ಧರ್ಮಸ್ಥಳದಲ್ಲಿ ನಡೆದಿರುವ ಮಹಿಳೆಯರ ನಾಪತ್ತೆ, ಅತ್ಯಾ ಚಾರ ಮತ್ತು ಬರ್ಬರ ಕೊಲೆಗಳ ಪ್ರಕರಣಗಳ ಸಮಗ್ರ ತನಿಖೆ ಅಬಾಧಿತವಾಗಿ ಮುಂದುವರೆಯಬೇಕು.
ಮಹಿಳೆಯರ ಸುರಕ್ಷತೆ, ಲಿಂಗ ನ್ಯಾಯ ಮತ್ತು ನ್ಯಾಯಯುತ ತನಿಖೆ ಆದ್ಯತೆಯಾಗಬೇಕು.
ಎಸ್.ಐ.ಟಿ ತನಿಖೆ ತಾರ್ಕಿಕ ಅಂತ್ಯ ಮುಟ್ಟುವತನಕ ಒತ್ತಡ ಸೃಷ್ಟಿಸಿ ತನಿಖೆಗೆ ಅಡ್ಡಿಪಡಿಸುವಂತಹ ಹೇಳಿಕೆಗಳನ್ನು ನೀಡುವುದನ್ನು ಸರ್ಕಾರ ಮತ್ತು ವಿರೋಧ ಪಕ್ಷಗಳ ಜನಪ್ರತಿನಿಧಿಗಳು ಕೂಡಲೇ ನಿಲ್ಲಿಸಬೇಕು.
ಬೆಂಗಳೂರು: ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಎಂಬುದು ಮಹಿಳೆಯರು, ಲಿಂಗ ಅಲ್ಪಸಂಖ್ಯಾ ತರು, ಮಹಿಳಾ ಕಾರ್ಮಿ ಕರು ಮತ್ತು ಅಂಚಿನಲ್ಲಿರುವ ಮಹಿಳೆಯರು, ಮಾನವ ಹಕ್ಕುಗಳ ಸಂಸ್ಥೆಗಳು ಮತ್ತು ಕಾಳಜಿಯುಳ್ಳ ನಾಗರಿಕರ ಹಲವು ಸಂಘಟನೆಗಳು ಮತ್ತು ಸಂಸ್ಥೆಗಳ ಜಂಟಿ ವೇದಿಕೆಯಾಗಿದ್ದು, ಈ ಸಮುದಾಯಗಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಮತ್ತು ಅವರ ಹಕ್ಕು ಗಳನ್ನು ರಕ್ಷಿಸಲು ಕೆಲಸ ಮಾಡುತ್ತಿದೆ. ಧರ್ಮಸ್ಥಳ
ಧರ್ಮಸ್ಥಳದಲ್ಲಿ ನಡೆದಿರುವ ದೌರ್ಜನ್ಯಗಳ ಸುತ್ತನಡೆಯುತ್ತಿರುವ ವಿವಾದಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸತ್ಯದ ಅನ್ವೇಷಣೆಗೆ ಅಡ್ಡಿಯಾಗುವ ಮತ್ತು ವಿಶೇಷ ತನಿಖಾ ತಂಡದ (SIT) ತನಿಖೆಯನ್ನು ದುರ್ಬಲಗೊ ಳಿಸುವ ಜನಪ್ರತಿನಿಧಿಗಳ ಹೇಳಿಕೆಗಳನ್ನು ತಕ್ಷಣವೇ ಹಿಂಪಡೆಯುವಂತೆ ನಾವು ಒತ್ತಾಯಿಸುತ್ತೇವೆ ಎಂದು ‘ನಾವೆದ್ದು ನಿಲ್ಲದಿದ್ದರೆ -ಕರ್ನಾಟಕ’ ಜಂಟಿ ಹೇಳಿಕೆ ನೀಡಿದೆ.
