ಲಾಕಪ್ ಡೆತ್ ಗೆ ಬಲಿಯಾದ ಅಲೆಮಾರಿ ಕೊರಮ ಜನಾಂಗದ ರಮೇಶ್

ಆತ್ಮಹತ್ಯೆ ಎಂದು ಕಥೆ ಕಟ್ಟಿದ ರಾಮನಗರ SP ಅಲೆಮಾರಿ 
ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕು ಕೆಸ್ತೂರು ಹೋಬಳಿ, ದುಂಡನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಕೊರಮ ಜನಾಂಗಕ್ಕೆ ಸೇರಿದ ರಮೇಶ್ ಎಂಬುವವರನ್ನು ಆಗಸ್ಟ್‌ 16ರಂದು ಚನ್ನಪಟ್ಟಣ ತಾಲ್ಲೂಕು ಕೆ ಎಂ ದೊಡ್ಡಿ ಪೋಲಿಸರು ಸುಳ್ಳು ಪ್ರಕರಣ ದಾಖಲಿಸಿ, 48 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ, ಮಾನಸಿಕ ಮತ್ತು ದೈಹಿಕವಾಗಿ ಚಿತ್ರಹಿಂಸೆ ನೀಡಿ ಪೋಲಿಸರೇ ಸೆಲ್ ನಲ್ಲಿ ಮಾರಣಾಂತಿಕವಾಗಿ ಹಲ್ಲೆ ಮಾಡಿ ಲಾಕಪ್ ನಲ್ಲೇ ಮರಣ ಹೊಂದಿರುವ ಘಟನೆ ನಡೆದಿದೆ ಎಂದು ವಕೀಲರು ಹಾಗೂ ರಾಜ್ಯ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ ಆರೋಪಸಿದ್ದಾರೆ. ಅಲೆಮಾರಿ 

ಇದನ್ನು ಮುಚ್ಚಿ ಹಾಕಲು ಆತ್ಮಹತ್ಯೆಯ ಕಥೆ ಕಟ್ಟಿ ಆಸ್ಪತ್ರೆಗೆ ಹೆಣ ಸಾಗಿಸಿದ ಘಟನೆ ಆಗಸ್ಟ್‌ 21 ರಂದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕು ಎಂ.ಕೆ ದೊಡ್ಡಿ ಪೋಲಿಸ್ ಠಾಣೆಯಲ್ಲಿ ನೆಡೆದಿದೆ ಎಂದು ತಿಳಿಸಿದ್ದಾರೆ. ಅಲೆಮಾರಿ 

ಘಟನೆ ನಂತರದ ವಿವರ

ದಿನಾಂಕ: 21.08.2025 ರ ಬುಧವಾರ ಸುಮಾರು 11.30ಕ್ಕೆ ರಾಮನಗರ ಜಿಲ್ಲೆ AKMS ಮುಖಂಡರಾದ ಗುಡ್ಡೆ ವೆಂಕಟೇಶ್ AKMS ರಾಜ್ಯ ಜಂಟಿ ಕಾರ್ಯದರ್ಶಿ ಹಾಗೂ ವಕೀಲರಾದ ಕಿರಣ್ ಕುಮಾರ್ ಕೊತ್ತಗೆರೆ ನನಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದರು. ಅಲೆಮಾರಿ 

ನಾನು ಕೂಡಲೇ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಂದ ಸಂಪೂರ್ಣ ಮಾಹಿತಿ ಪಡೆದೆನು. ಅಷ್ಟರಲ್ಲಿ AKMS ಮಂಡ್ಯ ಜಿಲ್ಲೆ ಹಾಗೂ ರಾಮನಗರ ಜಿಲ್ಲೆಯ ವಿವಿಧ ಮುಖಂಡರು ಹಾಗೂ‌ ನೂರಾರು ಕಾರ್ಯಕರ್ತರು ಜಮಾವಣೆಗೊಂಡಿದ್ದರು.

ಇದನ್ನೂ ಓದಿ: ಚಿತ್ರದುರ್ಗ| ಹಾಸ್ಟೆಲ್ ವಿದ್ಯಾರ್ಥಿನಿಯನ್ನು ಕೊಲೆ; ಕಠಿಣ ಶಿಕ್ಷೆಗೆಗಾಗಿ ವಿದ್ಯಾರ್ಥಿನಿಯರ ಪ್ರತಿಭಟನೆ

ಸ್ಥಳದಲ್ಲಿದ್ದಮೃತರ ಹೆಂಡತಿ ಮಂಗಳಗೌರಮ್ಮ, ಮಗಳು ಮಂಜುಳಾ ಘಟನೆ ಬಗ್ಗೆ ದೂರು ಬರೆದು ರಾಮನಗರ SPಗೆ ದೂರ ಕೊಡಿಸಿ, ತಪಿತಸ್ಥ ಪೋಲಿಸರು ಹಾಗೂ ಗಂಭೀರ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ದು ಕ್ರಿಮಿನಲ್ ದೂರು ದಾಖಲಿಸಿ ಕಠಿಣಶಿಕ್ಷೆಗೆ ಗುರಿ ಪಡಿಸಲು ಪ್ರಕರಣದ ತನಿಖೆಯನ್ನು CID ವಹಿಸುವಂತೆ ಹಾಗೂ ನಿಷ್ಪಕ್ಷಪಾತವಾಗಿ ಶವದ ಪಂಚನಾಮೆ ಮಾಡಿಸುವಂತೆ ರಾಮನಗರ SP ಶ್ರೀನಿವಾಸಗೌಡ, ASP, DYSP ಗಿರಿ, ತಹಶಿಲ್ದಾರ್, ಹಾಗೂ ರಾಮನಗರ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಿಗೆ ಒತ್ತಾಯ ಪಡಿಸಲಾಯಿತು.

