ಮುಂಚಿತವಾಗಿಯೇ ಹೃದಯಾಘಾತ ಸೂಚಕ ಲಕ್ಷಣಗಳು ಕಾಣಿಸಿರುತ್ತವೆ: ಡಾ. ಬಿ.ವಿ. ಮಂಜುನಾಥ್‌

ಮಂಗಳೂರು: 1947ರಲ್ಲಿ ನಮ್ಮಲ್ಲಿ ಹೃದಯಾಘಾತವಾದ ಶೇ.50 ಮಂದಿಗೆ ಮರಣವೇ ಅನಿವಾರ್ಯವಿತ್ತು. ಆದರೆ ಈಗ ಹೃದಯಾಘಾತವಾದ ಶೇ.97 ಮಂದಿ ಬದುಕುತ್ತಾರೆ. ಆದರೆ ನಿರ್ಲಕ್ಷಿಸದೇ ಲಕ್ಷಣಗಳು ಕಂಡ ಕೂಡಲೇ ವೈದ್ಯರನ್ನು ಕಾಣಬೇಕು. ಅವರಿಂದ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದರೆ ಸಮಸ್ಯೆಇಲ್ಲ.  ಈಗ ಅತ್ಯಾಧುನಿಕ ಚಿಕಿತ್ಸೆ ಲಭ್ಯವಿದೆ ಎಂದು ಎ.ಜೆ.ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಕಾರ್ಡಿಯೋಲಜಿ ವಿಭಾಗದ ಮುಖ್ಯಸ್ಥ, ಪ್ರೊಫೆಸರ್‌ ಡಾ. ಬಿ.ವಿ. ಮಂಜುನಾಥ್‌ ಹೇಳಿದ್ದಾರೆ. ಸೂಚಕ 

ಬಹುತೇಕ ಪ್ರಕರಣಗಳಲ್ಲಿ ಹಿಂದೆಯೇ ಹೃದಯಾಘಾತ ಸೂಚಕ ಲಕ್ಷಣಗಳು ಕಾಣಿಸಿರುತ್ತವೆ. ಆದರೆ ಜನರು ಅದನ್ನು ಗ್ಯಾಸ್ಟ್ರಿಕ್‌ ಇರಬಹುದು ಎಂದು ತಾವೇ ಟ್ಯಾಬ್ಲೆಟ್‌ ತೆಗೆದುಕೊಂಡು ನಿರ್ಲಕ್ಷಿಸುತ್ತಾರೆ. ಸೂಚಕ 

ಗ್ಯಾಸ್ಟ್ರಿಕ್‌ ಹಾಗೂ ಹೃದಯಾಘಾತ ಪೂರ್ವ ಲಕ್ಷಣ ಗಳು ಕೆಲವೊಮ್ಮೆ ಒಂದೇ ರೀತಿ ಇರುತ್ತದೆ. ಆದರೆ ಹೃದಯ ಸಮಸ್ಯೆಯಾದರೆ ತಲೆ ಸುತ್ತು, ವಿಪರೀತ ಬೆವರು, ವಿಪರೀತ ಆಯಾಸ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ತಡಮಾಡದೆ ವೈದ್ಯರ ಬಳಿ ತೆರಳಬೇಕು. ಅಲ್ಲಿ ಇಸಿಜಿ, ಟ್ರೋಪೋನಿನ್‌ ರಕ್ತ ಪರೀಕ್ಷೆ ಮಾಡಿ, ಸಮಸ್ಯೆ ಇಲ್ಲದಿದ್ದರೆ ಹೊರರೋಗಿ ವಿಭಾಗದಿಂದಲೇ ಮನೆಗೆ ತೆರಳಲು ಸಾಧ್ಯ. ಸೂಚಕ 