ಮಹಿಳಾ ಹಕ್ಕುಗಳ ಪ್ರತಿಪಾದಕರಾಗಿ, ಧರ್ಮಸ್ಥಳಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಾಗಿರಲಿ ಅಥವಾ ಹತ್ತಿರದ ಗ್ರಾಮಗಳ ನಿವಾಸಿಗಳಾಗಿರಲಿ, ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯು ಪ್ರಮುಖ ಕಾಳಜಿಯಾಗಿರಬೇಕು ಎಂದು ನಾವು ಒತ್ತಿಹೇಳುತ್ತೇವೆ. ತನಿಖೆ ಇನ್ನೂ ತಾರ್ಕಿಕ ಅಂತ್ಯ ತಲುಪುವ ಮೊದಲೇ ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲು ನಡೆಯುವ ಯಾವುದೇ ಪ್ರಯತ್ನವು ಸಾರ್ವಜನಿಕರ ನಂಬಿಕೆಯನ್ನು ಹಾಳುಮಾಡುತ್ತದೆ ಮತ್ತು ಮಹಿಳೆಯರ ವಿರುದ್ಧದ ಹಿಂಸೆಯನ್ನು ಶಾಶ್ವತಗೊಳಿಸುತ್ತದೆ.
ಇದನ್ನೂ ಓದಿ: ಧರ್ಮಸ್ಥಳ | ಕೊಲೆ, ಅತ್ಯಾಚಾರ, ಅಸಹಜ ಸಾವುಗಳ ಸಮಗ್ರ ತನಿಖೆಗೆ ಎಡ ಪಕ್ಷಗಳ ಆಗ್ರಹ
ಪುಣ್ಯಕ್ಷೇತ್ರವೆಂದು ಪೂಜಿಸಲ್ಪಡುವ ಧರ್ಮಸ್ಥಳವು ದುರದೃಷ್ಟವಶಾತ್, ವ್ಯಾಪಕ ಅತ್ಯಾಚಾರಗಳು, ಕೊಲೆಗಳು, ಅಪಹರಣಗಳು ಮತ್ತು ಅಮಾಯಕ ಜನರ, ವಿಶೇಷವಾಗಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಕೊಲೆಗಳು ಸೇರಿದಂತೆ ಹೇಯ ಅಪರಾಧಗಳ ಆರೋಪಗಳಿಂದ ಕುಖ್ಯಾತವಾಗಿದೆ. 2012 ರಲ್ಲಿ ಸೌಜನ್ಯ ಅವರ ಅಪಹರಣ ಮತ್ತು ಕೊಲೆ, 1986 ರಲ್ಲಿ ಪದ್ಮಲತಾ ಅವರ ಅಪಹರಣ, ಹಲವು ದಿನಗಳ ಕಾಲ ಬಂಧನದಲ್ಲಿರಿಸಿ ಅತ್ಯಾಚಾರ ಮತ್ತು ಕ್ರೂರ ಕೊಲೆ ಮತ್ತು 1979ರಲ್ಲಿ
ಟೀಚರ್ ವೇದವಲ್ಲಿ ಅವರ ಮೇಲಿನ ದಾಳಿ, ಅತ್ಯಾಚಾರ ಮತ್ತು ಸುಟ್ಟು ಕೊಲೆ ಮಾಡಿದ ಘಟನೆಗಳೂ ಸೇರಿದಂತೆ ಇದುವರೆಗೂ ಬಗೆಹರಿಯದ ಮಹಿಳೆಯರು ನಾಪತ್ತೆಯಾದ ಅಥವಾ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದ ಇತರ ಹಲವಾರು ನಿಗೂಢ ಪ್ರಕರಣಗಳು ಬೆಳಕಿಗೆ ಬಂದಿವೆ.
ಮತ್ತು SIT ಮುಂದೆ ತಮ್ಮ ಸಾಕ್ಷ್ಯಗಳನ್ನು ನೀಡಲು ಮುಂದೆ ಬಂದ ಶ್ರೀಕ್ಷೇತ್ರದ ಮಾಜಿ ನೌಕರನೂ ಸೇರಿದಂತೆ ಅನೇಕರು ಬಹಿರಂಗಪಡಿಸಿದ ಈ ಆರೋಪಗಳು, ದಶಕಗಳ ಕಾಲ ನಡೆದಿರುವ ಅಧಿಕಾರದ ವ್ಯವಸ್ಥಿತ ದುರುಪಯೋಗ ಮತ್ತು ಸತ್ಯವನ್ನು ಮುಚ್ಚಿಹಾಕುವ ಕೆಟ್ಟ ಮಾದರಿಯನ್ನು ಸೂಚಿಸುತ್ತವೆ. SIT ಯಿಂದ ಮಾನವ ಅವಶೇ ಷಗಳ ಇತ್ತೀಚಿನ ಉತ್ಖನನವು ಈ ಎಲ್ಲಘಟನೆಗಳ ಪಾರದರ್ಶಕ ತನಿಖೆಯ ಅಗತ್ಯದ ಗಂಭೀರತೆಯನ್ನು ಮತ್ತಷ್ಟು ಒತ್ತಿಹೇಳುತ್ತದೆ.
ʼಹೂತುಹೋದ ಸತ್ಯʼಗಳ ತನಿಖೆಗೆ ಎಸ್.ಐ.ಟಿ:
ಈ ʼಹೂತುಹೋದ ರಹಸ್ಯʼಗಳನ್ನು ಸಮಗ್ರವಾಗಿ ತನಿಖೆ ಮಾಡಲು 2025 ರ ಜುಲೈನಲ್ಲಿ SIT ಅನ್ನು ರಚಿಸಿದ್ದಕ್ಕಾ ಗಿ ಕರ್ನಾಟಕ ಸರ್ಕಾರವನ್ನು ನಾವು ಅಭಿನಂದಿಸುತ್ತೇವೆ. ಆದರೆ ಅದೇ ಸಂದರ್ಭ ದಲ್ಲಿ ಇತ್ತೀಚಿನ ವಿಧಾನಸಭಾ ಅಧಿವೇಶನದಲ್ಲಿ ಆಡಳಿತ ಪಕ್ಷ ಮತ್ತು ವಿರೋ ಧ ಪಕ್ಷಗಳೆದರಡರ ಜನಪ್ರತಿನಿಧಿಗಳ ವಿವಾದಾತ್ಮಕ ಹೇಳಿಕೆಗಳಿಂದ ನಾವು ತೀವ್ರವಾಗಿ ಆತಂಕಗೊಂಡಿದ್ದೇವೆ. ಇದರಲ್ಲಿ ರಾಜ್ಯದ ಉಪಮುಖ್ಯಮಂತ್ರಿಗಳ ಮತ್ತು ಗೃಹ ಸಚಿವರ ವಿಧಾನಸಭೆಯಲ್ಲಿನ ಹೇಳಿಕೆಗಳು ಸೇರಿವೆ. ಧರ್ಮಸ್ಥಳ
ಗೃಹಸಚಿವರ SIT ಅನ್ನು ಪ್ರಾಥಮಿಕವಾಗಿ “ಧರ್ಮಸ್ಥಳದ ಮೇ ಲಿನ ಕಳಂಕವನ್ನು ನಿವಾರಿಸಲು” ಸ್ಥಾಪಿಸಲಾಗಿದೆ ಎಂಬ ಹೇಳಿಕೆಯು ಕಾಲಮುನ್ನವಾದುದು ಮಾತ್ರವಲ್ಲದೆ ಪಕ್ಷಪಾತದಿಂದ ಕೂಡಿದೆ. ಇದೇ ಅಭಿಪ್ರಾಯಕ್ಕೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವರೂ ಸಹಮತವಿದೆ ಎಂದು ಹೇ ಳಿರುವುದು ಇನ್ನಷ್ಟು ಆಘಾತಕಾರಿಯಾಗಿದೆ. ಇಂತಹ ಹೇಳಿಕೆಗಳು ವಿಧಿವಿಜ್ಞಾನ ಸಾಕ್ಷ್ಯ ಅಥವಾ ಸಾಕ್ಷಿಗಳ ಹೇಳಿಕೆಗಳಿಗಾಗಿ ಕಾಯದೆ ಅಧಿಕಾರಸ್ಥಾನದಲ್ಲಿರುವವರು ಪ್ರಭಾವಿ ವ್ಯಕ್ತಿಗಳನ್ನು ಆರೋಪದಿಂದ ಪಾರುಮಾಡುವ ಆತುರದಲ್ಲಿದ್ದಾರೆಂಬುದನ್ನು ತೋರಿಸುತ್ತದೆ.
