ಪ್ರಜಾಪ್ರಭುತ್ವ-ವಿರೋಧಿ 3 ಮಸೂದೆಗಳಿಗೆ ಸಿಪಿಐ(ಎಂ) ಪಕ್ಷ  ಪೊಲಿಟ್ ಬ್ಯುರೊ ಖಂಡನೆ

ದೆಹಲಿ : ಪ್ರತಿಪಕ್ಷಗಳ ರಾಜ್ಯ ಸರಕಾರಗಳ ವಿರುದ್ಧ ಅಸ್ತ್ರವಾಗಿ ಬಳಸಲು ಮೂರು ಪ್ರಜಾಪ್ರಭುತ್ವ-ವಿರೋಧಿ ಮಸೂದೆಗಳು” ಮಂಡಿಸುವ ಮೋದಿ ಸರ್ಕಾರದ ನಡೆಯನ್ನು ಸಿಪಿಐ(ಎಂ) ಪಕ್ಷ  ಪೊಲಿಟ್ ಬ್ಯುರೊ ಖಂಡಿಸಿದೆ.

ಇದನ್ನೂ ಓದಿ: ಭೂಸ್ವಾಧೀನ ವಿರೋಧಿಸಿ ತಾಲ್ಲೂಕು ಕಚೇರಿಗೆ ರೈತರು ಮುತ್ತಿಗೆ

ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ಮತ್ತು ಇತರ ಸಚಿವರನ್ನು 30 ದಿನಗಳ ಬಂಧನದ ನಂತರ ಪದಚ್ಯುತಗೊಳಿಸಲು ಮೂರು ಮಸೂದೆಗಳನ್ನು ಮಂಡಿಸುವ ಮೋದಿ ಸರ್ಕಾರದ ನಡೆಯು ಸ್ಥಾಪಿತ ಕಾನೂನು ಕಾರ್ಯವಿಧಾನಗಳನ್ನು ತಪ್ಪಿಸುವ ಅದರ ಪ್ರಜಾಪ್ರಭುತ್ವ ವಿರೋಧಿ ಪ್ರವೃತ್ತಿಯನ್ನು ಎತ್ತಿ ತೋರುತ್ತದೆ ಎಂದು ಸಿಪಿಐ(ಎಂ) ಪಕ್ಷ  ಪೊಲಿಟ್ ಬ್ಯುರೊ ಖಂಡಿಸಿದೆ ಎಂದು ಪತ್ರಿಕಾಪ್ರಕಟಣೆಯಲ್ಲಿತಿಳಿಸಿದೆ.

ಈ ಹಿಂದೆಯೂ ಸಹ ಬಿಜೆಪಿ ಸದಾ ನ್ಯಾಯಾಂಗ ಪರಿಶೀಲನೆಯನ್ನು ತಪ್ಪಿಸಲು, ವಿಶೇಷವಾಗಿ ‘ಹೇಯ ಕೃತ್ಯಗಳು’ ಎಂದು ಪ್ರತ್ಯೇಕಿಸಿ ತೋರಿಸಿ ಒಂದು ಸಾರಾಸಗಟು ಶಾಸನವನ್ನು ಹೇರುವ ಪ್ರವೃತ್ತಿಯನ್ನು ತೋರಿಸಿದೆ. ಪ್ರಸ್ತುತ ಸರ್ಕಾರದ ನವ-ಫ್ಯಾಸಿಸ್ಟ್ ಪ್ರವೃತ್ತಿಗಳನ್ನು ಗಮನಿಸಿದರೆ, ಇದನ್ನು ಪ್ರತಿಪಕ್ಷಗಳ ರಾಜ್ಯ ಸರ್ಕಾರಗಳನ್ನು ಗುರಿಯಾಗಿಸಲು ಒಂದು ಅಸ್ತ್ರವಾಗಿ ಬಳಸಲಾಗುತ್ತದೆ ಎಂಬುದು ಸ್ವಯಂವೇದ್ಯ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ, ಈ ನಡೆ ಅಸಹ್ಯಕರವಾಗಿದೆ ಮತ್ತು ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳುವುದಕ್ಕೆ ಅಗತ್ಯವಾದ ತಡೆಗಳು ಮತ್ತು ಸಮತೋಲನಗಳನ್ನು ದುರ್ಬಲಗೊಳಿಸುತ್ತದೆ, ನಿಜವಾದ ಆಶಯವನ್ನು ಮರೆಮಾಚುವ ಆಶಯದಿಂದಷ್ಟೇ ಮಾತ್ರ ಅಪರಾಧದ ಬಗ್ಗೆ ಉಲ್ಲೇಖ ಮಾಡಲಾಗಿದೆ ಎಂದು ಹೇಳಿದೆ.

ಇದನ್ನೂ ನೋಡಿ: ‘ಎಡಿಟೆಡ್ ವಿಡಿಯೋ’ ಬಗ್ಗೆ ಘನಘೋರ ಚರ್ಚೆ ನಾಚಿಗೆಗೇಡು‌ | ‘ಹರೀಶ್ ಪೂಂಜಾರನ್ನು ಅಮಾನತು ಮಾಡಿ’ – ನವೀನ್ ಸೂರಿಂಜೆ

Donate Janashakthi Media

Leave a Reply

Your email address will not be published. Required fields are marked *