ಮನೆ ಮನೆಗೂ ಪೊಲೀಸ್‌ ಯೋಜನೆ ಪರಿಶೀಲನೆ ಹಂತದಲ್ಲಿದೆ: ಡಾ. ಜಿ. ಪರಮೇಶ್ವರ

ಬಾಗಲಕೋಟೆ: ಗ್ರಾಮ ವಾಸ್ತವ್ಯ ಎಂಬ ವಿನೂತನ ಕಾರ್ಯಕ್ರಮ ನಗರದ ಎಸ್ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ನಡೆಸಿದ್ದು, ಈಗಾಗಲೇ ಸುಮಾರು 500ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪೊಲೀಸರು ವಾಸ್ತವ್ಯ ಮಾಡಿ, ಜನರ ಕಷ್ಟ-ನೋವು, ಸಮಸ್ಯೆ ಆಲಿಸಿದ್ದಾರೆ. ಇದೊಂದು ಮಾದರಿ ಕಾರ್ಯಕ್ರಮ. ಯೋಜನೆ

ಇದೇ ಮಾದರಿಯಲ್ಲಿ ರಾಜ್ಯಾದ್ಯಂತ ಮನೆ ಮನೆಗೂ ಪೊಲೀಸ್‌ ಎಂಬ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಅದು ಪರಿಶೀಲನೆ ಹಂತದಲ್ಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.

ಇದನ್ನೂ ಓದಿ: ಪ್ರಜಾತಂತ್ರದ ಬಿಕ್ಕಟ್ಟುಗಳೂ ನಾಯಕತ್ವದ ಸವಾಲುಗಳೂ

ರಾಜ್ಯದ ಪ್ರತಿಯೊಂದು ಪೊಲೀಸ್‌ ಠಾಣೆ ವ್ಯಾಪ್ತಿಯ ಎಲ್ಲ ಮನೆಗಳಿಗೂ ಪೊಲೀಸರು ಬರಲಿದ್ದಾರೆ. ಆ ಮನೆಯ ಕುಟುಂಬದ ಸದಸ್ಯರ ಮೇಲೆ ಪ್ರಕರಣ ಇವೆಯೇ, ಇದ್ದರೆ ಯಾವ ಹಂತದಲ್ಲಿವೆ? ಅವರ ಸಮಸ್ಯೆ ಏನು, ಇಲಾಖೆಗೆ ಸಂಬಂಧಿಸಿ ಅವರಿಗೆ ನ್ಯಾಯ ಸಿಕ್ಕಿಲ್ಲವೇ ಮುಂತಾದ ಹಲವು ಮಾಹಿತಿಗಳನ್ನು ಪಡೆದು, ಅವರಿಗೆ ಸ್ಪಂದಿಸುವ ಕಾರ್ಯ ನಡೆಯಲಿದೆ ಎಂದರು.

ಕಾನೂನು ಪ್ರಕಾರ ಶ್ರೀಕಾಂತ ಶೆಟ್ಟಿಗೆ ನಿರ್ಬಂಧ

ಸನ್‌ ಗ್ಲಾಸ್‌ ಹಾಕಿಕೊಂಡವರಿಗೆ ಒಂದು, ಸಾಮಾನ್ಯರಿಗೊಂದು, ಗೃಹ ಸಚಿವರಿಗೊಂದು, ಅಬಕಾರಿ ಸಚಿವರಿಗೆ ಇನ್ನೊಂದು ಕಾನೂನು ಎಂದಿಲ್ಲ. ಎಲ್ಲರಿಗೂ ಒಂದೇ ಕಾನೂನು ಇದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಹಿಂದೂ ಮುಖಂಡ ಶ್ರೀಕಾಂತ ಶೆಟ್ಟಿಗೆ ಬಾಗಲಕೋಟೆ ಜಿಲ್ಲೆ ಪ್ರವೇಶ ನಿರ್ಬಂಧಿಸಿ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಂಡಿರುತ್ತಾರೆ ಎಂದರು.

ಇದನ್ನೂ ನೋಡಿ: ಘೋಷಿತ ತುರ್ತು ಪರಿಸ್ಥಿತಿ ಮತ್ತು ಅಘೋಷಿತ ತುರ್ತು ಪರಿಸ್ಥಿತಿಯ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ತೆರೆದಿಡುವ ಪುಸ್ತಕ

Donate Janashakthi Media

Leave a Reply

Your email address will not be published. Required fields are marked *