ಇಂತಹ ಮಾತುಗಳು, ನಿಧಾನವಾಗಿ ಧೈರ್ಯ ಮಾಡಿ ಎಸ್.ಐ.ಟಿ ಮುಂದೆ ಹೇಳಿಕೆ ನೀಡಲು ಹೊರಬರುತ್ತಿರುವ ಸಾಕ್ಷಿಗಳಿಗೆ ನೇರ ಬೆದರಿಕೆಯನ್ನು ಒಡ್ಡುತ್ತವೆ. ಸರ್ಕಾರವೇ ಈಗಾಗಲೇ ಬಲಾಢ್ಯರ ಪಕ್ಷ ವಹಿಸುತ್ತಿರುವ ಸಂದೇ ಶ ನೀಡಿದರೆ, ಸಾಕ್ಷಿಗಳಾಗಲು ಮುಂಬರುತ್ತಿರುವವರು ಪ್ರತೀ ಕಾರಕ್ಕೆ ಹೆದರಬಹುದು ಮತ್ತು ಇದರಿಂದಾಗಿ ತನಿಖೆಯೇ ಪರಿಪೂರ್ಣಗೊಳ್ಳದೆ ಹೋಗಬಹುದು. ನ್ಯಾಯಯುತ, ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ ಮಾತ್ರವಲ್ಲ, ಈ ಹಿಂದೆ ದೌರ್ಜನ್ಯಕ್ಕೊ ಳಗಾದ ಅಮಾಯಕರ ಕುಟುಂಬಗಳಿಗೆ ಭರವಸೆ ನೀಡುವುದು, ಮುಂದೆ ಇಂತಹವು ಮರುಕಳಿಸದಂತಹ ಸುರಕ್ಷಿತ ವಾತಾವರಣವನ್ನು ನಿರ್ಮಿಸುವುದು ಕೂಡಾ ಇದರಲ್ಲಿ ಸೇರಿದೆ.
ಅಮಾಯಕರ ಮೇಲಿನ ಹಿಂಸೆ-ಅಧರ್ಮದ ಪರಮಾವಧ
ಯಾವುದೇ ಧರ್ಮ ಅಥವಾ ಧಾರ್ಮಿ ಕ ನೀ ತಿಯು ಮಹಿಳೆಯರ ವಿರುದ್ಧದ ಹಿಂಸೆಯನ್ನು ಸಮರ್ಥಿಸುವುದಿಲ್ಲಎಂದು ನಾವು ನಂಬಿದ್ದೇವೆ. ಜನರ ನಂಬಿಕೆಯ ಸ್ಥಳದಲ್ಲಿ ಅಂತಹ ಕೃತ್ಯಗಳು ತಡೆಯಿಲ್ಲದೆ ನಡೆಯಲು ಅವಕಾಶ ನೀಡುವುದು ಪರಮ ಅಧರ್ಮವಾಗಿದೆ ಮತ್ತು ಅದನ್ನು ಕಠಿಣವಾಗಿ ಟೀ ಕಿಸಬೇ ಕು. ದೇ ಶಾದ್ಯಂತದ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಧರ್ಮಸ್ಥಳಕ್ಕೆ ಸಾಂತ್ವನ ಮತ್ತು ನೆಮ್ಮದಿಯನ್ನರಸಿ ಶ್ರದ್ಧೆಯಿಂದ ಭೇ ಟಿ ನೀ ಡುತ್ತಾರೆ, ಆದರೆ ಅವರ ನಂಬಿಕೆ ಮತ್ತು ಶ್ರದ್ಧೆಗಳೇ ಅವರನ್ನು ಅಪಾಯಕ್ಕೆ ತಳ್ಳುವಂತಹವಾಗುವುದಾದರೆ ಅದರಂತಹ ವಿಪರ್ಯಾಸ ಮತ್ತೇನಿರಲು ಸಾಧ್ಯ?
