ಬೆಂಗಳೂರು | ಡಿಸಿ ಕ್ಯಾಂಟೀನ್‌ಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್

ಬೆಂಗಳೂರು: ಗುರುವಾರ ಡಿಸಿ ಕ್ಯಾಂಟೀನ್‌ಗೆ ದಿಢೀರ್ ಭೇಟಿ ನೀಡಿದ ನಗರ ಜಿಲ್ಲೆಯ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಆಹಾರ ತಯಾರಿಕೆ ಮತ್ತು ಗ್ರಾಹಕರಿಗೆ ಸುರಕ್ಷಿತ ಆಹಾರ ಪೂರೈಕೆ ಕುರಿತು ಪರಿಶೀಲನೆ ನಡೆಸಿದರು.

ಗ್ರಾಹಕರನ್ನು ಮಾತನಾಡಿಸಿದ ಜಿಲ್ಲಾಧಿಕಾರಿ, ಕ್ಯಾಂಟೀನ್‌ನಿಂದ ವಿತರಿಸಿದ ತಿಂಡಿಗಳ ಗುಣಮಟ್ಟದ ಬಗ್ಗೆ ಹಾಗೂ ಆಹಾರಕ್ಕೆ ಮಾಲೀಕರು ನಿಗದಿಪಡಿಸಿರುವ ದರಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಇದನ್ನೂ ಓದಿ:  ಬಂಜಾರ, ಭೋವಿ ಸಮುದಾಯಗಳಿಗೆ ಅನ್ಯಾಯ: ಸೆಪ್ಟೆಂಬರ್‌ 8ರಂದು ಪ್ರತಿಭಟನೆ

ಕೆಲವು ಗ್ರಾಹಕರು ಆಹಾರ ದರ ಪಟ್ಟಿಯ ಸೂಚನಾ ಫಲಕಅಳವಡಿಸದಿರುವ ಬಗ್ಗೆ ಗಮನ ಸೆಳೆದರೆ, ಮತ್ತೆ ಕೆಲವರು ಆಹಾರದ ಅಳತೆ ಪ್ರಮಾಣ ಕಡಿಮೆ ಎಂದು ದೂರಿದರು.

ಈ ಕುರಿತು ಇಲಾಖೆ ಗಮನಹರಿಸಲಿದೆ ಎಂದು ಜಿಲ್ಲಾಧಿಕಾರಿ ಗ್ರಾಹಕರಿಗೆ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ನಾಯಕ್, ತಹಶೀಲ್ದಾರ್ ಪ್ರಶಾಂತ್ ಖಾನಗೌಡ ಪಾಟೀಲ್ ಹಾಜರಿದ್ದರು.

ಇದನ್ನೂ ನೋಡಿ: ಸರ್‌ (SIR) ಅಂದ್ರೆ ಮತದಾರರನ್ನು ಹೊರದಬ್ಬುವುದೆ? ವಿಶ್ಲೇಷಣೆ – ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *