್ತು 87/2‌ ಸರ್ವೆನಂ ಎರಡು ಎಕರೆ ವಿವಾದಿತ ಜಾಗ ಕಾಂಗ್ರೆಸ್ ಭವನ ಟ್ರಸ್ಟ್​ಗೆ ವಿವಾದಿತ ಜಮೀನು ಪರಭಾರೆ ಮಾಡಲಾಗಿದೆ. ತುಮಕೂರು

ಇದನ್ನೂ ಓದಿ: ಮಳೆಗಾಲ ಮುಗಿದ ತಕ್ಷಣ ತುಂಗಭದ್ರಾ ಜಲಾಶಯದ ಗೇಟ್ ಗಳ ಬದಲಾವಣೆ: ಸಿಎಂ ಸಿದ್ದರಾಮಯ್ಯ

ಸಿಎಂ ಸೇರಿ ಹಲವರ ವಿರುದ್ಧ ದೂರು

ಸಿಎಂ ಸಿದ್ದರಾಮಯ್ಯ, ಸಚಿವರಾದ ಜಿ.ಪರಮೇಶ್ವರ್, ಭೈರತಿ ಸುರೇಶ್, ಸಬ್ ರಿಜಿಸ್ಟ್ರಾರ್ ನಂಜೇಶ್, ಪಾಲಿಕೆ ಕಮಿಷನರ್ ಅಶ್ವಿಜಾ ವಿರುದ್ಧ ಸಾಮಾಜಿಕ ಹೋರಾಟಗಾರ ಬಸವರಾಜು ದೂರು ನೀಡಿದ್ದಾರೆ.

25 ಕೋಟಿ ರೂ ಮೌಲ್ಯದ 2 ಎಕರೆ ಜಮೀನು 17 ಲಕ್ಷ ರೂ.ಗೆ ಪರಭಾರೆ ಮಾಡಲಾಗಿದೆ. ಆ ಮೂಲಕ ಜಮೀನು ಪರಭಾರೆಯಲ್ಲಿ ಸರ್ಕಾರದಿಂದ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ. ನೋಂದಣಿ ಮೌಲ್ಯವನ್ನು ಅಪಮೌಲ್ಯ ಮಾಡಿ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟವಾಗಿದೆ. ಪ್ರಕರಣವನ್ನು ತನಿಖೆ ನಡೆಸುವಂತೆ ದಾಖಲೆ ಸಮೇತ ದೂರು ನೀಡಿದ್ದಾರೆ.

ಈಗಾಗಲೇ ಸಂಪುಟ ಕೊಪ್ಪಳ, ಬಾದಾಮಿ ಮತ್ತು ಪುತ್ತೂರಿಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಅಸ್ತು ಅಂದಿದೆ. ಕೊಪ್ಪಳದಲ್ಲಿ 12 ಎಕರೆ 28 ಗುಂಟೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಬಡಾವಣೆಯಲ್ಲಿ 3749 ಚ.ಮೀ. ವಿಸ್ತೀರ್ಣದ ನಾಗರಿಕ ಸೌಲಭ್ಯದ ನಿವೇಶನ, ಇನ್ನು ಬಾದಾಮಿ ಪಟ್ಟದಲ್ಲಿ 613 ಚ. ಮೀಟರ್​ ವಿಸ್ತೀರ್ಣದ ನಾಗರಿಕ ಸೌಲಭ್ಯದ ನಿವೇಶನ, ಅದೇ ರೀತಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಸಬಾ ಗ್ರಾಮದಲ್ಲಿ 8 ಸೆಂಟ್​ ಜಾಗವನ್ನು ಕಾಂಗ್ರೆಸ್​ ಭವನ ಟ್ರಸ್ಟ್​ಗೆ ನೀಡಲು ಸಂಪುಟ್ಟ ಒಪ್ಪಿಗೆ ಸೂಚಿಸಿದೆ.

ಇದನ್ನೂ ನೋಡಿ: ಧರ್ಮಸ್ಥಳದ ನಿಗೂಢಗಳು | ಚಿಕ್ಕ ಕೆಂಪಮ್ಮ ನೀಡಿದ ದೂರಿಗೂ ಸೌಜನ್ಯ ಪ್ರಕರಣಕ್ಕೂ ಲಿಂಕ್‌ !!Janashakthi Media

Donate Janashakthi Media

Leave a Reply

Your email address will not be published. Required fields are marked *