ಪ್ರಭಾವಿಗಳನ್ನು ರಕ್ಷಿಸುವ ಹೆಸರಿನಲ್ಲಿ ಮಹಿಳೆಯರ ಸುರಕ್ಷತೆಯನ್ನು ರಾಜಿ ಮಾಡಿಕೊ ಳ್ಳಲಾಗುವುದಿಲ್ಲ ಮತ್ತು SITಯ ತನಿಖೆಯು ಸಂಪೂರ್ಣ ಸತ್ಯವನ್ನು ಹೊ ರತರುವ ಪ್ರಕ್ರಿಯೆಯನ್ನು ದುರ್ಬ ಲಗೊ ಳಿಸುವುದಿಲ್ಲಎಂಬ ಸ್ಪಷ್ಟವಾದ ಸಂದೇಶವನ್ನು ಸರ್ಕಾರ ನೀಡಬೇ ಕಿದೆ. ಇದಕ್ಕೆ ವಿರುದ್ಧವಿರುವ ಯಾವುದೇ ಹೇಳಿಕೆಗಳನ್ನು ತಕ್ಷಣವೇ ಹಿಂಪಡೆಯಬೇ ಕೆಂದು ನಾವು ಆಗ್ರಹಿಸುತ್ತೇವೆ.
ಈ ಸಂದರ್ಭ ದಲ್ಲಿ ಸಂತ್ರಸ್ತರ ಕುಟುಂಬಗಳೊಂದಿಗೆ ನಾವು ನಿಲ್ಲುತ್ತೇವೆ, ಇದು ನಮ್ಮ ಸಾಮಾಜಿಕ ಜವಾಬ್ದಾರಿ ಎಂದು ನಂಬಿದ್ದೇವೆ. ಮತ್ತು ನಮ್ಮ ಪ್ರಜಾತಾಂತ್ರಿಕ ಸಂಸ್ಥೆಗಳಲ್ಲಿ ನಂಬಿಕೆಯನ್ನು ಮರುಸ್ಥಾಪಿಸುವಂತಹ ನ್ಯಾಯವನ್ನು ನಿರೀಕ್ಷಿಸುತ್ತೇವೆ.
ತನಿಖೆ ಮಹಿಳೆಯರ ಘನತೆ-ಸುರಕ್ಷತೆಯನ್ನು ಕೇಂದ್ರೀಕರಿಸಬೇಕು; ರಾಜಕೀಯ-ಧಾರ್ಮಿಕ ವಿಚಾರಗಳನ್ನಲ್ಲ
ಈ ಇಡೀ ವಿಚಾರಣೆಯು ಸಂಪೂರ್ಣ ವಾಗಿ ಮಹಿಳೆಯರು ಮತ್ತಿತರ ಅಮಾಯಕ ನೊಂದವರಿಗೆ ನ್ಯಾಯ ದೊರಕಿಸುವುದರ ಸುತ್ತ ಕೇಂದ್ರಿತವಾಗಿರಬೇಕೇ ಹೊರತು ಇನ್ನಾವುದೇ ಧಾರ್ಮಿಕ ಅಥವಾ ರಾಜಕೀಯ ವಿಚಾರಗಳ ಸುತ್ತ ಅಲ್ಲ ಎಂದು ನಾವು ಗಟ್ಟಿದನಿಯಲ್ಲಿ ಪ್ರತಿಪಾದಿಸಲು ಬಯಸುತ್ತೇವೆ.
ನಮ್ಮ ಹಕ್ಕೊತ್ತಾಯಗಳು:
1. SIT ತನಿಖೆಯ ಅಬಾಧಿತ ಮುಂದುವರಿಕೆ: ತನಿಖೆಯು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಬೇಕು, ಉತ್ಖನನಗಳು, ವಿಧಿವಿಜ್ಞಾ ನ ವಿಶ್ಲೇಷಣೆ ಮತ್ತು ಸಾಕ್ಷಿಗಳ ರಕ್ಷಣೆಗಾಗಿ ಸಂಪೂರ್ಣ ಎಲ್ಲರೀ ತಿಯಲ್ಲಿಯೂ ಸಂಪನ್ಮೂಲಗಳನ್ನು ಹಂಚಿಕೆ ಮಾಡಬೇಕು. ಸೌಜನ್ಯ, ಪದ್ಮಲತಾ ಮತ್ತು ವೇದವಲ್ಲಿ ಅವರ ಪ್ರಕರಣಗಳು ಸೇರಿದಂತೆ ಎಲ್ಲಾ ಸಂಬಂಧಿತ ಪ್ರಕರಣಗಳನ್ನು ಸಮಗ್ರವಾಗಿ ಮರು-ತನಿಖೆ ಮಾಡಬೇಕು.
