ಬೆಂಗಳೂರು: ಚಿಟ್ ಫಂಡ್ ಹೆಸರಲ್ಲಿ ಕೋಟಿ ಕೋಟಿ ಹಣ ವಂಚಿಸಿದ್ದ ನವಶಕ್ತಿ ಚಿಟ್ ಫಂಡ್ ಅಧ್ಯಕ್ಷ ಶರವಣನನ್ನು ಸಿಐಡಿ ಪೊಲೀಸರು ಜುಲೈ 24ರಂದು ಬಂಧಿಸಿದ್ದಾರೆ.
ಚಿಟ್ ಫಂಡ್ ಹೆಸರಲ್ಲಿ ನೂರಾರು ಜನರಿಂದ ಲಕ್ಷ ಲಕ್ಷ ಹಣ ಸಂಗ್ರಹಿಸಿದ್ದ ಶರವಣ, ಹಣ ನೀಡದೇ ಪರಾರಿಯಾಗಿದ್ದ. ಬೆಂಗಳೂರಿನ ವಿವಿಧ ಬಡಾವಣೆಗಳ ಜನರು ಈತನಿಂದ ವಂಚನೆಗೊಳಗಾಗಿದ್ದರು.
ಇದನ್ನೂ ಓದಿ: ಮ್ಯಾನ್ ಹೋಲ್ಗೆ ಇಳಿದಿದ್ದ ವ್ಯಕ್ತಿ ಉಸಿರುಗಟ್ಟಿ ಸಾವು; 4 ಜನ ಬಂಧನ
ರಾಜಾಜಿನಗರ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಶರವಣ ವಿರುದ್ಧ ಪ್ರಕರಣ ದಾಖಲಾಗಿತ್ತು.
ತನ್ನ ವಿರುದ್ಧ ಕೇಸ್ ದಾಖಲಾಗುತ್ತಿದ್ದಂತೆ ಶರವಣ ತಲೆಮರೆಸಿಕೊಂಡಿದ್ದ. ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಸಿಐಡಿ ಅಧಿಕಾರಿಗಳು ನವಶಕ್ತಿ ಚಿಟ್ ಫಂಡ್ ಅಧ್ಯಕ್ಷ ಶರವಣನನ್ನು ಬಂಧಿಸಿದ್ದಾರೆ.
ಇದನ್ನೂ ನೋಡಿ: ‘ಸ್ವಚ್ಛ ವಿಧಾನಸಭೆ’ಗಾಗಿ ಎಂಜಿನಿಯರ್ ಪಾದಯಾತ್ರೆ Janashakthi Media
