ಪ್ರರುಷ ಪ್ರಧಾನ ಕ್ರೌರ್ಯದ ಭಾಗ ಮಹಿಳೆಯರ ಮೇಲಿನ ಅಮಾನುಷ ದಾಳಿಗೆ ಸಾಕ್ಷಿ

ಮಂಡ್ಯ: ಮಹಿಳೆಯೆಂದರೆ ಕಾಡುಪ್ರಾಣಿಗಳಿಗಿಂತಲೂ ಕೀಳು ಎಂಬಂತಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಲ್ಲೂರು ಗ್ರಾಮದ ಚಂದನ್ ಎಂಬ ಯುವಕ ಜಮೀನಿನ ವಿಚಾರಕ್ಕೆ ಆಕ್ರೋಶಭರಿತನಾಗಿ ರೌದ್ರಾವತಾರ ತಾಳಿ ಇಬ್ಬರು ಮಹಿಳೆಯರನ್ನು ಅಟ್ಟಾಡಿಸಿಕೊಂಡು ಹಲ್ಲೆ ನಡೆಸುತ್ತಿರುವ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಪ್ರರುಷ

ಅದನ್ನು ನೋಡಿ ಜನವಾದಿ ಮಹಿಳಾ ಸಂಘಟನೆಯ ನಿಯೋಗ ಮಳವಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಹಲ್ಲೆಗೊಳಗಾದ ಮಹಿಳೆಯರನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಲಾಯ್ತು. ನಂತರ ಪೊಲೀಸ್ ಠಾಣೆಗೆ ತೆರಳಿ ಇನ್ಸ್‌ಪೆಕ್ಟರ್‌ರವರನ್ನ ಭೇಟಿ ಮಾಡಿ ಕೇಸು ದಾಖಲಾಗಿರುವ ಕುರಿತು ವಿಚಾರಿಸಿ ಆರೋಪಿಯನ್ನ ತಕ್ಷಣ ಬಂಧಿಸುವಂತೆ ಆಗ್ರಹಿಸಲಾಯ್ತು. ಪ್ರರುಷ

ಈ ಬಗ್ಗೆ ಮಾಹಿತಿ ನೀಡಿದ ಇನ್ಸ್‌ಪೆಕ್ಟರ್ ‘FIR ಆಗಿದೆ . ಆರೋಪಿಯ ಹುಡುಕಾಟದಲ್ಲಿದ್ದೇವೆ ನಾಳೆಯೊಳಗೆ ಬಂಧಿಸುತ್ತೇವೆ’ ಎಂದು ಹೇಳಿದ್ದಾರೆ. ಪ್ರರುಷ

ಇದನ್ನೂ ಓದಿ: ರಿಟರ್ನಿಂಗ್ ಅಧಿಕಾರಿಯನ್ನು ನೇಮಿಸುವ ಮೂಲಕ ಉಪರಾಷ್ಟ್ರಪತಿ ಆಯ್ಕೆ

ಜನವಾದಿ ಮಹಿಳಾ ಸಂಘಟನೆಯ ನಿಯೋಗ ಭೇಟಿ ಮಾಡಿ ವಿಚಾರಿಸಿದಾಗ ಮನ ಬಂದಂತೆ ಥಳಿಸಿ, ಅಟ್ಟಾಡಿಸಿಕೊಂಡು ಹಲ್ಲೆ ಮಾಡಿರುವುದು ಕಂಡು ಬಂದಿದೆ.ಮಹಿಳೆಯರು ಎಂಬುದನ್ನೂ ಪರಿಗಣಿಸದೆ ಹಲ್ಲೆ ನಡೆಸಿರುವುದು ಖಂಡನೀಯ. ಮಹಿಳೆಯರ ಮೇಲೆ ಹೇಗೆ ಬೇಕಾದರೂ ದೌರ್ಜನ್ಯ ನಡೆಸಬಹುದು, ಪುರುಷ ಪ್ರಧಾನ ಸಮಾಜದಲ್ಲಿ ನಮ್ಮನ್ನ ಯಾರೂ ಕೇಳುವವರಿಲ್ಲ ಎಂದು ಭಾವಿಸಿ ಪುರುಷ ಪೌರುಷ ಮೆರೆದಿದ್ದಾರೆ.

ಆಕ್ರೋಶ ಭರಿತನಾಗಿ ಥಳಿಸಿರುವ ಘಟನೆ ಬಹಳ ಖಂಡನೀಯ. ಈತನ ಕೈಗೆ ಹರಿತವಾದ ಆಯುಧ ಸಿಕ್ಕಿದ್ದರೆ ಅಲ್ಲಿ ಕೊಲೆಗಳೇ ನಡೆಯುತ್ತಿದ್ದವು. ಅಷ್ಟು ಅಮಾನವೀಯವಾಗಿ, ವಿವೇಕ ಕಳೆದುಕೊಂಡು ಹಲ್ಲೆ ನಡೆಸಿರುವ ಘಟನೆ ಕಂಡು ಬಂದಿರುತ್ತದೆ.

ಮಹಿಳೆಯರ ಪರವಾಗಿರುವ ಕಾನೂನುಗಳು ಕೇವಲ ಕಾಗದದ ಮೇಲೆ ಮಾತ್ರ ಇದ್ದು ಅವು ಸಮರ್ಪಕವಾಗಿ ಜಾರಿಯಾಗದಿರುವುದರಿಂದ ಈ ರೀತಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇಂತಹ ಘಟನೆಗಳು ಕಂಡು ಬಂದಾಗ ಹಲ್ಲೆ ಮಾಡಿದವರ ಮೇಲೆ ಕಠಿಣವಾದ ಕ್ರಮವನ್ನು ಜರುಗಿಸದೆ ಇರುವುದೇ ಇಂಥ ದುಷ್ಕೃತ್ಯಕ್ಕೆ ಕಾರಣ. ಮಹಿಳೆ ಪ್ರತಿ ನಿತ್ಯ ಒಂದಲ್ಲ ಒಂದು ರೀತಿಯ ಶೋಷಣೆಗೆ ಒಳಗಾಗುತ್ತಿದ್ದಾ ಎಂದರು.

ಹಾಗಾಗಿ ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಆರೋಪಿಯ ಮೇಲೆ‌ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ನೋಡಿ: ಮೋಸ ಮಾಡಿದ ಸರ್ಕಾರ | ಆಗಸ್ಟ್ 5ರಿಂದ ಸಾರಿಗೆ ನೌಕರರ ಮುಷ್ಕರ Janashakthi Media

Donate Janashakthi Media

Leave a Reply

Your email address will not be published. Required fields are marked *