2. ಪೂರ್ವ ನಿರ್ಧಾರಿತ ಹೇ ಳಿಕೆಗಳ ನಿಯಂತ್ರಣ: ಗೃಹ ಸಚಿವರು ತಮ್ಮ ವಿಧಾನಸಭಾ ಹೇಳಿಕೆಯನ್ನು ಸಾರ್ವಜನಿಕವಾಗಿ ಹಿಂಪಡೆಯಬೇಕು, ಮಹಿಳಾ ಮತ್ತು ಮಕ್ಕಳ ಕಲ್ಯಾ ಣ ಇಲಾಖೆಯ ಸಚಿವರಿಗೆ ಮಹಿಳೆಯರ ಸುರಕ್ಷೆ ಆದ್ಯತೆಯಾಗಬೇಕು. ಮತ್ತು ತನಿಖೆಯ ಮೇ ಲೆ ಪ್ರಭಾವ ಬೀ ರುವ ಯಾವುದೇ ಹೇ ಳಿಕೆಗಳನ್ನು ನೀಡುವುದನ್ನು ಸರ್ಕಾರದ ಕ್ಯಾ ಬಿನೆಟ್ ಸದಸ್ಯರು ಮತ್ತು ಇನ್ನಿತರ ಜನಪ್ರತಿನಿಧಿಗಳು ನಿಲ್ಲಿಸಬೇ ಕು. ಸಾಕ್ಷಿಗಳು ಅಥವಾ ಸಂತ್ರಸ್ತರ ಕುಟುಂಬಗಳನ್ನು ಬೆದರಿಸುವುದನ್ನು ತಪ್ಪಿಸಲು ಸಂಪೂರ್ಣ ನಿಷ್ಪಕ್ಷಪಾತ ನಡವಳಿಕೆ ಮತ್ತು ತಟಸ್ಥತೆಯನ್ನು ಎತ್ತಿಹಿಡಿಯಬೇಕು.
3. ಸಾಕ್ಷಿ ರಕ್ಷಣೆ ಮತ್ತು ಬೆಂಬಲ: ಮಾಹಿತಿ ನೀ ಡುವವರು ಮತ್ತು ಸಾಕ್ಷಿಗಳನ್ನು ರಕ್ಷಿಸಲು ಅವರಿಗೆ ಪೊಲೀ ಸ್ ರಕ್ಷಣೆ ನೀಡಬೇಕು, ಅವರ ಹೇ ಳಿಕೆಗಳನ್ನು ನೀ ಡಲು ಸುರಕ್ಷಿತ , ಗೌಪ್ಯ (confidential) ವ್ಯವಸ್ಥೆ ಒದಗಿಸುವುದು ಸೇ ರಿ ಇತರೆ ತಕ್ಷಣದ ಕ್ರಮಗಳನ್ನು ಕೈ ಗೊ ಳ್ಳಬೇ ಕು. ಪಕ್ಷಪಾತದ ಹೇ ಳಿಕೆಗಳಿಂದ ಉಂಟಾಗುವ ಯಾವುದೇ ಬೆದರಿಕೆಗಳನ್ನು ಸರ್ಕಾರವು ಪರಿಹರಿಸಬೇಕು.
4. ಧಾರ್ಮಿಕ ಸ್ಥಳಗಳು ಸೇರಿದಂತೆ ಎಲ್ಲಾ ಸಾರ್ವ ಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯ ಮೇಲೆ ಗಮನ: ಎಲ್ಲಾ ಯಾತ್ರಾ ಕೇಂದ್ರಗಳಲ್ಲಿ ಕಟ್ಟುನಿಟ್ಟಾದ ಭದ್ರತಾ ಪ್ರೋಟೋ ಕಾಲ್ಗಳನ್ನು ಜಾರಿಗೊ ಳಿಸಿ, CCTV ಕಣ್ಗಾವಲು, ಮಹಿಳೆಯರಿಗಾಗಿ ಸಹಾಯ ಕೇಂದ್ರಗಳು ಮತ್ತು ಲಿಂಗಾಧಾರಿತ ಹಿಂಸಾಚಾರದ ಬಗ್ಗೆ ಜಾಗೃತಿ ಅಭಿಯಾನಗಳು ಜಾರಿಯಾಗಬೇಕು.
