ಉತ್ತರ ಪ್ರದೇಶ | ದಿನಸಿ ಅಂಗಡಿ ಮಾಲೀಕನಿಗೆ 141ಕೋಟಿ 38 ಲಕ್ಷ ಆದಾಯ ತೆರಿಗೆ ನೋಟಿಸ್

ಉತ್ತರ ಪ್ರದೇಶ : ಕೊತ್ವಾಲಿ ಪ್ರದೇಶದ ನಾಯಗಂಜ್‌ನಲ್ಲಿ ವಾಸಿಸುವ ದಿನಸಿ ಅಂಗಡಿ ಮಾಲೀಕನಿಗೆ ಸುಮಾರು 141ಕೋಟಿ 38 ಲಕ್ಷ ರೂಪಾಯಿಗಳ ಆದಾಯ ತೆರಿಗೆ ವಂಚನೆಯ ನೋಟಿಸ್ ಬಂದಿದೆ.  ಆಧಾರ್ ಅಥವಾ ಪಾನ್​ ಕಾರ್ಡ್ ಬಳಸಿ ವಂಚನೆ ನಡೆಸುವ ಪ್ರಕರಣಗಳು ಆಗಿಂದಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಆದರೆ ಜಿಲ್ಲೆಯಲ್ಲಿ ಒಂದು ಘಟನೆ ಪೊಲೀಸರನ್ನೂ ಅಚ್ಚರಿಗೊಳಿಸಿದೆ.

 ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆದಿರುವ ಖಾತೆಗಳನ್ನು ಸಹ ಅವರು ಹೊಂದಿಲ್ಲ. ಆದರೆ ಸುಧೀರ್ ಅವರ ಪ್ಯಾನ್ ಕಾರ್ಡ್‌ನ ವಿವರಗಳನ್ನು ಪಡೆದಾಗ ವಹಿವಾಟು ನಡೆಸಿರುವ ಮಾಹಿತಿಯನ್ನು ಅವರಿಗೆ ನಂಬಲು ಕಷ್ಟವಾಯಿತು. ಸಣ್ಣ ಅಂಗಡಿ ನಡೆಸುತ್ತಿರುವ ಸುಧೀರ್ ಗುಪ್ತಾ ಈ ನೋಟಿಸ್​​ನಿಂದಾಗಿ ಆಘಾತಕ್ಕೊಳಗಾಗಿದ್ದಾರೆ. ವಾಸ್ತವವಾಗಿ, ದೆಹಲಿಯ 6 ಕಂಪನಿಗಳು ಸುಧೀರ್ ಅವರ ಪ್ಯಾನ್ ಕಾರ್ಡ್​ ಬಳಸುತ್ತಿದ್ದವು ಎಂಬ ಮಾಹಿತಿ ಗೊತ್ತಾಗಿದೆ. ಈಗ ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನವದೆಹಲಿ |ಎಲ್‌ ಪಿ ಜಿ ಸಿಲಿಂಡರ ಬೆಲೆ ಇಳಿಕೆ ಗೃಹ ಬಳಕೆಯ ಸಿಲಿಂಡರನಲ್ಲಿ ಯಾವುದೆ ಬದಲಾವಣೆಯಿಲ್ಲ

ಸಣ್ಣ ದಿನಸಿ ಅಂಗಡಿ ಇಟ್ಟುಕೊಂಡಿರುವ ಸುಧೀರ್ ಗುಪ್ತಾಗೆ ಹೆಚ್ಚು ಆದಾಯವಿಲ್ಲ. ಅವರಿಗೆ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಇದ್ದಕ್ಕಿದ್ದಂತೆ ಕೆಲವು ದಿನಗಳ ಹಿಂದೆ ಸುಧೀರ್​​ಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಿದೆ. ಅದರಲ್ಲಿ ಅವರಿಗೆ 1,41,38,47,126 ರೂ. ತೆರಿಗೆ ಬಾಕಿ ಇದೆ ಮತ್ತು ಅದನ್ನು ಪಾವತಿಸಬೇಕು ಎಂದು ಹೇಳಲಾಗಿತ್ತು. ನೋಟಿಸ್ ನೋಡಿದ ತಕ್ಷಣ ಸುಧೀರ್ ಅವರಿಗೆ ಮಾತೇ ನಿಂತಂತಾಗಿದೆ.