ನಂತರ ಈ ಗಂಭೀರ ಘಟನೆಯನ್ನು ತೀವ್ರವಾಗಿ ಖಂಡಿಸಿ, ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆ ಘಟನೆಯ ತೀವ್ರತೆ ಹಾಗೂ ಪ್ರತಿಭಟನಾಕಾರ ಬೇಡಿಕೆಯನ್ನು ಪರಿಗಣಿಸಿ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ CID ಗೆ ವರ್ಗಾಯಿಸಿ ಆದೇಶ ಹೊರಡಿಸುವಲ್ಲಿ AKMS ಪಧಾಧಿಕಾರಿಗಳು ಜಿಲ್ಲಾಡಳಿತಕ್ಕೆ ತೀವ್ರ ಒತ್ತಡ ಹೇರಲಾಯಿತು. ಅಲೆಮಾರಿ 

ಜಿಲ್ಲಾಡಳಿತ ಮೃತರ ಶವ ಪರೀಕ್ಷೆಯನ್ನು ಜಿಲ್ಲಾ ನ್ಯಾಯಾಧೀಶರು, 3 ಜನ ತಜ್ಞ ವೈದ್ಯರ ಸಮಕ್ಷಮದಲ್ಲಿ ಸುಮಾರು 2 ಗಂಟೆಗಳ ಕಾಲ ವಿಡಿಯೋ ರೆಕಾರ್ಡ್ ಮೂಲಕ ಪೋಸ್ಟ್ ಮಾಸ್ಟಮ್ ಪರೀಕ್ಷೆ ಮಾಡಿಸಲಾಯಿತು. ನಂತರ ಸುಳ್ಳು ಪ್ರಕರಣದಲ್ಲಿ ಬಂಧಿಸಲಾಗಿದ್ದ ಮೃತರ ಮಗ ಮಂಜುನಾಥ್ ನನ್ನು ಕೋಡಲೇ ಸ್ಥಳೀಯ JMFC. ನ್ಯಾಯಾಧೀಶ ಮುಂದೆ ಹಾಜರು ಪಡಿಸುವಂತೆ ಒತ್ತಾಯಿಸಿ, ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಘಟನೆಗಳ ಸಹಕಾರದಿಂದ ನೀರಿಕ್ಷಣಾ ಜಾಮೀನು ಕೊಡಿಸಿ, ತಂದೆ ಶವ ಸಂಸ್ಕಾರಕ್ಕೆ ಅವಕಾಶ ಮಾಡಿಸಿ, ಸ್ಥಳದಲ್ಲಿ ಪ್ರತಿಭಟನೆ ಮತ್ತು ಮಾತುಕತೆ ಮೂಲಕ ನಮ್ಮ ಸಮಾಜದ ಹಿರಿಯ ಪೋಲಿಸ್ ಅಧಿಕಾರ ಸಹಕಾರದಿಂದ ರಾಮನಗರ ಜಿಲ್ಲಾಡಳಿತ ಮತ್ತು ಜಿಲ್ಲಾ ಪೋಲಿಸ್ ಇಲಾಖೆ ಮೂಲಕ ರೂ.1 ಲಕ್ಷ ರೂಗಳ ಆರಂಭಿಕ ಪರಿಹಾರ ಕೊಡಿಸಲಾಯಿತು. ನಂತರ ಎಲ್ಲರ ಸಹಕಾರ ಪಡೆದು ರಾತ್ರಿ 8.00 ಗಂಟೆಗೆ ಪೋಲಿಸ್ ಬಂದೂಬಸ್ತ್ ನೊಂದಿಗೆ ಮೃತ ರಮೇಶ್ ಸ್ವ-ಗ್ರಾಮ ದುಂಡನಹಳ್ಳಿಯಲ್ಲಿ ಶವಸಂಸ್ಕಾರ ನೆರವೇರಿಸಲಾಯಿತು.

