ಮೈಸೂರು: ಬಾಡಿಗೆ ವಿಚಾರದಲ್ಲಿ ಮಾಹಿತಿ ಪಡೆಯಲು ಮನೆ ಮಾಲೀಕನನ್ನ ವಿಧಯಾರಣ್ಯಪುರಂ ಠಾಣೆಗೆ ಕರೆಸಿದ ಇನ್ಸ್ಪೆಕ್ಟರ್ ಮೋಹಿತ್ ಹಾಗೂ ಸಿಬ್ಬಂದಿ ರಮೇಶ್ ಎಂಬುವರು ಹಲ್ಲೆ ನಡೆಸಿದ್ದಾರೆಂದು ಜೆಪಿ ನಗರದ ನಿವಾಸಿ ಚೆಲುವರಾಯ ಸ್ವಾಮಿ ಎಂಬುವರು ಆರೋಪಿಸಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ನೀಡಿದ್ದಾರೆ.
ಜೆಪಿ ನಗರದ ನಿವಾಸಿ ಚೆಲುವರಾಯಸ್ವಾಮಿ ರವರು ತಮ್ಮ ಮನೆಯ ಒಂದು ಭಾಗದ ಮಳಿಗೆಯನ್ನ ದಂಪತಿಗೆ ಹೋಟೆಲ್ ನಡೆಸಲು ಬಾಡಿಗೆ ನೀಡಿದ್ದರು.11 ತಿಂಗಳ ಅವಧಿಗೆ ಕರಾರು ಮಾಡಿಕೊಳ್ಳಲಾಗಿತ್ತು.
7 ತಿಂಗಳು ಹೋಟೆಲ್ ನಡೆಸಿದ ದಂಪತಿ ಮುಂದುವರೆಸಲು ಸಾಧ್ಯವಿಲ್ಲವೆಂದು ಹೇಳಿ ಮುಂಗಡ ಹಣ ಹಿಂದಿರುಗಿಸುವಂತೆ ಮನವಿ ಮಾಡಿದ್ದರು. ಮಾತುಕತೆಯಂತೆ ಎರಡು ತಿಂಗಳ ಹಣ ಹಿಂದಿರುಗಿಸಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ವೇತನ ಬೇಡಿಕೆಯ ಈಡೇರಿಕೆ ಸದ್ಯದ ಸ್ಥಿತಿಯಲ್ಲಿ ಅಸಾಧ್ಯ: ಸರ್ಕಾರದ ವಾದ
ಆದ್ರೆ ದಂಪತಿ ವಿದ್ಯಾರಣ್ಯಪುರಂ ಠಾಣೆಗೆ ತೆರಳಿ ಹಣ ಹಿಂದಿರುಗಿಸಿಲ್ಲವೆಂದು ದೂರು ನೀಡಿದ್ದಾರೆಂದು ಚೆಲುವರಾಯಸ್ವಾಮಿ ಆರೋಪಿಸಿದ್ದಾರೆ.
ಈ ವಿಚಾರದಲ್ಲಿ ಚೆಲುವರಾಯಸ್ವಾಮಿಯವರನ್ನ ವಿಚಾರಣೆಗಾಗಿ ಠಾಣೆಗೆ ಕರೆಸಿದ್ದಾರೆ.ಠಾಣೆಗೆ ಬಂದ ಚೆಲುವರಾಯಸ್ವಾಮಿಯನ್ನ ಇನ್ಸ್ಪೆಕ್ಟರ್ ಮೋಹಿತ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದರೆಂದು ಆರೋಪಿಸಲಾಗಿದೆ.
ಮೋಹಿತ್ ಜೊತೆಗೆ ಸಿಬ್ಬಂದಿ ರಮೇಶ್ ಎಂಬುವರೂ ಸಹ ಹಲ್ಲೆ ನಡೆಸಿದ್ದಾರೆಂದು ಚೆಲುವರಾಯಸ್ವಾಮಿ ಆರೋಪಿಸಿದ್ದಾರೆ. ಹಣ ನೀಡದಿದ್ದಲ್ಲಿ ಅತ್ಯಾಚಾರ ಯತ್ನ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದರೆಂದು ಚೆಲುವರಾಯಸ್ವಾಮಿ ಆರೋಪಿಸಿದ್ದಾರೆ.
ಹಲ್ಲೆಗೆ ಒಳಗಾದ ಚೆಲುವರಾಯಸ್ವಾಮಿ ಇನ್ಸ್ಪೆಕ್ಟರ್ ಮೋಹಿತ್ ಹಾಗೂ ರಮೇಶ್ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಇದನ್ನೂ ನೋಡಿ: ಭೂಮಿ ಕಸಿದುಕೊಳ್ಳಲು ಬಂದ ನೈಸ್ ಕಂಪನಿ ವಿರುದ್ಧ ರೈತರ ಪ್ರತಿಭಟನೆ Janashakthi Media
