ಗದಗ: ಗುರುವಾರ ನಗರದ ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಗದಗ ಜಿಲ್ಲಾ ಘಟಕದ ವತಿಯಿಂದ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ದಿನ ಆಚರಿಸಲಾಯಿತು.
‘ಸಂಕಷ್ಟದಲ್ಲಿರುವ ಪತ್ರಿಕಾ ವಿತರಕರಿಗೆ ಸಹಾಯಧನ, ಜೀವವಿಮೆ, ಬಡ್ಡಿರಹಿತ ಸಾಲ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಸರ್ಕಾರ ನಮ್ಮ ನೆರವಿಗೆ ಬರಬೇಕುʼ ಎಂದು ಪತ್ರಿಕಾ ವಿತರಕರು ಆಗ್ರಹಿಸಿದರು.
ಇದನ್ನೂ ಓದಿ: ಗಜೇಂದ್ರಗಡ |ಗೋಗೇರಿ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಸಿ.ಸಿ ರಸ್ತೆ, ಚರಂಡಿ ವ್ಯವಸ್ಥೆ, ಹಾಳು ನಿವಾಸಿಗಳ ಪರದಾಟ
ಸರ್ಕಾರ ಪತ್ರಿಕಾ ವಿತರಕರ ಹಿತ ಕಾಯಲು ದೃಢ ನಿಲುವು ತಾಳಬೇಕು’ ‘ನಾವು ಅನಾರೋಗ್ಯಕ್ಕೆ ಒಳಗಾದರೂ ಪತ್ರಿಕೆ ಹಂಚುವುದು ನಿಲ್ಲದು. ಆದರೆ ಅದಕ್ಕೆ ತಕ್ಕ ಪ್ರತಿಫಲ ಮಾತ್ರ ದೊರೆಯದಿರುವುದು ಬೇಸರ ತಂದಿದೆ. ಎಂದು ಆಗ್ರಹಿಸಿದರು.
ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಕುದರಿಮೋತಿ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೀರಬಸಯ್ಯ ವಿರಕ್ತಮಠ, ಜಿಲ್ಲಾ ಉಪಾಧ್ಯಕ್ಷ ಈರಣ್ಣ ಮಳೇಕರ, ಕಾರ್ಯದರ್ಶಿ ಮಂಜುನಾಥ ಕಬನೂರ, ಸಹ ಕಾರ್ಯದರ್ಶಿ ದತ್ತಾತ್ರೇಯ ಮುಂಡರಗಿ, ಖಜಾಂಚಿ ವಿನಾಯಕ ಬದಿ, ಹಿರಿಯ ಸಲಹೆಗಾರ ಕೆ.ಎಸ್.ಹಿರೇಮಠ, ಪ್ರಮೋದ ಜೋಶಿ, ಸಂಚಾಲಕ ಗಂಗಾಧರ ಮಡ್ಡಿ, ಗಣೇಶ ಶಿರಹಟ್ಟಿ, ಶಂಕರಗುರು ಕಂದಗಲ್ಲ, ಗುರುರಾಜ ಕಲಾಲ, ದಶರಥ ಹೊನ್ನಳ್ಳಿ, ಕಿರಣ ಮಡ್ಡಿ, ಮಾರುತಿ ಮುಂಡರಗಿ ಸೇರಿದಂತೆ ಎಲ್ಲ ಪತ್ರಿಕಾ ವಿತರಕರು ಭಾಗವಹಿಸಿದ್ದರು.
ಇದನ್ನೂ ನೋಡಿ: “ನಮ್ಮ ಹೆಸರಿನಲ್ಲಿ ಪ್ಯಾಲೆಸ್ತೀನಿಯನ್ನರ ನರಮೇಧ ಮಾಡಬೇಡಿ” Janashakthi Media