5. ಲಿಂಗ ನ್ಯಾಯ ಮತ್ತು ಹೊಣೆಗಾರಿಕೆ: SIT ಯ ಪ್ರಗತಿಯನ್ನು ಬೆಂಬಲಿಸಲು ಮತ್ತು ಸಹಾಯ ಮಾಡಲು ಮಹಿಳಾ ಹಕ್ಕುಗಳ ತಜ್ಞರನ್ನು ಒಳಗೊ ಂಡ ಸ್ವತಂತ್ರ ಸಹಾಯಕ ಸಮಿತಿಯನ್ನು ಸ್ಥಾಪಿಸಬೇಕು. ಬಾಧಿತ ಕುಟುಂಬಗಳಿಗೆ ರಕ್ಷಣೆ, ಪರಿಹಾರ ಮತ್ತು ಪುನರ್ವಸತಿ ಖಚಿತಪಡಿಸಬೇಕು. ತನಿಖೆಯನ್ನು ಪ್ರಭಾವಿಸುವ ರೀತಿಯಲ್ಲಿ ಹೇ ಳಿಕೆ ನೀ ಡುವ, ಪತ್ರ ಬರೆಯುವ ಮತ್ತು ಒತ್ತಡ ಹೇರುವ ಮೂಲಕ ಸತ್ಯವನ್ನು ಮುಚ್ಚಿಹಾಕುವುದರಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿಗಳು ಅಥವಾ ಸಂಸ್ಥೆಗಳನ್ನು- ರಾಜಕೀ ಯ ನಾಯಕರು ಮತ್ತು ಅವರ ಸಂಘಟನೆಗಳನ್ನೂ ಸೇ ರಿದಂತೆ- ಹೊ ಣೆಗಾರರನ್ನಾಗಿ ಮಾಡಿ, ಕ್ರಮ ಕೈಗೊಳ್ಳಬೇ ಕು.
6. ಸಾರ್ವಜನಿಕ ಜಾಗೃತಿ ಮತ್ತು ಸಂವೇದನೆ: ಮಹಿಳೆಯರ ವಿರುದ್ಧದ ಹಿಂಸಾಚಾರವು ಯಾವುದೇ ಧಾರ್ಮಿ ಕ ಅಥವಾ ಸಾಂಸ್ಕೃತಿಕ ಮೌಲ್ಯಕ್ಕೆ ವಿರುದ್ಧವಾಗಿದೆ ಎಂದು ಒತ್ತಿಹೇಳುವ ರಾಜ್ಯವ್ಯಾಪಿ ಅಭಿಯಾನಗಳನ್ನು ಪ್ರಾರಂಭಿಸಬೇಕು.
ಧರ್ಮಸ್ಥಳದ ದೇವತೆಯಲ್ಲಿ ನಂಬಿಕೆ ಇಟ್ಟಿರುವ ಭಕ್ತರು ಮತ್ತು ಸಾಮಾನ್ಯ ಜನರಿಗೆ ನಾವು ಮನವಿ ಮಾಡುತ್ತೇವೆ; ನಿಜವಾದ ಭಕ್ತಿಯು ಸತ್ಯ ಮತ್ತು ನ್ಯಾಯದ ಮೂಲಕ ಧರ್ಮ ವನ್ನು ಎತ್ತಿಹಿಡಿಯುವುದರಲ್ಲಿ ಅಡಗಿದೆ. ಮಹಿಳೆಯರ ವಿರುದ್ಧದ ಹಿಂಸಾಚಾರವನ್ನು ಅನುಮತಿಸುವುದು ಅಥವಾ ನಿರ್ಲಕ್ಷಿಸುವುದು ದೇ ವಾಲಯವು ಒಳಗೊಂಡಿರುವ ಸಹಾನುಭೂತಿ ಮತ್ತು ರಕ್ಷಣೆಯ ತತ್ವಗಳಿಗೆ ವಿರುದ್ಧವಾಗಿದೆ. ಈ ಮೂಲಭೂತ ಸಂಗತಿಗಳನ್ನು ಮನೆಮನೆಗೆ ಮುಟ್ಟಿಸೋಣ, ಧಾರ್ಮಿಕ ಸ್ಥಳಗಳನ್ನು ಎಲ್ಲರಿಗೂ, ವಿಶೇಷವಾಗಿ ಅಂಚಿನಲ್ಲಿರುವವರಿಗೆ ಸುರಕ್ಷತೆಯ ತಾಣಗಳನ್ನಾಗಿ ಮಾಡೋಣ.
