‘ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ್ರೆ ಆರ್‌ಎಸ್‌ಎಸ್ ಬ್ಯಾನ್’ – ಪ್ರಿಯಾಂಕ್ ಖರ್ಗೆ

ಬೆಂಗಳೂರು: ನಾವು ಈ ಹಿಂದೆ ಆರ್‌ಎಸ್‌ಎಸ್ ಅನ್ನು 2 ಬಾರಿ ಬ್ಯಾನ್ ಮಾಡಿದ್ದೆವು. ನಂತರ ನಮ್ಮ ಕೈಕಾಲು ಹಿಡಿದು ನಿಷೇಧವನ್ನು ವಾಪಾಸ್ ಪಡೆಯಿರಿ ಎಂದು ಬಂದಿದ್ದರು. ಆಗ ನಿಷೇಧವನ್ನು ತೆಗೆದಿದ್ದೇ ತಪ್ಪಾಯ್ತು. ಮುಂದೆ ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಆರ್‌ಎಸ್‌ಎಸ್ (RSS) ಬ್ಯಾನ್ ಮಾಡುವ ಬಗ್ಗೆ ತೀರ್ಮಾನ ಮಾಡುತ್ತೇವೆ. ಆರ್‌ಎಸ್‌ಎಸ್ ಸಿದ್ದಾಂತವನ್ನು ನಾವು ಮೊದಲಿನಿಂದಲೂ ವಿರೋಧ ಮಾಡ್ತಿದ್ದೇವೆ. ಈಗಲೂ ಮಾಡುತ್ತೇವೆ ಎಂದು ಕರ್ನಾಟಕದ ತಂತ್ರಜ್ಞಾನ ಹಾಗೂ ಮಾಹಿತಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಆರ್‌ಎಸ್‌ಎಸ್
ಆರ್‌ಎಸ್‌ಎಸ್ ನಾಯಕರು ನಮ್ಮ ಸಂವಿಧಾನದಿಂದ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ಅಳಿಸಿಹಾಕಲು ಬಹಳ ಹಿಂದಿನಿಂದಲೂ ಪ್ರಯತ್ನಿಸುತ್ತಿದ್ದಾರೆ. ಈಗ, ಬಿಜೆಪಿ ನಾಯಕರು ಅದೇ ಬೇಡಿಕೆಯನ್ನು ಮುಂದುವರಿಸಲು ಪ್ರಾರಂಭಿಸಿದ್ದಾರೆ. ಸುಪ್ರೀಂ ಕೋರ್ಟ್ ಅವುಗಳ ಸೇರ್ಪಡೆಯನ್ನು ಸಂವಿಧಾನದ ಅವಿಭಾಜ್ಯ ಅಂಗವೆಂದು ಪದೇ ಪದೇ ಎತ್ತಿಹಿಡಿದಿದ್ದರೂ ಸಹ, ಬಿಜೆಪಿ ನಾಯಕರು ಈ ವಾಸ್ತವಾಂಶವನ್ನು ತಮ್ಮ ಅನುಕೂಲಕ್ಕಾಗಿ ಅಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಂವಿಧಾನದಲ್ಲಿ ಬದಲಾವಣೆ ತರುವ ಉಪದೇಶ ನೀಡುವ ಮೊದಲು, ಬಿಜೆಪಿಯೇ ರೂಪಿಸಿರುವ ತನ್ನ ಪಕ್ಷದ ಸಂವಿಧಾನವನ್ನು ಆರ್‌ಎಸ್‌ಎಸ್ ಸರಿಯಾಗಿ ಓದಿಕೊಳ್ಳಬೇಕು. ಅದರ ಆರ್ಟಿಕಲ್ IIರ ಪೀಠಿಕೆಯು ‘ಸಮಾಜವಾದ ಮತ್ತು ಜಾತ್ಯತೀತತೆಯ ತತ್ವಗಳಿಗೆ ಬಿಜೆಪಿ ಬದ್ಧವಾಗಿದೆ’ ಎಂದು ಸ್ಪಷ್ಟವಾಗಿ ಹೇಳುತ್ತದೆ. ಬಹುಶಃ ಅವರು ಮೊದಲು ಅದನ್ನು ತಿದ್ದುಪಡಿ ಮಾಡುವ ಮೂಲಕ ಪ್ರಾರಂಭಿಸುವುದು ಸೂಕ್ತವೆನಿಸುತ್ತದೆ ಎಂದರು.

