ಬೆಂಗಳೂರು: ಧರ್ಮಸ್ಥಳದ ಸರಣಿ ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾ ತಂಡ(ಎಸ್ಐಟಿ)ವು ಯಾವುದೇ ಪ್ರಭಾವಕ್ಕೆ ಒಳಗಾಗದೆ ನಿಷ್ಪಕ್ಷವಾಗಿ ತನಿಖೆ ನಡೆಸಬೇಕು ಎಂದು ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಒಕ್ಕೂಟವು ಜುಲೈ 21 ಸೋಮವಾರದಂದು ಆಗ್ರಹಿಸಿದೆ.
ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ವಿಮಲಾ ಕೆ.ಎಸ್, 80ರ ದಶಕದಿಂದಲೂ ಧರ್ಮಸ್ಥಳದಲ್ಲಿ ಅನೇಕ ನಿಗೂಢ ಸಾವುಗಳು ಸಂಭವಿಸುತ್ತಾ ಬಂದಿವೆ ಎಂದರು.
ಇದನ್ನೂ ಓದಿ: ವಿಎಸ್ ನಿಧನ |ಹೋರಾಟದ ದಂತಕಥೆ ಮರೆಯಾಯಿತು
ನೂರಾರೂ ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ಸ್ವಚ್ಛತಾ ಕಾರ್ಮಿಕ ಮುಂದೆ ಬಂದು ದೂರು ನೀಡಿದ್ದಾನೆ. ಹೆಣಗಳನ್ನು ಹೂತು ಹಾಕಲಾಗಿರುವ ಸ್ಥಳಗಳಿಗೆ ಪೊಲೀಸರು ಕಾವಲು ನೀಡಿ, ಹೆಣಗಳನ್ನು ಹೊರತೆಗೆಯಬೇಕಿತ್ತು ಎಂದರು.
ಸುದ್ದಿಗೋಷ್ಠಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಪರ ಹೋರಾಟರ್ಗಾತಿ ಅಕೈ ಪದ್ಮಶಾಲಿ, ‘ಜನಶಕ್ತಿ’ಯ ಗೌರಿ, ವಕೀಲೆ ಮೈತ್ರೇಯಿ ಕೃಷ್ಣನ್, ಗಮನಾ ಮಹಿಳಾ ಸಮೂಹದ ಮಮತಾ ಯಜಮಾನ್, ಕರ್ನಾಟಕ ಜನಶಕ್ತಿಯ ಮಲ್ಲಿಗೆ ಸಿರಿಮನೆ ಉಪಸ್ಥಿತರಿದ್ದರು.
ಇದನ್ನೂ ನೋಡಿ: ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಪ್ರಕರಣಪ್ರಭಾವ ಲೆಕ್ಕಿಸದೆ ಬಂಧಿಸಬೇಕು | Janashakthi Media
