ಆಕ್ಷೇಪಣೆಗಳನ್ನು ಮತದಾರ ಪಟ್ಟಿ ಅಂತಿಮಗೊಳಿಸುವ ವೇಳೆ ಪರಿಗಣಿಸಲಾಗುವುದು: ಚುನಾವಣ ಆಯೋಗ

ನವದೆಹಲಿ: ಬಿಹಾರ ಮತದಾರಪಟ್ಟಿ ಸಮಗ್ರ ಪರಿಷ್ಕರಣೆ ಕರಡು ಸಂಬಂಧ ಆಕ್ಷೇಪಣೆ ಮತ್ತು ತಿದ್ದುಪಡಿಗಳಿಗೆ ಸೆ.1ರ ಗಡುವಿನ ಅನಂತರವೂ ಅವಕಾಶ ನೀಡಲಾಗುವುದು. ಆದರೆ ಈ ಎಲ್ಲ ಆಕ್ಷೇಪಣೆಗಳನ್ನು ಮತದಾರ ಪಟ್ಟಿ ಅಂತಿಮಗೊಳಿಸುವ ವೇಳೆ ಪರಿಗಣಿಸಲಾಗುವುದು ಎಂದು ಸೆಪ್ಟೆಂಬರ್ 1ರಂದು ಚುನಾವಣ ಆಯೋಗವು  ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಹಾಗಾಗಿ ಗಡುವು ವಿಸ್ತರಣೆ ಬಗ್ಗೆ ಪೀಠ ಆದೇಶ ಹೊರಡಿಸಲಿಲ್ಲ.ಈ ಪ್ರಕ್ರಿಯೆಯು ನಾಮಪತ್ರ ಸಲ್ಲಿಕೆಯ ಕೊನೆಯ ದಿನದವರೆಗೆ ಮುಂದುವರಿಯುತ್ತದೆ ಎಂದೂ ಹೇಳಿದೆ. ಸೆ.1ರ ಗಡುವು ವಿಸ್ತರಣೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿತು.

ಇದನ್ನೂ ಓದಿ: ಹೈದರಾಬಾದ | ಮಾಜಿ ಕ್ರಿಕೆಟಿಗ ಮಹಮ್ಮದ್ ಅಜರುದ್ದೀನ್ ವಿಧಾನ ಪರಿಷತ್ ಗೆ ನಾಮನಿರ್ದೇಶನ

ಆಯೋಗ ಮತ್ತು ಪಕ್ಷಗಳ ನಡುವಿನ ವಿಶ್ವಾಸದ ಕೊರತೆ ದುರದೃಷ್ಟಕರ ಎಂದ ಪೀಠ, ಕರಡು ಪಟ್ಟಿಗೆ ಕ್ಲೇಮ್‌, ಆಕ್ಷೇಪಣೆಗಳನ್ನು ಸಲ್ಲಿಸಲು ಮತದಾರರು, ರಾಜಕೀಯ ಪಕ್ಷಗಳಿಗೆ ನೆರವು ನೀಡಲು ಅರೆ ಕಾನೂನು ಸ್ವಯಂಸೇವಕರನ್ನು ನೇಮಕ ಮಾಡುವಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿತು. ಅಲ್ಲದೆ ಅರೆ ಕಾನೂನು ಸ್ವಯಂಸೇವಕರು ಸಂಬಂಧಪಟ್ಟ ಜಿÇÉಾ ನ್ಯಾಯಾಧೀಶರಿಗೆ ಗೌಪ್ಯ ವರದಿಗಳನ್ನು ಸಲ್ಲಿಸುವಂತೆಯೂ ಸೂಚಿಸಿತು.

ಇದನ್ನೂ ನೋಡಿ: ಧರ್ಮಸ್ಥಳದ ನಿಗೂಢಗಳು |ಕೊಲೆ ಪ್ರಕರಣಗಳನ್ನು ತನಿಖೆ ಮಾಡಿ ಎನ್ನುವುದು ದೇವಸ್ಥಾನಕ್ಕೆ ಅಪಪ್ರಚಾರವಾ!Janashakthi Media

Donate Janashakthi Media

Leave a Reply

Your email address will not be published. Required fields are marked *