ಸಾಲಗಾರನ 7 ವರ್ಷದ ಮಗಳನ್ನು ಕರೆದೊಯ್ದಿದ್ದ ಮ್ಯಾನೇಜರ್ ಬಂಧನ

ಳವಳ್ಳಿ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸಿಲ್ಕಲ್ ಪುರದ ನಿವಾಸಿ, ತಿ. ನರಸೀಪುರ ಬಜಾಜ್ ಪಿನ್ ಸರ್ವ್ ಮೈಕ್ರೋ ಫೈನಾನ್ಸ್ ಕಂಪನಿಯ ಸೆಂಟರ್ ಮ್ಯಾನೇಜರ್ ಪಿ.ಅಜಿತ್ (32) ಎಂಬುವವರನ್ನು ಸಾಲಗಾರನ 7 ವರ್ಷದ ಮಗಳನ್ನು ಕರೆದೊಯ್ದಿದ್ದ ಪ್ರಕರಣದಡಿ ತಾಲ್ಲೂಕಿನ ಬೆಳಕವಾಡಿ ಪೊಲೀಸರು ಜೂನ್‌ 23 ಸೋಮವಾರದಂದು ಬಂಧಿಸಿದರು.

ತಿ.ನರಸೀಪುರ ತಾಲ್ಲೂಕಿನ ಜಾಲಹಳ್ಳಿಯ ನವೀನ ಎಂಬುವವರು, ತಾಯಿ ಮಂಗಳಮ್ಮ ಹೆಸರಿನಲ್ಲಿ ಆಟೊ ಖರೀದಿಗೆ ಸಂಸ್ಥೆಯಿಂದ ₹40 ಸಾವಿರ ಸಾಲ ಪಡೆದಿದ್ದರು. ಮೇ ತಿಂಗಳ ಕಂತು ಕಟ್ಟಲು ತಡವಾಗಿತ್ತು. ಜೂನ್‌ 16ರಂದು ನವೀನ, ಪತ್ನಿ ಮತ್ತು ಮಗಳೊಂದಿಗೆ ತಾಲ್ಲೂಕಿನ ಪೂರಿಗಾಲಿಯ ಸಂಬಂಧಿಕರ ಮನೆಗೆ ಬಂದಿದ್ದರು.

ಇದನ್ನೂ ಓದಿ: ಪರೀಕ್ಷೆಯಲ್ಲಿ ಕಡಿಮೆ ಅಂಕ: ಮಗಳನ್ನೇ ಹೊಡೆದು ಕೊಂದ ಶಿಕ್ಷಕ

ಅಲ್ಲಿಗೆ ತೆರಳಿದ್ದ ಆರೋಪಿಯು ನವೀನ ರ ಮಗಳು ಹಾಗೂ ಪಕ್ಕದ ಮನೆಯ ಬಾಲಕನನ್ನು, ನವೀನ್‌ ಇದ್ದ ಸ್ಥಳ ತೋರಿಸುವಂತೆ ಬಲವಂತವಾಗಿ ಕರೆದೊಯ್ದಿದ್ದರು. ನಂತರ ವಾಪಸ್ ಕರೆತಂದು ಬಿಟ್ಟಿದ್ದರು. ಈ ಸಂಬಂಧ ನವೀನ ಪೊಲೀಸರಿಗೆ ದೂರು ನೀಡಿದ್ದರು.

ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ತಮಿಳುನಾಡಿನ ಬಣ್ಣಾರಿ ಅಮ್ಮ ದೇವಸ್ಥಾನದ ಬಳಿ ಬಂಧಿಸಿ, ಕೃತ್ಯ ದಿನ ಬಳಸಿದ್ದ ಬೈಕ್‌ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ನೋಡಿ: ಭಾರತದ ರಾಜಕೀಯ ಮತ್ತು ಹಣಕಾಸು ಒಕ್ಕೂಟದ ಆಳ ಅಗಲ ಎತ್ತಿ ತೋರಿಸುವ ಪುಸ್ತಕ Janashakthi Media

Donate Janashakthi Media

Leave a Reply

Your email address will not be published. Required fields are marked *