ನಾಡಹಬ್ಬ ದಸರಾ ಉದ್ಘಾಟನೆಗೆ ಬಾನುಮುಷ್ತಾಕ್ ಆಯ್ಕೆ ಸ್ವಾಗತಾರ್ಹ ಬಿಜೆಪಿ ಹಾಗೂ ಮತಾಂಧರ ವಿರೋಧಕ್ಕೆ ಕೆಪಿಆರ್‌ಎಸ್‌ ಖಂಡನೆ

ಬೆಂಗಳುರು : ನಾಡಹಬ್ಬ ದಸರಾ ಉದ್ಘಾಟನೆಗೆ, ಬೂಕರ್ ಪ್ರಶಸ್ತಿ ವಿಜೇತ, ಕನ್ನಡದ ಹೆಸರಾಂತ ಬರಹಗಾರ್ತಿ, ನಾಡಿನ ಘನತೆಯನ್ನು ಮೆರೆದ ಹೆಮ್ಮೆಯ ಬಾನು ಮುಷ್ತಾಕ್ ಆಯ್ಕೆಯನ್ನು ಕರ್ನಾಟಕ ಪ್ರಾಂತ ರೈತ ಸಂಘ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ ಮತ್ತು ಅದಕ್ಕಾಗಿ ರಾಜ್ಯ ಸರಕಾರವನ್ನು ಅಭಿನಂದಿಸುತ್ತದೆ. ಎಂದು ಕರ್ನಾಟಕ  ಪ್ರಾಂತ ರೈತ ಸಂಘ ದ ಯು.ಬಸವರಾಜ ಹಾಗೂ  ಟಿ.ಯಶವಂತ  ಪತ್ರಕಾ ಹೆಳಿಕೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡಿ, ನಾಡಿನ‌ ಸೌಹಾರ್ದ ಪರಂಪರೆಯನ್ನು ಪ್ರೀತಿಸುವ, ಗೌರವಿಸುವ‌ ಬಾನುಮುಷ್ತಾಕ್ ರವರ ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿರುವುದು ಕನ್ನಡದ ಕೀರ್ತಿ ಪತಾಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರುವಂತಾಗಿದೆ. ಎಂದು ತಿಳಿಸಿದರು.

ಇದನ್ನೂ ಓದಿ: ನವದೆಹಲಿ|ಅಂಗವಿಕಲರಿಗೆ ಅವಮಾನ ಮಾಡಿದಕ್ಕೆ ಬೇಷರತ್‌ ಕ್ಷಮೆ ಯಾಚಿಸುವಂತೆ ಸುಪ್ರೀಂ ಕೋರ್ಟ್‌ ಸೂಚನೆ

ಭಾರತೀಯ ಜನತಾ ಪಕ್ಷ ಮತ್ತು ಹಿಂದುತ್ವವಾದಿಗಳು, ನಾಡಿನ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸಿದ ಪ್ರಗತಿಪರ ಸಾಹಿತಿಗಳ ಆಯ್ಕೆಯನ್ನು ಸ್ವಾಗತಿಸಿ ಅಭಿನಂದಿಸುವ ಬದಲು ಎಂದಿನಂತೇ ಇಲ್ಲಿಯೂ ಧರ್ಮದ್ವೇಷ ಹಾಗು ಮಹಿಳಾ ದ್ವೇಷದ ರಾಜಕಾರಣದಲ್ಲಿ ತೊಡಗಿರುವ ಹೇಯ ವರ್ತನೆಯನ್ನು ಕರ್ನಾಟಕ ಪ್ರಾಂತ ರೈತ ಸಂಘ ಬಲವಾಗಿ ಖಂಡಿಸುತ್ತದೆ. ನಾಡ ಹಬ್ಬವನ್ನು ವಿಭಜನಕಾರಿ ದುಷ್ಕೃತ್ಯಕ್ಕೆ ಬಳಸುವ ಕುತಂತ್ರವಿದಾಗಿದೆ ಎಂದು ಆರೋಪಿಸಿದರು.

ಅವರು ಅಲ್ಪ ಸಂಖ್ಯಾತ ಮುಸ್ಲಿಂ ಸಮುದಾಯ ಮೂಲದವರು ಮತ್ತು ಮಹಿಳೆ ಎಂಬುದನ್ನೆ ಗುರಿಯಾಗಿಸಿಕೊಂಡು ನಾಡಿನ ಕೀರ್ತಿಯನ್ನು ಮುಗಿಲಿನೆತ್ತರಕ್ಕೇರಿಸಿದವರನ್ನು ಅಪಮಾನಿಸಿ, ಅಗೌರಿಸುವ ಭಾರತೀಯ ಜನತಾ ಪಕ್ಷ ಮತ್ತಿತರೆ ಮತಾಂಧರ ನಡೆ ನಾಚಿಕೆ ಗೇಡಿನದಾಗಿದೆ ಮತ್ತು ರಾಜ್ಯ ಸರಕಾರದ ನೇತೃತ್ವದಲ್ಲಿ ನಡೆಯುತ್ತಿರುವ ನಾಡಹಬ್ಬದಲ್ಲಿ ತನ್ನ ಕೋಮು ದ್ವೇಷದ ರಾಜಕಾರಣವನ್ನು ಮುಂದೆ ಮಾಡುತ್ತಿದೆ.

ರಾಜ್ಯದ ಜನತೆ ಬಿ.ಜೆ.ಪಿ.ಯ ಈ ಧರ್ಮದ್ವೇಷದ ಕುಯುಕ್ತಿಯ ರಾಜಕಾರಣವನ್ನು ತೀವ್ರವಾಗಿ ವಿರೋಧಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘ ಕರೆ ನೀಡುತ್ತದೆ.ನಾಡ ಹಬ್ಬ ದಸರಾವನ್ನು ಈ ಹಿಂದೆ ಖ್ಯಾತ‌ ಕವಿ‌ ನಿಸಾರ್ ಅಹ್ಮದ್ ರವರು ಉದ್ಘಾಟನೆ‌ ಮಾಡಿದ್ದರು. ದಸರಾ ಕನ್ನಡ ನಾಡಿನ ಹಬ್ಬವೇ ಹೊರತೂ‌ ಹಿಂದುತ್ವ ವಾದಿಗಳ ಪಿತೂರಿಯ ಹಬ್ಬವಲ್ಲ ಎಂಬುದನ್ನು ಅರ್ಥ‌ಮಾಡಿಕೊಂಡು ಕ್ಷುಲ್ಲಕ ರಾಜಕಾರಣವನ್ನು ಕೈಬಿಡಬೇಕೆಂದು ಒತ್ತಾಯಿಸುತ್ತದೆ.

ಇದನ್ನೂ ನೋಡಿ: ‘ಷಡ್ಯಂತ್ರ’ ಯಾರದ್ದು??ದೂರುದಾರನನ್ನು ಬಂಧಿಸಿದ್ದು‌‌ಯಾಕೆ??? Janashakthi Media

Donate Janashakthi Media

Leave a Reply

Your email address will not be published. Required fields are marked *