ಹುಟ್ಟಿದ ದಿನ, ಮರಣ ದಿನ, ಪ್ರೇಮಿಗಳ ದಿನ, ಸಹೋದರ – ಸಹೋದರಿಯರ ದಿನ, ನಗುವಿನ ದಿನ ಹೀಗೆ ಅನೇಕ ದಿನಗಳಿರುವಂತೆ ಹಾವಿಗೂ ಒಂದು ದಿನ ಇದೆ. ವಿಶ್ವ
-ದೇನಾಗು
ಹೌದು ಜುಲೈ 16 ನ್ನು ವಿಶ್ವ ಹಾವು ದಿನವನ್ನಾಗಿ ಆಚರಿಸಲಾಗುತ್ತದೆ. ಹಾವುಗಳ ಬಗ್ಗೆ ಜನರಲ್ಲಿ ಮನೆ ಮಾಡಿರುವ ಭಯ ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಜನರಲ್ಲಿ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ
ಹಾವುಗಳು ಪ್ರಕೃತಿಯ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅನೇಕ ರೋಗಗಳಿಗೆ ಹಾವಿನ ವಿಷ ಅನುಕೂಲಕರ ಎಂದು ವಿಜ್ಞಾನ ಹೇಳುತ್ತಲೇ ಬಂದಿದೆ. ಇಂತಹ ಹಾವುಗಳು ಇಂದು ವಾಸಸ್ಥಾನಕ್ಕೆ ಜಾಗ ಸಿಗದೆ ಸಾಯುತ್ತಿವೆ.
ಇದನ್ನೂ ಓದಿ: ನ್ಯಾಯಾಲಯಗಳಲ್ಲಿ ಆರೋಪಿಗಳ ಪರವಾಗಿ ನಕಲಿ ಜಾಮೀನು ನೀಡುತ್ತಿದ್ದ 8 ಮಂದಿ ಬಂಧನ
ಹಾವುಗಳು ಪರಭಕ್ಷಕಗಳಾಗಿದ್ದು, ಕಪ್ಪೆ, ಕೀಟ, ಇಲಿ, ಹೆಗ್ಗಣ ಗಳು ಮತ್ತು ಇತರ ದಂಶಕಗಳನ್ನು ತಿನ್ನುತ್ತವೆ. ದಂಶಕಗಳನ್ನು ಬೇಟೆಯಾಡುವ ಮೂಲಕ ಅವುಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ. ಹಾವುಗಳು ಪರಭಕ್ಷಕಗಳಾಗಿ, ಬೇಟೆಯಾಗಿ, ಪರಿಸರ ವ್ಯವಸ್ಥೆಯ ಇಂಜಿನಿಯರ್‌ಗಳಾಗಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತವೆ.
ಹಾವುಗಳ ಕುರಿತ ನಮ್ಮ ತಪ್ಪುತಿಳುವಳಿಕೆಯಿಂದ ಬಹುತೇಕ ಹಾವುಗಳನ್ನು ನಾವು ಕೊಂದು ಹಾಕಿದ್ದೇವೆ. ಭೂಮಿಯ ಮೇಲಿನ ಶೇ. 10-12ರಷ್ಟು ಹಾವುಗಳು ಮಾತ್ರ ವಿಷಕಾರಿ ಹಾವುಗಳು. ಉಳಿದಂತೆ ಶೇ. 90 ಹಾವುಗಳು ವಿಷರಹಿತ. ಹಾವು ಕಡಿತದಿಂದ ಶೇ. 7ರಷ್ಟು ಜನ ಮಾತ್ರ ಸಾಯುತ್ತಾರೆ. ಹಾಗಾಗಿ ಬಹುತೇಕ ಹಾವುಗಳು ಕಡಿದರೂ ಯಾವುದೇ ತೊಂದರೆ ಇಲ್ಲ. ಆದರೆ ಹಾವಿನ ಬಗ್ಗೆ ನಮ್ಮೊಳಗಿರುವ ಭಯ ನಾವು ಸತ್ತು ಹಾವನ್ನು ಸಾಯುವಂತೆ ಮಾಡುತ್ತಿದೆ.

ಜಾಗತಿಕವಾಗಿ ಸುಮಾರು 3,600 ಜಾತಿಯ ಹಾವುಗಳಿವೆ. ಅದರಲ್ಲಿ ಭಾರತದಲ್ಲಿ 300ಕ್ಕೂ ಹೆಚ್ಚು ಜಾತಿಯ ಹಾವುಗಳಿವೆ. ಇದರಲ್ಲಿ ಕಾಳಿಂಗ ಸರ್ಪ, ನಾಗರಹಾವು, ಕಟ್ಟುಹಾವು, ಉರಿಬೆಂಜರಿ(ಕೊಳಕ ಮಂಡಲ) ಸೇರಿದಂತೆ ಕೇವಲ 8 ಜಾತಿಯ ಹಾವುಗಳು ಮಾತ್ರ ವಿಷಕಾರಿ ಹಾವುಗಳಾಗಿವೆ. ಉಪದ್ರವ ಇಲ್ಲದೆ ಯಾವ ಹಾವೂ ಕಚ್ಚುವುದಿಲ್ಲ ಎಂಬ ಜ್ಞಾನ ಜನರಿಗೆ ಇರಬೇಕಿದೆ.
ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಜನರು ಹಾವುಗಳ ಸಂರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡಲು ಹೆಚ್ಚು ಉತ್ಸುಕರಾಗಿದ್ದಾರೆ. ಅದರಲ್ಲೂ ಕೆಲವು ಯುವಕರು ಉರಗ ತಜ್ಞರಾಗುತ್ತಿರುವುದು ಮತ್ತು ಉರಗ ಸಂರಕ್ಷಕರಾಗುತ್ತಿರುವುದು ಆಶಾದಾಯಕವಾಗಿದೆ. ಆಧುನಿಕ ತಂತ್ರಜ್ಞಾನ ಸಾಧನಗಳನ್ನು ಬಳಸಿ ಹಾವುಗಳನ್ನು ಸಂರಕ್ಷಿಸುವಲ್ಲಿ ಅನೇಕರು ಮುಂದೆ ಬರುತ್ತಿದ್ದಾರೆ.
ಇದು ಒಂದಿಷ್ಟು ಹೊಸ ಬದಲಾವಣೆಗೆ ಕಾರಣವಾಗಿದೆ. ಆದರೆ ಹಾವುಗಳ ಮಹತ್ವ ಮತ್ತು ಸಂರಕ್ಷಣೆ ಕುರಿತು ಇನ್ನಷ್ಟು ಜಾಗೃತಿ ಕಾರ್ಯಕ್ರಮಗಳು ಹಳ್ಳಿ ಹಳ್ಳಿಗೂ, ಪ್ರತೀ ವ್ಯಕ್ತಿಗೂ ತಲುಪಬೇಕಾಗಿದೆ. ಆಗ ಮಾತ್ರ ಜೀವವೈವಿಧ್ಯತೆ ಮತ್ತು ಆಹಾರ ಸರಪಳಿಯನ್ನು ಕಾಪಾಡಲು ಸಾಧ್ಯ.
ಇದನ್ನೂ ನೋಡಿ: ಬೆಂಗಳೂರು | ಜುಲೈ13ರಂದು ಸಾಮ್ರಾಟ್ ಅಶೋಕ ನಾಟಕ ಪ್ರದರ್ಶನJanashakthi Media
