ಧರ್ಮಸ್ಥಳ: ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಪ್ರಕರಣದ ಸಂಬಂಧ SIT ಯ ಒಂದು ತಂಡ ಧರ್ಮಸ್ಥಳ ಗ್ರಾಮ ಪಂಚಾಯತ್ ಗೆ ಬಂದು ಹಲವಾರು ದಾಖಲೆಗಳನ್ನು ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.
1995 ರಿಂದ 2014 ರವರೆಗೆ ಕರ್ತವ್ಯ ಮಾಡಿದ ಪಿಡಿಒ ಗಳು, ಇತರ ಅಧಿಕಾರಿಗಳು, ವಿ.ಎ ಗಳ ಬಗೆಗಿನ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ: ಮುಂಬೈ ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗೆ ಬಿಜೆಪಿ ವಕ್ತಾರೆ ಆರತಿ ಸಾಥೆ ನೇಮಕ
ಎಸ್.ಐ.ಟಿ ಇನ್ಸ್ಪೆಕ್ಟರ್ ಸಂಪತ್ ಆಗಸ್ಟ್ 6 ರಂದು ಬೆಳಗ್ಗೆ ಗ್ರಾಮ ಪಂಚಾಯತಿಗೆ ಆಗಮಿಸಿ ದಾಖಲೆ ವಶಕ್ಕೆ ಪಡೆದುಕೊಂಡಿದ್ದಾರೆ.
ಧರ್ಮಸ್ಥಳ ಗ್ರಾಮದ ಕಾಡಿನಲ್ಲಿ ಎಂಟನೇ ದಿನದ ಶೋಧ ನಡೆಯುತ್ತಿದ್ದು, ಸಾಕ್ಷಿ ದೂರುದಾರ, ಗುರುತಿಸದ ಜಾಗಕ್ಕೆ ಅಧಿಕಾರಿಗಳನ್ನು ಕರೆದೊಯ್ದಿದ್ದಾನೆ. ಆತ ಇದುವರೆಗೆ ತೋರಿಸಿದ್ದ 13ನೇ ಜಾಗವನ್ನು ಹೊರತುಪಡಿಸಿ, ಉಳಿದೆಲ್ಲ ಜಾಗಗಳಲ್ಲಿ ಎಸ್ಐಟಿ ಶೋಧ ಕಾರ್ಯ ಪೂರ್ಣಗೊಳಿಸಿದೆ.
ಇದನ್ನೂ ನೋಡಿ: ಕಲ್ಬುರ್ಗಿ ಕೇಂದ್ರೀಯ ವಿವಿಯಲ್ಲಿ ದಲಿತ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಕಾರಣರಾರು? Janashakthi Media
