ಬೆಂಗಳೂರು: ವರಲಕ್ಷ್ಮಿ ಹಬ್ಬ ಮುಗಿಯುತ್ತಿದ್ದಂತೆ ಮಾರಕಟ್ಟಯಲ್ಲಿ ರಸ್ತೆ ಬದಿಗಳಲ್ಲಿ ಗಣಪತಿ ಮೂರ್ತಿಗಳು ರಾರಾಜಿಸುತ್ತೇವೆ. ಸಕಲ ವಿಘ್ನಗಳನ್ನು ನಿವಾರಿಸಲು ವಿನಾಯಕನನ್ನು ಪೂಜಿಸುವ ದಿನದಂದು ಯಾವ ಯಾವ ತರಹದ ಮೂರ್ತಿಯನ್ನು ಇಟ್ಟು ಪೂಜೆ ಮಾಡಬೇಕು? ಎಂದು ಹಲವಾರು ಕ್ರಮಗಳನ್ನು ಕರ್ನಾಟಕದ ಅರಣ್ಯ, ಪರಿಸರ ವಿಜ್ಞಾನ ಇಲಾಖೆ ಕೈಗೊಳುತ್ತದೆ. ಹಾಗಿದ್ದರೆ ಈ ಕುರಿತು ಬಾರಿ ಪರಿಸರ ಇಲಾಖೆ ಯಾವ ಕ್ರಮವನ್ನು ಕೈಗೊಂಡಿದೆ ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ.
ಮುಂದಿನ ತಿಂಗಳು ಆಗಸ್ಟ್ 26 ಮತ್ತು 27 ರಂದು ಗೌರಿ ಮತ್ತು ಗಣೇಶ ಹಬ್ಬಗಳು ಬಂದಿವೆ. ಇದಕ್ಕಾಗಿ ಕರ್ನಾಟಕದ ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ, ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ನಿಂದ ತಯಾರಿಸಿದ ವಿಗ್ರಹಗಳ ಮತ್ತು ಮಾರಾಟದ ವಿರುದ್ಧ ಕಠಿಣ ಕ್ರಮವನ್ನು ಜಾರಿಗೊಳಿಸಲು ಆದೇಶಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿಯನ್ನು ಮಾಡಿದೆ. ಗಣಪತಿ
ಪರಿಸರ ಸ್ನೇಹಿ ಆಚರಣೆಗಳಿಗೆ ಒತ್ತು
ಪರಿಸರ ಉಳಿಸೋಕೆ ಹೆಚ್ಚಿನ ಒತ್ತು ನೀಡಿ ಪರಿಸರ ಸ್ನೇಹಿ ಹಬ್ಬಗಳನ್ನ ಆಚರಿಸೋಕೆ ಪ್ರೋತ್ಸಾಹ ಕೊಡಿ ಅಂತ ಸಚಿವ ಈಶ್ವರ್ ಖಂಡ್ರೆ ಅವರು ಅಧಿಕಾರಿಗಳಿಗೆ ಹೇಳಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಬೆಳ್ತಂಗಡಿಯಲ್ಲಿ ಎಸ್‌ಐಟಿ ಕಚೇರಿ
ಜೇಡಿಮಣ್ಣಿನ ವಿಗ್ರಹ ಬಳಸಿ
ಬಣ್ಣ ಇಲ್ಲದ ಜೇಡಿಮಣ್ಣಿನ ವಿಗ್ರಹ ಬಳಸಿ, ಪಿಒಪಿ ವಿಗ್ರಹಗಳನ್ನ ಮಾಡೋದನ್ನ ನಿಲ್ಲಿಸಿ ಅಂತ ಅವರು ಸಾರ್ವಜನಿಕರಿಗೆ ಸೂಚನೆಯನ್ನು ಕೊಟ್ಟಿದ್ದಾರೆ. ರಾಸಾಯನಿಕ ಬಣ್ಣಗಳನ್ನ ಹಾಕಿರೋ ವಿಗ್ರಹಗಳ ಬದಲು ಪರಿಸರಕ್ಕೆ ಒಳ್ಳೆಯದಾಗುವ ಜೇಡಿಮಣ್ಣಿನ ವಿಗ್ರಹಗಳನ್ನ ಬಳಸಿದ್ರೆ ಪರಿಸರ ಮತ್ತು ನೀರಿಗೆ ಆಗುವ ತೊಂದರೆ ತಪ್ಪಿಸಬಹುದು ಎಮಬುವುದು ಅವರ ಉದ್ದೇಶ ಇದರಿಂದ ಪ್ರಕೃತಿಗೆ ಯಾವುದೇ ತೊಂದರೆಯಾಗುವುದಿಲ್ಲ. ಗಣಪತಿ
ಪಿಒಪಿ ವಿಗ್ರಹದಿಂದ ಏನೆಲ್ಲಾ ತೊಂದರೆ?
ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪತಿ ಮೂರ್ತಿಗಳು ಕ್ಯಾಲ್ಸಿಯಂ, ಸಲ್ಫೇಟ್, ಹೆಮಿಹೈಡ್ರೇಟ್ ಮತ್ತೆ ಸಲ್ಫರ್, ಫಾಸ್ಫರಸ್, ಜಿಪ್ಸಮ್, ಮೆಗ್ನೀಸಿಯಮ್ನಂತಹ ರಾಸಾಯನಿಕಗಳಿಂದ ತಯಾರಿ ಮಾಡಲಾಗುತ್ತದೆ.ಈ ವಿಗ್ರಹಗಳ ಮೇಲೆ ಪಾದರಸ, ಕ್ಯಾಡ್ಮಿಯಮ್, ಸೀಸ ಮತ್ತು ಇಂಗಾಲದಂತಹ ವಿಷಕಾರಿ ಬಣ್ಣಗಳನ್ನ ಬಳಸೋದ್ರಿಂದ ಅವು ಆರೋಗ್ಯಕ್ಕೆ ಹಾಗೂ ಪರಿಸರದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತೇವೆ.
ಪಿಒಪಿ ವಿಗ್ರಹಗಳನ್ನ ಕೆರೆ ಮತ್ತು ನದಿಗಳಲ್ಲಿ ವಿಸರ್ಜಿಸಿದಾಗ, ಅದರಲ್ಲಿರೋ ರಾಸಾಯನಿಕಗಳು ನೀರಿಗೆ ಸೇರಿಕೊಂಡು ಜನ, ಪ್ರಾಣಿಗಳ ಆರೋಗ್ಯಕ್ಕೆ ಕೆಟ್ಟದ್ದು ಮಾಡುತ್ತೆ. ಅಲ್ಲದೆ, ನೀರಿನಲ್ಲಿರೋ ಜಾಲಚರ ಪ್ರಾಣಿಗಳು ಸಾಯುತ್ತೇವೆ. ಅಂತ ವರದಿಯಾಗಿದೆ. ಈ ಬಗ್ಗೆ ಜನರಿಗೆ ತಿಳಿಹೇಳೋ ಕೆಲಸವನ್ನ ಪರಿಸರ ಇಲಾಖೆಗೆ ವಹಿಸಬೇಕು ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಪಿಒಪಿ ಗಣೇಶ ಮೂರ್ತಿ ಮಾರಾಟ ಬ್ಯಾನ್
ಪಿಒಪಿ ಗಣೇಶ ಮೂರ್ತಿಗಳನ್ನ ತಯಾರು ಮಾಡೋದು, ಇಟ್ಕೊಳ್ಳೋದು ಮತ್ತು ಮಾರಾಟ ಮಾಡೋದನ್ನ
ಈ ಹಿಂದೆ ಸರ್ಕಾರ ಬ್ಯಾನ್ ಮಾಡಲಾಗಿತ್ತು. 2023 ರಲ್ಲಿ ಈ ಬ್ಯಾನ್ ಅನ್ನ ಇನ್ನಷ್ಟು ಕಠಿಣವನ್ನು ಮಾಡಲಾಗಿತ್ತು. ಈ ಕ್ರಮಗಳನ್ನು ಸ್ಥಳೀಯ ಸಂಸ್ಥೆಗಳು ಈ ನಿಯಮಗಳನ್ನ ಸರಿಯಾಗಿ ಪಾಲಿಸಬೇಕು ಹಬ್ಬಗಳು ಹತ್ತಿರ ಬರ್ತಿರೋದ್ರಿಂದ ಬ್ಯಾನ್ ಮಾಡಿರೋ ವಿಗ್ರಹಗಳನ್ನ ಸಾಗಿಸೋದನ್ನ ತಡೆಯಲು ಕೂಡಲೇ ಕ್ರಮ ತಗೋಳಿ ಅಂತ ಸೂಚನೆಯನ್ನು ಸಹ ಕೊಟ್ಟಿದ್ದಾರೆ.
ಅಪಾರ್ಟ್ಮೆಂಟ್‌ಗಳಲ್ಲಿ ಹಸಿರು ಹಬ್ಬ ಆಚರಣೆ
ಈ ವರ್ಷ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನ ಬಳಸಿ ಈ ವರ್ಷ ಹಸಿರು ಹಬ್ಬ ಆಚರಿಸೋಕೆ ಅಪಾರ್ಟ್ಮೆಂಟ್ ಮತ್ತು ಸ್ಥಳೀಯ ಸಮುದಾಯಗಳಲ್ಲಿರೋ ಸಂಘಗಳ ಮಾಹಿತಿಯನ್ನು ನೀಡಿ ಎಂದು ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಸಲಹೆ ನೀಡಿದ್ದಾರೆ.
ಇದನ್ನೂ ನೋಡಿ: ಜುಲೈ 24 | GST ನೋಟೀಸ್ ವಿರುದ್ಧ ಸಣ್ಣ ಉದ್ದಿಮೆದಾರರ ಪ್ರತಿಭಟನೆ Janashakthi Media
