ಒಳ ಮೀಸಲಾತಿ ಜಾರಿಗೆ ಎಲ್ಲಾ ರೀತಿಯ ತಯಾರಿ ನಡೆಸಲಾಗಿದೆ: ಕೆ.ಎಚ್‌.ಮುನಿಯಪ್ಪ

ಬೆಂಗಳೂರು: ಒಳ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರದಿಂದ ಎಲ್ಲಾ ರೀತಿಯ ತಯಾರಿ ನಡೆಸಲಾಗಿದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದ್ದಾರೆ. ಜಾರಿಗೆ

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌‍ ನೇತೃತ್ವದ ಸಮಿತಿಯೂ ಒಳ ಮೀಸಲಾತಿಗೆ ಸಂಬಂಧಿಸಿ ಸರ್ವೆ ಮುಗಿದಿದೆ. ಆದಷ್ಟು ಬೇಗ ಸಮಿತಿ ಸರ್ಕಾರಕ್ಕೆ ವರದಿ ಬಂದ ಬಳಿಕೆ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದರು. ಜಾರಿಗೆ

ಕಾನೂನು ಬದ್ಧವಾಗಿ ನಾವು ಒಳಮೀಸಲಾತಿ ಜಾರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಈಗಾಗಲೇ ಹೇಳಿದ್ದಾರೆ. ಆ ಬಗ್ಗೆ ಅನುಮಾನ ಬೇಡ ಗ್ರಾಮೀಣ ಭಾಗದಲ್ಲಿ ನೂರರಷ್ಟು ಸರ್ವೇ ಆಗಿವೆ. ನಗರ ಪ್ರದೇಶಗಳಲ್ಲಿ ಸ್ವಲ್ಪ ಸಮಸ್ಯೆಯಾಗಿ ಶೇ. 95ರಷ್ಟು ಯಶಸ್ವಿಯಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಮಂಗಳೂರು | ಜುಲೈ 27ಕ್ಕೆ ಜನವಾದಿ ಮಹಿಳಾ ಸಮ್ಮೇಳನ

ಬಿಜೆಪಿ ಅವರು ಈ ವಿಚಾರದಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ಅವರ ಹೋರಾಟವನ್ನು ಕೈ ಬಿಡಬೇಕು ಎಂದು ಮನವಿ ಮಾಡುತ್ತೇನೆ. ಈ ವಿಚಾರದಲ್ಲಿ ಬಿಜೆಪಿ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಟೀಕಿಸಿದರು.

ಅಬಕಾರಿ ಸಚಿವ ಆರ್‌.ಬಿ. ತಿಮಾಪುರ ಮಾತನಾಡಿ, ಆಗಸ್ಟ್‌ 1ರಂದು ಬಂದ್‌ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಒಳ ಮೀಸಲಾತಿಯ ಜಾರಿಗೊಳಿಸಿದ ಶ್ರೇಯಸ್ಸು ಕಾಂಗ್ರೆಸ್‌‍ಗೆ ದೊರೆಯಲಿದೆ ಎಂದು ಬಿಜೆಪಿ 20 ವರ್ಷದಿಂದ ಸುಮನಿದ್ದು, ಈಗ ಹೋರಾಟಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ನಾವು ಚುನಾವಣಾ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ವಿಚಾರವನ್ನು ಪ್ರಸ್ತಾಪಿಸಿದ್ದೆವು. ದತ್ತಾಂಶ ಸಂಗ್ರಹವಾಗಿದ್ದು ಸಮಿತಿ ಅಧ್ಯಯನ ಮಾಡುತ್ತಿದೆ ಯಾವುದೇ ಸಮಾಜಕ್ಕೂ ಅನ್ಯಾಯವಾಗಬಾರದು. ಜಾತಿಗಣತಿ ಇದಕ್ಕೆ ಸಂಬಂಧವಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

ಇದನ್ನೂ ನೋಡಿ: ಬಿಹಾರ ಚುನಾವಣೇ | “ವಿಶೇಷ ತೀವ್ರ ಪರಿಷ್ಕರಣೆ”ಎನ್‌ಡಿಎ ಕೂಟದ ಹೊಸ ನಾಟಕ Janashakthi Media

Donate Janashakthi Media

Leave a Reply

Your email address will not be published. Required fields are marked *