ಅಕ್ರಮ ಹಣ ವರ್ಗಾವಣೆ ಆರೋಪ: ಇ.ಡಿ ವಿಚಾರಣೆಗೆ ಡಿ.ಕೆ. ಸುರೇಶ್‌ ಹಾಜರು

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪದಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಡಿ.ಕೆ ಸುರೇಶ್‌ ಎರಡನೇ ಬಾರಿ ನೋಟಿಸ್‌ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್‌ ಜುಲೈ 8ರಂದು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಿದ್ದಾರೆ. ಅಕ್ರಮ

ಐಶ್ವರ್ಯ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ .ಸುರೇಶ್‌ ವಿರುದ್ಧ ಇ.ಡಿ ಪ್ರಕರಣ ದಾಖಲಿಸಿಕೊಂಡಿತ್ತು. ಐಶ್ವರ್ಯ ಗೌಡ ಎಂಬಾಕೆ ತಾನು ಡಿ.ಕೆ. ಸುರೇಶ್‌ ತಂಗಿ ಎಂದು ಹೇಳಿಕೊಂಡು ಹಲವರಿಗೆ ಕೋಟ್ಯಂತರ ರೂ. ವಂಚಿಸಿದ್ದಳು.

ಇದನ್ನೂ ಓದಿ: ಯುವತಿಗೆ ವಂಚಿಸಿದ್ದ ಬಿಜೆಪಿ ಮುಖಂಡನ ಮಗ ಕೃಷ್ಣ ಜೆ.‌ ರಾವ್ ಬಂಧನ

ಈ ಪ್ರಕರಣದಲ್ಲಿ ಡಿ.ಕೆ. ಸುರೇಶ್‌ ಹೆಸರೂ ಸಹ ಕೇಳಿಬಂದಿತ್ತು. ಬಳಿಕ ಐಶ್ವರ್ಯಾ ಗೌಡ ಳನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿದ್ದರು. ಈಗ ಐಶ್ವರ್ಯಾ ಗೌಡ ಮತ್ತು ಇತರರು ಜಾಮೀನು ಪಡೆದು ಹೊರಗಿದ್ದಾರೆ.

ಕಳೆದ ತಿಂಗಳು ಜಾರಿ ನಿರ್ದೇಶನಾಲಯವು ಡಿ.ಕೆ .ಸುರೇಶ್‌ ವಿಚಾರಣೆ ನಡೆಸಿತ್ತು. ಈ ವೇಳೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌ , ಇಡಿ ವಿಚಾರಣೆ ನಮಗೇನೂ ಹೊಸದಲ್ಲ. ಈ ಬಾರಿ ಹಲವು ಬಾರಿ ಇ.ಡಿ. ನಮಗೆ ನೋಟಿಸ್‌ ನೀಡಿದೆ. ಕಾನೂನು ಪ್ರಕಾರ ಎಲ್ಲದಕ್ಕೂ ಉತ್ತರ ನೀಡುತ್ತೇವೆ ಎಂದಿದ್ದರು.

ಇದನ್ನೂ ನೋಡಿ: ನಮ್ಮನ್ನು ಬೆಳೆಯಲು ಬಿಡಿ : ಸಿಎಂ ಸಭೆಗೆ ಹೊರಟ ತರಕಾರಿ, ಹೂ, ಹಣ್ಣುJanashakthi Media

Donate Janashakthi Media

Leave a Reply

Your email address will not be published. Required fields are marked *