ಆಗಸ್ಟ್‌ 22ರಂದು ವಿಧಾನಸೌದದಲ್ಲಿ ಜನಪ್ರತಿನಿಧಿಗಳ ಭೇಟಿ ತಪ್ಪಿತಸ್ಥ ಪೋಲಿಸರ ಮೇಲೆ ಕೊಲೆ ಪ್ರಕರಣ ದಾಖಲಿಸಿ ಬಂಧಿಸುವಂತೆ ಒತ್ತಾಯಿಸಿ ಮನವಿ

ಆಗಸ್ಟ್‌ 22 ಬೆಳಿಗ್ಗೆ ಸುಮಾರು 12 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ವಿಧಾನಸೌಧ ದಲ್ಲಿ ಉಪಮುಖ್ಯಮಂತ್ರಿ ಡಿ.ಕೆ‌.ಶಿವಕುಮಾರ್, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ, ಮದ್ದೂರು ಶಾಸಕರಾದ ಎಂ.ಉದಯ್, ರಾಮನಗರ ಶಾಸಕರು, ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ ಮಹದೇವಪ್ಪ, MLC ಡಿ.ಟಿ ಶ್ರೀನಿವಾಸ್, ಸಾಬಣ್ಣ ತಳವಾರ್ ಇವರೆಲ್ಲರನ್ನೂ ಸಂಪಕಿಸಿ, ಭೇಟಿ ಮಾಡಿ ಈ ಲಾಕಪ್ ಡೆತ್ ಪ್ರಕರಣವನ್ನು ರಾಮನಗರ ಜಿಲ್ಲಾಡಳಿತ ಇನ್ನೂ ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ಮಾಡಿದ್ದು. ಆರೋಪಿತ ಪೋಲಿಸರನ್ನು ರಕ್ಚಿಸುವ ನೆಪದಲ್ಲಿ ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸದೇ ಕೇವಲ UDR ಪ್ರಕರಣ ದಾಖಲಿಸಿದ್ದು.

ಇಲ್ಲಿಯ ವರೆವಿಗೂ ಕರ್ತವ್ಯ ಲೋಪ ಎಸಗಿರುವ ಎ.ಕೆ ದೊಡ್ಡಿ ಪೋಲಿಸ್ ಠಾಣೆ ಅಧಿಕಾರಿ ಸಹನಾ ಪಟೇಲ್ ಹಾಗೂ,ಇತರೆ 8 ಜನ ಸಿಬ್ಬಂದಿಯನ್ನು ಅಮಾನತ್ತು ಮಾಡದೇ ಮೀನಾಮೇಷ ಏಣಿಸುತ್ತಿರುವ ರಾಮನಗರ SP ಹಾಗೂ ರಾಮನಗರ ಪೋಲಿಸ್ ಇಲಾಖೆಯ ದಲಿತ ಅಲೆಮಾರಿ ವಿರೋಧಿ ಧೋರಣೆಯನ್ನು ಖಂಡಿಸಿ, ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ಹಾಗೂ ತಪಿತಸ್ಥ ಅಧಿಕಾರಿಗಳ ಮೇಲೆ ದೂರು ದಾಖಲಿಸುವಂತೆ ಹಾಗೂ ಕೂಡಲೇ COD SP ತನಿಖೆಯನ್ನು ತೀವ್ರಗೊಳಿಸುವಂತೆ ಒತ್ತಾಯಿಸಿ, ವಕೀಲರಾದ ಮಹದೇವು,‌ಕಿರಣ್ ಕುಮಾರ್ ಕೊತ್ತಗೆರೆ, ಮುಖಂಡರಾದ ಪ್ರವೀಣ್, ಸಾಗರ್ ಚಿಕ್ಕಲಾತ್ತಾರೂ ಮತಿತ್ತರೆ ಮುಖಂಡರು ಸರ್ಕಾರಕ್ಕೆ ಮನವಿ ಮಾಡಲಾಯಿತು.

ಈ ಎಲ್ಲಾ ಕಾರ್ಯಗಳನ್ನು ಸ್ಥಳೀಯ ಜಿಲ್ಲೆಯ AKMS ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ರಾಮನಗರ ರವರ ನೇತೃತ್ವದಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ, ವಕೀಲರಾದ ಮಹದೇವು, ಭೀಮಪುತ್ರಿ ನಾಗಮ್ಮ ರವರ ಮಾರ್ಗದರ್ಶನದಲ್ಲಿ ಹಾಗೂ ರವೀಶ್, SLV ವೇಂಕಟೇಶ್, ಹನಕೆರೆ ರಾಮಶೆಟ್ಟಿ, ತಾತಾಗುಣಿ ರಾಮಕೃಷ್ಣ, ಹಾಗೂ ಅವಳಿ ಜಿಲ್ಲೆಯ AKMS ಪದಾಧಿಕಾರಿಗಳು ಹಾಗೂ ಕುಳುವ ಬಂಧುಗಳ ಸಹಕಾರದ ಮೂಲಕ ನೆರವೇರಿಸಲಾಗಿದೆ.

ಇದನ್ನೂ ನೋಡಿ: ವಚನಾನುಭವ – 32 ಕಟ್ಟಿದ ಲಿಂಗವ ಬಿಟ್ಟು ಹೋದವರಿಗೆ ಲಟ ಲಟ ಹೊಡೆ ಎಂದು ಅಂಬಿಗರ ಚೌಡಯ್ಯ ಹೇಳಿದ್ದು ಯಾಕೆ? Janashakthi

Donate Janashakthi Media

Leave a Reply

Your email address will not be published. Required fields are marked *