ಮುಂಬೈ | ಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ಇಬ್ಬರು ಮೃತ, 117 ಜನರಿಗೆ ಗಾಯ

ಮುಂಬೈ : ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ  ಆಚರಿಸಲಾಗುವ ಮೊಸರು ಗಡಿಗೆ ಒಡೆಯುವ ಆಚರಣೆಯಲ್ಲಿ ಇಬ್ಬರು ಮೃತಪಟ್ಟು 117 ಜನರು ಗಾಯಗೊಂಡಿದ್ದಾರೆ.

ಮುಂಬೈ ಹಾಗೂ ಥಾಣೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದು 117 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಮೊಸರು ಗಡಿಗೆ ಹೊಡೆಯುವ ಆಚರಣೆಯಲ್ಲಿ ಬಾಲಿವುಡ್ ನಟರಾದ ಗೋವಿಂದ, ಚಂಕಿ ಪಾಂಡೆ ಮತ್ತು ಸುನಿಲ್ ಶೆಟ್ಟಿ ಭಾಗವಹಿಸಿದ್ದರು.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ ಮೇಘಸ್ಫೋಟ: ಮೃತಪಟ್ಟವರ ಸಂಖ್ಯೆ 60ಕ್ಕೆ ಏರಿಕೆ

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಶಿವಸೇನೆ (ಯುಬಿಟಿ) ಹಾಗೂ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ (ಎಂಎನ್ಎಸ್) ಕೆಲ ನಾಯಕರು ಒಂದೇ ವೇದಿಕೆಯಲ್ಲಿ ಸೇರಿ ಸಂಭ್ರಮದಲ್ಲಿ ಪಾಲ್ಗೊಂಡರು. ಹಾಗೇ ಬಿಜೆಪಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಎನ್‌ಸಿಪಿಯ ಅಜಿತ್‌ ಪವಾರ್‌ ಸೇರಿದಂತೆ ಹಲವಾರು ನಾಯಕರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.

ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಯುವಕರು ಹಾಗೂ ಯುವತಿಯರ ತಂಡಗಳು ಮಾನವ ಪಿರಮಿಡ್ ರಚಿಸುತ್ತಾರೆ. ನಂತರ ಹಗ್ಗದಲ್ಲಿ ನೇತಾಡುತ್ತಿದ್ದ ಮೊಸರು ಕುಡಿಕೆ ಒಡೆದ ಸಂಭ್ರಮಿಸುತ್ತಾರೆ.

ಇದನ್ನೂ ನೋಡಿ: ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತಗಳು ಮತ್ತು ಪರಿಹಾರ Janashakthi Media | DYFI

Donate Janashakthi Media

Leave a Reply

Your email address will not be published. Required fields are marked *