ಕಳೆದ 97 ವರ್ಷಗಳಲ್ಲಿ ಆರ್‌ಎಸ್‌ಎಸ್ ಅನ್ನು 3 ಬಾರಿ ನಿಷೇಧಿಸಲಾಗಿದೆ. 1948, 1975 ಮತ್ತು 1992ರಲ್ಲಿ ಆರ್​​ಎಸ್​ಎಸ್​ ಮೇಲೆ ನಿಷೇಧ ಹೇರಲಾಗಿತ್ತು. ಮಹಾತ್ಮ ಗಾಂಧಿಯವರ ಹತ್ಯೆಯ ನಂತರ 1948ರಲ್ಲಿ, 1975ರಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಮತ್ತು 1992ರಲ್ಲಿ ಅಯೋಧ್ಯೆಯಲ್ಲಿ ಅಕ್ರಮ ಬಾಬರಿ ರಚನೆಯ ಧ್ವಂಸದ ನಂತರ ಆರ್​ಎಸ್​ಎಸ್​ ಮೇಲೆ ನಿಷೇಧ ಹೇರಲಾಯಿತು. 16 ತಿಂಗಳ ಅವಧಿಯ ನಂತರ ಜುಲೈ 12, 1949ರಂದು ಆರ್‌ಎಸ್‌ಎಸ್ ಮೇಲಿನ ಮೊದಲ ನಿಷೇಧವನ್ನು ತೆಗೆದುಹಾಕಲಾಯಿತು. ಫೆಬ್ರವರಿ 1948ರಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ನಾಥೂರಾಮ್ ಗೋಡ್ಸೆ ಕೊಲೆ ಮಾಡಿದ ನಂತರ ಜುಲೈ 1949ರವರೆಗೆ ಆರ್​​ಎಸ್​ಎಸ್​ ಅನ್ನು ಮೊದಲ ಬಾರಿಗೆ ನಿಷೇಧಿಸಲಾಯಿತು. ಜನವರಿ 30, 1948ರಂದು ಗಾಂಧೀಜಿ ಮೇಲೆ ನಾಥೂರಾಮ್ ಗೋಡ್ಸೆ ಗುಂಡು ಹಾರಿಸಿದರು. ಗೋಡ್ಸೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಜೊತೆ ಸಂಬಂಧ ಹೊಂದಿದ್ದರು. ಮಹಾತ್ಮ ಗಾಂಧಿಯವರ ಹತ್ಯೆಯ ನಂತರ ಆರ್‌ಎಸ್‌ಎಸ್‌ನ ಆಗಿನ ಮುಖ್ಯಸ್ಥ ಎಂಎಸ್ ಗೋಲ್ವಾಲ್ಕರ್ ಅವರನ್ನು ಜೈಲಿಗೆ ಹಾಕಲಾಯಿತು ಮತ್ತು ಫೆಬ್ರವರಿ 4, 1948ರಂದು ಆರ್​ಎಸ್​ಎಸ್​ ಅನ್ನು ಕಾನೂನುಬಾಹಿರವೆಂದು ಘೋಷಿಸಲಾಯಿತು.

ಇದನ್ನೂ ನೋಡಿ: ತುರ್ತು ಪರಿಸ್ಥಿತಿಯ ಕರಾಳ ನೆನಪುಗಳನ್ನು ಬಿಚ್ಚಿಟ್ಟ ಕಾರ್ಮಿಕ ನಾಯಕ ವಿಜೆಕೆ ನಾಯರ್ Janashakthi Media ಆರ್‌ಎಸ್‌ಎಸ್

Donate Janashakthi Media

Leave a Reply

Your email address will not be published. Required fields are marked *