ಜೂನ್ 25 ರಂದು ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗ್ತಿನಿ: ಬಿ. ಆರ್ ಪಾಟೀಲ್

ಲಬುರಗಿ: ಸಿಎಂ ಸಿದ್ದರಾಮಯ್ಯರಿಂದ ಬುಲಾವ್ ಹಿನ್ನಲೆ, ಆಳಂದ ಶಾಸಕ ಬಿ. ಆರ್ ಪಾಟೀಲ್ ಜೂನ್ 25 ರಂದು ಪ್ರತಿಕ್ರಿಯಿಸಿದ್ದೂ, “ಸಿದ್ದರಾಮಯ್ಯ ನನ್ನ ಆತ್ಮೀಯ ಸ್ನೇಹಿತರು, ನಿನ್ನೆ ನನಗೆ ಕರೆ ಮಾಡಿದ್ದರು. ರಾಯಚೂರಿಗೆ ಬರಲು ಅವರು ಹೇಳಿದ್ದರು” ಎಂದರು.

ನನಗೆ ಆಹ್ವಾನ ಇಲ್ಲ. ನಾನು ಬರಲ್ಲ ಎಂದಿದ್ದೆ. ಈ ಹಿಂದೆ ಸಿದ್ದರಾಮಯ್ಯ ತೋರಿದ ಪ್ರೀತಿ, ಇಂದು ಅದೇ ರೀತಿ ನನ್ನ ಬಗ್ಗೆ ಪ್ರೀತಿ ತೋರಿದ್ದಾರೆ. ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿದ್ದಾರೆ. ಹೀಗಾಗಿ ನಾನು ಜೂನ್ 25 ರಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಇರಾನ್ ಮೂರು ಅಣುಸ್ಥಾವರಗಳ ಮೇಲೆ ಅಮೆರಿಕದ ದಾಳಿ

ತಮ್ಮದೇ ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದರು. ರಾಜು ಕಾಗೆ ಹೇಳಿಕೆಗೆ ಗಟ್ಟಿಯಾಗಿ ಧ್ವನಿಗೂಡಿಸಿದರು. ಕಳೆದ 6 ತಿಂಗಳ ಹಿಂದೆ ರಾಜು ಕಾಗೆ ಶಾಸಕಾಂಗ ಸಭೆಯಲ್ಲಿ ಹೇಳಿದ್ದಾರೆ. ಹಗರಣಗಳ ಬಗ್ಗೆ ಇನ್ನೂ ಹಲವರು ಮಾತನಾಡುವವರಿದ್ದಾರೆ.

ಕಾಂಗ್ರೆಸ್‌ನಲ್ಲಿ ಹಲವರ ಅಸಮಾಧಾನ ಸ್ಪೋಟ ಬಗ್ಗೆ ಸುಳಿವು ಕೊಟ್ಟರು. ನಾನು ನನ್ನ ಹೇಳಿಕೆಯಿಂದ ಹಿಂದೆ ಸರಿಯೋ ಮಾತೇ ಇಲ್ಲ. ಅಫಜಲಪುರ ಶಾಸಕ ಎಮ್‌ವೈ ಪಾಟೀಲ್ ಸಹ ಸರ್ಕಾರದ ವಿರುದ್ಧ ಪಲ್ಟಿ ಹೊಡೆದಿದ್ದಾರಂತೆ. ಅಫಜಲಪುರ ಕ್ಷೇತ್ರದಲ್ಲಿ ಏನು ಅಭಿವೃದ್ಧಿಯಾಗಿಲ್ಲ ಎಂದಿದ್ದಾರಂತೆ ಎಂದರು.

ಇದನ್ನೂ ನೋಡಿ: POSH ಕಾಯ್ದೆ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?Janashakthi Media

Donate Janashakthi Media

Leave a Reply

Your email address will not be published. Required fields are marked *