ಈ ಹಕ್ಕೊ ತ್ತಾಯಗಳು ಕಾರ್ಯ ಗತಗೊ ಳ್ಳುವಂತಾಗಲು ಮಾಧ್ಯಮ, ನಾಗರಿಕ ಸಮಾಜ ಮತ್ತು ಕಾಳಜಿಯುಳ್ಳ ಸಾರ್ವ ಜನಿಕರು ನಮ್ಮೊಂದಿಗೆ ಸೇ ರಿಕೊ ಳ್ಳುವಂತೆ ʻನಾವೆದ್ದು ನಿಲ್ಲದಿದ್ದರೆ-ಕರ್ನಾಟಕʼ ಕರೆ ನೀ ಡುತ್ತದೆ. ಸಮಕಾಲೀನ ಸಂದರ್ಭ ದ ಈ ಪ್ರಮುಖ ವಿಷಯದ ಬಗ್ಗೆ ಗಂಭೀ ರ ಸಾರ್ವ ಜನಿಕ ಚರ್ಚೆ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಾ ದ್ಯಂತ ಜಾಗೃತಿ ಅಭಿಯಾನಗಳನ್ನು ಆಯೋ ಜಿಸಲು ʼನಾವೆದ್ದು ನಿಲ್ಲದಿದ್ದರೆ-ಕರ್ನಾ ಟಕʼ ಬದ್ಧವಾಗಿದೆ.
ಇಂತಹ ಗಂಭೀರ ಪ್ರಕರಣಗಳು ನಡೆಯುವುದನ್ನೇ ನಿಯಂತ್ರಿಸುವ ನಿಟ್ಟಿನಲ್ಲಿ, ಲಿಂಗ-ಸೂಕ್ಷ್ಮ ಪೊಲೀಸ್ ಮತ್ತು ತನಿಖಾ ಪ್ರೋಟೋ ಕಾಲ್ಗಳನ್ನು ರಾಜ್ಯಾದ್ಯಂತ ಬಲಪಡಿಸಲು ನಾಗರಿಕ ಸಮಾಜದೊಂದಿಗೆ ಸಂವಾದದಲ್ಲಿ ತೊಡಗಿಸಿಕೊಳ್ಳುವಂತೆ ನಾವು ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತೇವೆ. ಇಂತಹ ಮುನ್ನೆಚ್ಚರಿಕೆಯ ಹೆಜ್ಜೆಗಳಿಂದ ಮಾತ್ರವೇ ಲಿಂಗಾಧಾರಿತ ಹಿಂಸಾಚಾರದ ಹೆಚ್ಚುತ್ತಿರುವ ಪ್ರಕರಣಗಳನ್ನು ತಡೆಗಟ್ಟುವ ಪರಿಣಾಮಕಾರಿ ಕಾರ್ಯ ವಿಧಾನವನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ.
ಪತ್ರಿಕಾ ಘೋಷ್ಟಿಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಕೆ ಎಸ್ ವಿಮಲ, ಸಾಮಾಜಿಕ ಕಾರ್ಯಕರ್ತೆ ಮಮತಾ ಯಜಮಾನ್, ಲಿಂಗತ್ವ ಅಲ್ಪಸಂಖ್ಯಾತರ ಹೋರಾಟಗಾತಿ ಸನಾ, ವಕೀಲರಾದ ಪೂರ್ಣಾ ರವಿಶಂಕರ್, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆಯ ಗಾಂಧಿಮದಿ ಇದ್ದರು.
ಇದನ್ನೂ ನೋಡಿ: ‘ಎಡಿಟೆಡ್ ವಿಡಿಯೋ’ ಬಗ್ಗೆ ಘನಘೋರ ಚರ್ಚೆ ನಾಚಿಗೆಗೇಡು | ‘ಹರೀಶ್ ಪೂಂಜಾರನ್ನು ಅಮಾನತು ಮಾಡಿ’ – ನವೀನ್ ಸೂರಿಂಜೆ