ಇದನ್ನೂ ಓದಿ: ಬ್ರಹ್ಮಾವರ ವಾರಂಬಳ್ಳಿ ಪಂಚಾಯತ್ ಅವ್ಯವಸ್ಥೆಗಳ ಆಗರ

 24 ಗಂಟೆಯಿಂದಲೇ ಲಕ್ಷಣ ಕಾಣಿಸಬಹುದು

ಸಾಮಾನ್ಯವಾಗಿ ಅರ್ಧ ಗಂಟೆಯಿಂದ 24 ಗಂಟೆ ಯವರೆಗೂ ಹೃದಯಾಘಾತದ ಲಕ್ಷಣಗಳು ಕಾಣಿಸಿ ಕೊಳ್ಳುತ್ತದೆ. ಹೆಚ್ಚಾಗಿ ರಾತ್ರಿ ಲಕ್ಷಣ ಕಾಣಿಸಿಕೊಂಡಾಗ ಜನ ಏನೋ ಔಷಧ ಕುಡಿದು, ಮಲಗುತ್ತಾರೆ, ಮರುದಿನ ಎಂದಿನಂತೆ ವಾಕಿಂಗ್‌, ಜಿಮ್‌ ಇತ್ಯಾದಿಗೆ ಹೋಗುತ್ತಾರೆ. ಇದರಿಂದ ಹೃದಯಾಘಾತ ಉಂಟಾಗಬಹುದು. ವೈದ್ಯರನ್ನು ಸಂಪರ್ಕಿಸಿ, ಪರೀಕ್ಷೆ ಮಾಡಿಸಿಕೊಂಡರೆ ಬದುಕುವ ಸಾಧ್ಯತೆ ಹೆಚ್ಚು.

ಅಸ್ತಮಾ ಕಾಯಿಲೆ ಇದ್ದವರಿಗೆ ಸಾಮಾನ್ಯರಷ್ಟೇ ಸಮಸ್ಯೆ

ಅಸ್ತಮಾ ಕಾಯಿಲೆ ಹಾಗೂ ಹೃದಯಾಘಾತಕ್ಕೆ ನೇರ ಸಂಬಂಧ ಇಲ್ಲ. ಅವರಿಗೆ ಇತರರಿಗೆ ಎಷ್ಟು ಹೃದಯಾಘಾತದ ಸಾಧ್ಯತೆ ಇದೆಯೋ ಅಷ್ಟೇ ಸಾಧ್ಯತೆ ಇರುತ್ತದೆ. ಹೆಚ್ಚೇನೂ ಇರದು.

ಪೊಟಾಶಿಯಂ ಏರಿಳಿತ ಎಲ್ಲರಿಗೂ ಆಗದು

ಎಲ್ಲರ ಶರೀರದಲ್ಲೂ ಪೊಟಾಶಿಯಂ ಇದೆ, ಅದರ ಏರಿಳಿತ ಸಾಮಾನ್ಯರಲ್ಲಿ ಆಗುವುದಿಲ್ಲ, ಕೆಲ ವೊಮ್ಮೆ ತೀರಾ ವಾಂತಿ ಭೇದಿ ಆದಾಗ ಪೊಟಾ ಶಿಯಂ, ಸೋಡಿಯಂ ವ್ಯತ್ಯಾಸ ಉಂಟಾಗು ತ್ತದೆ. ಆಗ ಹೃದಯ ಬಡಿತ ಹೆಚ್ಚಿದರೆ ಹೃದಯಾಘಾತ ವಾಗಬಹುದು. ಕಿಡ್ನಿ ಸಮಸ್ಯೆ ಇದ್ದವರಿಗೆ ಈ ಅಪಾಯ ಜಾಸ್ತಿ. ಉಳಿದವರಿಗೆ ಸಮಸ್ಯೆ ಇರದು.

