ತ್ರಿಪುರ | ಹೆಣ್ಣು ಮಗು ಜನಿಸಿದಕ್ಕೆ ಬಿಸ್ಕತ್​ನಲ್ಲಿ ವಿಷಹಾಕಿದ ಯೋಧ

ಅಗರ್ತಲಾ: ರಥೀಂದ್ರ ದೆಬ್ಬಾರ್ಮ್ ಹಾಗೂ ಮಿತಾಲಿ ದೆಬ್ಬಾರ್ಮ್​ ದಂಪತಿಗೆ ಎರಡು ಹೆಣ್ಣು ಮಕ್ಕಳಿವೆ. ಇದರಲ್ಲಿ  2ನೇ ಮಗು ಸುಹಾನಿ, ತನ್ನ ತಂದೆಯಿಂದಲೇ ಜೀವ ಕಳೆದುಕೊಂಡಿದೆ. ಈ ಬಗ್ಗೆ ಆರೋಪ ಮಾಡಿರುವ ಹೆಂಡತಿ ನನ್ನ ಗಂಡನಿಂದಲೇ ಮಗು ಇಲ್ಲವಾಗಿದೆ ಎಂದು ದುಃಖಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಗಂಡು ಮಗು ಹುಟ್ಟಲಿಲ್ಲ ಅಂತ ಒಂದು ವರ್ಷದ ಹೆಣ್ಣು ಮಗುವಿಗೆ ಯೋಧರೊಬ್ಬರು ಬಿಸ್ಕತ್​ನಲ್ಲಿ ವಿಷ ಇಟ್ಟು ತಿನಿಸಿ ಜೀವ ತೆಗೆದಿದ್ದಾರೆ. ತ್ರಿಪುರಾದ ಖೊವೈ ಜಿಲ್ಲೆಯ ಬೆಹಲಬಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತ್ರಿಪುರ

ಇದನ್ನೂ ಓದಿ :  ಆಗಸ್ಟ್‌ 11ರಿಂದ ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭ

ಜಿಲ್ಲೆಯ ಬೆಹಲಬಾರಿ ಗ್ರಾಮದ ರಥೀಂದ್ರ ದೆಬ್ಬಾರ್ಮ್ ಜೀವ ತೆಗೆದ ಆರೋಪಿ. ಇವರು ತ್ರಿಪುರಾ ಸ್ಟೇಟ್ ರೈಫಲ್ಸ್ (ಟಿಎಸ್​​ಆರ್​)​ನ ಬೆಟಲಿಯಾನ್​ 10ರಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಗಳ ಜೀವ ತೆಗೆದ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಕೋರ್ಟ್​ ವಿಚಾರಣೆ ನಡೆಸಿ ಆರೋಪಿಯನ್ನು 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ಹೇಳಲಾಗಿದೆ. ತ್ರಿಪುರ

ಮತ್ತೊಂದು ಹೆಣ್ಣು ಮಗು ಹುಟ್ಟಿದ್ದಕ್ಕೆ ನನ್ನನ್ನು ನಿತ್ಯ ನಿಂದಿಸುತ್ತಿದ್ದರು. ಕೂದಲು ಹಿಡಿದು ಎಳೆದಾಡಿ ಹೊಡೆಯುತ್ತಿದ್ದರು. ಗಂಡು ಮಗು ಹುಟ್ಟಲಿಲ್ಲ ಎನ್ನುತ್ತಿದ್ದರು. ಮಗುನ ಮುಗಿಸಿದ್ದಕ್ಕೆ ಗಂಡನಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆಯಾಗಬೇಕು ಎಂದು ಮಿತಾಲಿ ಆಗ್ರಹವಾಗಿದೆ. ಸದ್ಯ ಪೊಲೀಸರು ಆರೋಪಿಯನ್ನ ವಿಚಾರಣೆ ನಡೆಸುತ್ತಿದ್ದಾರೆ. ತ್ರಿಪುರ

ಮಿತಾಲಿ ತನ್ನ ಮಕ್ಕಳೊಂದಿಗೆ ಸಹೋದರಿಯ ಊರಿಗೆ ಹೋಗಿದ್ದಳು. ಈ ವೇಳೆ ಗಂಡ ಕೂಡ ಜೊತೆಗೆ ಬಂದಿದ್ದನು. ಮನೆಯಲ್ಲಿ ಇರುವಾಗ ಬಿಸ್ಕೆತ್​ ಕೊಡಿಸುವುದಾಗಿ ನನ್ನ ಮಗಳು ಸುಹಾನಿ ಹಾಗೂ ಸಹೋದರಿಯ ಮಗನನ್ನು ಕರೆದುಕೊಂಡು ಸಮೀಪದ ಅಂಗಡಿಗೆ ಹೋಗಿದ್ದರು. ಇದಾದ ಮೇಲೆ ಮಗಳು ವಾಂತಿ ಮಾಡಲು ಶುರು ಮಾಡಿದಳು. ಅವಳ ಬಾಯಿಂದ ಮೆಡಿಸೆನ್​ ವಾಸನೆ ಬರುತ್ತಿತ್ತು. ಇದಕ್ಕೆ ಏನಾದರೂ ತಿನ್ನಿಸಿದ್ದೀಯಾ ಎಂದು ಗಂಡನನ್ನ ಕೇಳಿದ್ದೆ. ಅವರು ಏನನ್ನು ಒಪ್ಪಲಿಲ್ಲ. ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಜೀವ ಹೋಗಿದೆ ಅಂತ ವೈದ್ಯರು ಹೇಳಿದರು ಎಂದು ತಾಯಿ ಮಿತಾಲಿ ಹೇಳಿದ್ದಾರೆ.

ಇದನ್ನೂ ನೋಡಿ : ಧರ್ಮಸ್ಥಳದಲ್ಲಿ ದೌರ್ಜನ್ಯ ನಡೆಸಿದವರು ಕಟಕಟೆಗೆ ಬರಬೇಕು, ಅವರಿಗೆ ಶಿಕ್ಷೆಯಾಗಬೇಕು Janashakthi Media

 

Donate Janashakthi Media

Leave a Reply

Your email address will not be published. Required fields are marked *