 ಇದಾದ ನಂತರ ತನ್ನ ಪ್ಯಾನ್ ಕಾರ್ಡ್ ಮೂಲಕ ವಹಿವಾಟಿನ ವಿವರಗಳನ್ನು ಪಡೆದಾಗ, ಬೇರೆಯದೇ ರೀತಿಯ ವಂಚನೆ ಬೆಳಕಿಗೆ ಬಂದಿದೆ. ಸುಧೀರ್ ಅವರ ಪ್ಯಾನ್ ಕಾರ್ಡ್ ಬಳಸಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸಲಾಗಿದೆ ಎಂದು ತಿಳಿದುಬಂದಿದೆ. ದೆಹಲಿಯ 6 ಕಂಪನಿಗಳು ಈ ವ್ಯವಹಾರ ನಡೆಸಿವೆ. ಈ ಕಂಪನಿಗಳ ಸಂಪೂರ್ಣ ವಿವರಗಳು ಸಹ ಬಹಿರಂಗಗೊಂಡಿವೆ. ಬಳಸಿದ ಬ್ಯಾಂಕ್ ಖಾತೆಗಳು ತಮ್ಮದಲ್ಲ ಎಂದು ತಿಳಿದ ಸುಧೀರ್ ಆಶ್ಚರ್ಯ ಚಕಿತರಾಗಿದ್ದಾರೆ.

ಉತ್ತರ ಪ್ರದೇಶ | ದಿನಸಿ ಅಂಗಡಿ ಮಾಲೀಕನಿಗೆ 141ಕೋಟಿ 38 ಲಕ್ಷ ಆದಾಯ ತೆರಿಗೆ ನೋಟಿಸ್

ನೋಟಿಸ್ ತಲುಪಿದ ತಕ್ಷಣ ಕುಟುಂಬದಲ್ಲಿ ದುಃಖ ಮಡುಗಟ್ಟಿತ್ತು. ಇಷ್ಟು ದೊಡ್ಡ ಮೊತ್ತದ ಬಗ್ಗೆ ತಾನು ಎಂದಿಗೂ ಯೋಚಿಸಿರಲಿಲ್ಲ ಎಂದು ಸುಧೀರ್ ಹೇಳಿದ್ದಾರೆ.  ಸುಮಾರು ಒಂದೂವರೆ ಬಿಲಿಯನ್ ರೂಪಾಯಿಗಳನ್ನು ಠೇವಣಿ ಇಡುವಂತೆ ನನಗೆ ನೋಟಿಸ್ ನೀಡಲಾಯಿತು. ನಂತರ ನಾನು ಉನ್ನತ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದೆ. ಅಧಿಕಾರಿಗಳು ಸಹ ಮೊದಲಿಗೆ ಅದನ್ನು ನಂಬಲಿಲ್ಲ. ಇದಾದ ನಂತರ ದೆಹಲಿಯ 6 ಕಂಪನಿಗಳ ನಿರ್ದೇಶಕರ ವಿರುದ್ಧ ದೂರು ದಾಖಲಿಸಿದೆ. ಇದೀಗ ಆ ಕಂಪನಿಗಳ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ಸುಧೀರ್ ತಿಳಿಸಿದ್ದಾರೆ.

ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ಮನೆಯಲ್ಲಿ ಅಡುಗೆ ಕೂಡ ಮಾಡುತ್ತಿಲ್ಲ. ನಮ್ಮ ಸುರಕ್ಷತೆಯ ಬಗ್ಗೆ ಚಿಂತೆಯಾಗಿದೆ. ನ್ಯಾಯ ದೊರಕಿಸಿಕೊಡುವಂತೆ ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾವು ಪೊಲೀಸರನ್ನು ವಿನಂತಿಸಿಕೊಂಡಿದ್ದೇವೆ ಎಂದಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಖುರ್ಜಾ ಡಾ. ತೇಜ್‌ವೀರ್ ಸಿಂಗ್ ಅವರು ಮಾತನಾಡಿದ್ದು, ‘ದಿನಸಿ ಉದ್ಯಮಿ ಸುಧೀರ್ ಗುಪ್ತಾ ಅವರ ದೂರಿನ ಮೇರೆಗೆ ನಗರ ಕೊತ್ವಾಲಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ವಚನಾನುಭವ 33 | ಉದಕ ಮಜ್ಜನವಲ್ಲ ಪತ್ರೆ ಪೂಜೆಯಲ್ಲ Janashakthi Media

Donate Janashakthi Media

Leave a Reply

Your email address will not be published. Required fields are marked *