ಮಧ್ಯಮ ತೀವ್ರತೆಯ ವ್ಯಾಯಾಮ ಉತ್ತಮ

ಎಲ್ಲವೂ ಮಿತಿಯೊಳಗೆ ಇದ್ದರೆ ಸೂಕ್ತ. ಮ್ಯಾರ ಥಾನ್‌, ದೂರ ಓಟ, ನಿರ್ಜಲೀಕರಣ ವಾದಾಗ ನೀರು ಕುಡಿಯದಿರುವುದು, ಜಿಮ್‌ನಲ್ಲಿ ಅತಿ ಯಾದ ಭಾರ ಎತ್ತುವುದು, ಇದೆಲ್ಲ ಹೃದಯಕ್ಕೆ ಹೊರೆ. ಬದಲಿಗೆ ವಾಕಿಂಗ್‌, ಟ್ರಡ್‌ಮಿಲ್‌, ಈಜು, ಯೋಗ, ಪ್ರಾಣಾಯಾಮ ಇವೆಲ್ಲವೂ ಹೃದಯದ ಆರೋಗ್ಯಕ್ಕೆ ಪೂರಕ. ದೇಹಕ್ಕೆ ಕೆಲವರು ಪ್ರೊಟೀನ್‌ ಪೌಡರ್‌ ಇತ್ಯಾದಿ ತೆಗೆದುಕೊಳ್ಳು ತ್ತಾರೆ, ಕೆಲವದರಲ್ಲಿ ಸ್ಟಿರಾಯ್ಡ ಇರುತ್ತದೆ, ಸ್ನಾಯು ಗಳನ್ನು ಬಲಪಡಿಸಲು ಅದನ್ನು ಬಳಸುತ್ತಾರೆ, ಆದರೆ ಅದರಿಂದ ಹೃದಯಕ್ಕೆ ಹಾನಿಯಾಗುತ್ತದೆ. ಎಚ್ಚರ ವಹಿಸಬೇಕು.

ವಾಯು ಮಾಲಿನ್ಯ ಕೆಟ್ಟದು, ಮಂಗಳೂರು ಸುರಕ್ಷಿತ

ವಾಯು ಮಾಲಿನ್ಯದಿಂದ ಹೃದಯಕ್ಕೆ ಹಾನಿ ಯಿದೆ. ಮಂಗಳೂರಿನಲ್ಲಿ ಅದೃಷ್ಟವಷಾತ್‌ ಗಾಳಿ ಗುಣಮಟ್ಟ ಸೂಚ್ಯಂಕ(ಏರ್‌ಕ್ವಾಲಿಟಿ ಇಂಡೆಕ್ಸ್‌-ಎಕ್ಯೂಐ)ವು 24-25ರಲ್ಲಿ ಇರುತ್ತದೆ. ಇದು ಬಹಳ ಉತ್ತಮ. ಅದೇ ದಿಲ್ಲಿಯಲ್ಲಿ 300 ರ ಮೇಲಿರುತ್ತದೆ. ಅದು ತೀರಾ ಕೆಟ್ಟದು. 50 ರ ಕೆಳಗಿದ್ದರೆ ಒಳ್ಳೆಯದು. 50-100 ಮಧ್ಯೆ ಇದ್ದರೂ ದೊಡ್ಡ ಹಾನಿಯಿಲ್ಲ, 100 ಮೇಲಿದ್ದರೆ ಕೇವಲ ಹೃದಯಕ್ಕೆ ಮಾತ್ರವಲ್ಲ, ಅಸ್ತಮಾ, ಅಲರ್ಜಿ, ಕ್ಯಾನ್ಸರ್‌ ಎಲ್ಲದಕ್ಕೂ ಕಾರಣವಾದೀತು.

ಇದನ್ನೂ ನೋಡಿ: ಸಮಾಜವಾದ, ಸೆಕ್ಯುಲರಿಸಂ ಅಂದರೆ ಆರೆಸ್ಸೆಸ್ ಗೆ ಅಸಹನೆ ಯಾಕೆ? Janashakthi Media

Donate Janashakthi Media

Leave a Reply

Your email address will not be published. Required fields are marked *