ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಸವರ್ಣಿಯರಿಗೆ ಜೈಲು ಶಿಕ್ಷೆ

ಬೆಳಗಾವಿ: ನ್ಯಾಯಾಲಯದ ವ್ಯಾಪ್ತಿಯಲ್ಲಿ ಬರುವ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಫುಲ್ಕ ಕಾರಣಕ್ಕೆ ವ್ಯಕ್ತಿಯನ್ನು ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಸವರ್ಣಿಯರಿಗೆ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಬಸಪ್ಪ ಪಂಚರ ಕೊಪ್ಪದ, ಫಕಿರಪ್ಪ ಹಣಮಂತಪ್ಪ ತೇನಗಿ, ಜ್ಞಾನೇಶ್ವರ ಬಸವಂತ ತೇನಗಿ, ಮುರಾರಿ ರಾಮಚಂದ್ರ ತೇನಗಿ, ಬಸವಂತ ಹನುಮಂತಪ್ಪ ತೇನಗಿ, ರೇಣವ್ವ ಶಿವಪ್ಪ ದಂಡಯ್ಯಪ್ಪಗೋಳ, ಲಕ್ಕವ್ವ ಸೋಮನಿಂಗ ಮುದ್ದನ್ನವರ, ಯಲ್ಲವ್ವ ಫಕೀರಪ್ಪ ತೇನಗಿ, ಶಿವಪ್ಪ ಹಣಮಂತಪ್ಪ ದಂಡಯ್ಯಪ್ಪಗೋಳ ಎಂಬವರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ 70,500 ರೂ.‌ದಂಡ ವಿಧಿಸಿ ನ್ಯಾಯಾಧೀಶರಾದ ಸವಿತಾಕುಮಾರಿ ಎನ್. ತೀರ್ಪು ನೀಡಿದ್ದಾರೆ.

ಇದನ್ನೂ ಓದಿ: ಮ್ಯಾನ್ ಹೋಲ್​ಗೆ ಇಳಿದಿದ್ದ ವ್ಯಕ್ತಿ ಉಸಿರುಗಟ್ಟಿ ಸಾವು; 4 ಜನ ಬಂಧನ

ಯರಗಟ್ಟಿ ತಾಲೂಕಿನ ಬೂದಿಗೊಪ್ಪ ಗ್ರಾಮದ ಬಳಿ 2018 ಮಾರ್ಚ್ 10 ರಂದು ಆರೋಪಿಗಳಾದ ಬಸಪ್ಪ ಪಂಚರ ಕೊಪ್ಪದ ಹಾಗೂ ಫಕಿರಪ್ಪ ಹಣಮಂತಪ್ಪ ತೇನಗಿ ಹಿರೋ ಹೊಂಡಾ ಸ್ಲ್ಪೈಂಡರ್ ದ್ವಿಚಕ್ರ ವಾಹನ ಮೇಲೆ ಹೊರಟಿದ್ದರು. ಯರಝರ್ವಿಯಿಂದ ದೂರುದಾರ ಮತ್ತೊಂದು ಬೈಕ್ ಮೇಲೆ‌ ಹೊರಟಾಗ ಡಿಕ್ಕಿ ಹೊಡೆದಿದೆ.

ಇದೇ ದ್ವೇಷ ಇಟ್ಟುಕೊಂಡ‌ ಆರೋಪಿಗಳು 2 ಏಪ್ರಿಲ್ 2017ರಂದು ಯರಗಟ್ಟಿ ತಾಲೂಕಿನ ಬೂದಿಗೊಪ್ಪ ಗ್ರಾಮದ ಕಡೆಗೆ ಹೊರಟಿದ್ದ ದೂರುದಾರನ ಒನ್ನು ತಡೆದು ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಹಲ್ಲೆ ಮಾಡಿ‌ ಸಣ್ಣ ಪುಟ್ಟ ಗಾಯಗಳಾಗಿದ್ದವು. ಈ ಬಗ್ಗೆ ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ರಾಮದುರ್ಗ ಡಿಎಸ್ ಪಿ ಎಂ. ಬಿ. ನಂದಗಾವಿ ಅವರು ನ್ಯಾಯಾಲಯಕ್ಕೆ‌ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ತೀರ್ಪು ನೀಡಿದ್ದರು. ಸರ್ಕಾರಿ ಅಭಿಯೋಜಕ ಆರ್ ಜಿ ದೇವರೆಡ್ಡಿ ವಾದ ಮಂಡಿಸಿದ್ದಾರೆ.

ಇದನ್ನೂ ನೋಡಿ: ಆಸಕ್ತಿಕರ ಸಂಗತಿ |ಪ್ರಾಣಿಗಳಲ್ಲಿ ಆಕಳಿಕೆJanashakthi Media

Donate Janashakthi Media

Leave a Reply

Your email address will not be published. Required fields are marked *