ಬೆಂಗಳೂರು| ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬೈಕ್ ಸವಾರ ಬಂಧನ

ಬೆಂಗಳೂರು: ಜೂನ್ 21 ಶನಿವಾರದಂದು ಜ್ಞಾನಭಾರತಿ ಠಾಣೆ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬೈಕ್ ಸವಾರರೊಬ್ಬರನ್ನು ಬಂಧಿಸಿದ್ದಾರೆ.

ಜ್ಞಾನಭಾರತಿ ನಿವಾಸಿ ನವೀನ್ ಗೌಡ ಎಂಬಾತನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಸಿ.ಕುಮಾರ್ ಮತ್ತು ದ್ವಾರಕಾನಾಥ್, ಕೃಷ್ಣ ಅರಮನೆ ಹೋಟೆಲ್ ಸಮೀಪದಲ್ಲಿರುವ ಎಸ್‌ಬಿಐ ಬ್ಯಾಂಕ್ ಬಳಿ ವಾಹನ ತಪಾಸಣೆ ಕೈಗೊಂಡಿದ್ದರು. ಉಲ್ಲಾಳ ಕಡೆಯಿಂದ ಬೈಕ್‌ನಲ್ಲಿ ಹೆಲ್ಮೆಟ್‌ ಧರಿಸದೆ ಬರುತ್ತಿದ್ದ ಆರೋಪಿಯ ವಾಹನ ತಡೆದು, ತಪಾಸಣೆ ನಡೆಸಿದರು. ಬೆಂಗಳೂರು

ಇದನ್ನೂ ಓದಿ: ಇರಾನ್ ಮೂರು ಅಣುಸ್ಥಾವರಗಳ ಮೇಲೆ ಅಮೆರಿಕದ ದಾಳಿ

‘ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ಪಾವತಿಸುವಂತೆ ಆರೋಪಿಗೆ ಸೂಚಿಸಲಾಯಿತು. ಇದರಿಂದ ಕುಪಿತಗೊಂಡ ನವೀನ್‌ ಗೌಡ, ‘ದಂಡ ಹಾಕಲು ಹೇಳಿದವರು ಯಾರು? ಹೆಲ್ಮೆಟ್ ಧರಿಸುವುದಿಲ್ಲ, ದಂಡ ಪಾವತಿಸುವುದಿಲ್ಲ. ದಂಡ ವಿಧಿಸುತ್ತಿರುವುದನ್ನು ನೋಡಿಯೇ ಉದ್ದೇಶಪೂರ್ವಕವಾಗಿ ಹೆಲ್ಮೆಟ್ ಧರಿಸದೇ ಬಂದಿದ್ದೇನೆ. ನನ್ನ ಮೇಲೆ ದೌರ್ಜನ್ಯ ಮಾಡುತ್ತೀರಾ ಎಂದು ಏರುದನಿಯಲ್ಲಿ ಮಾತನಾಡಿದ್ದಾನೆ’ ಎಂದು ಪಿಎಸ್‌ಐ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

‘ಅಲ್ಲದೇ ಜೆಡಿಎಸ್‌ನ ಸ್ಥಳೀಯ ಘಟಕದ ಅಧ್ಯಕ್ಷ ನಾನು ಎಂದು ಹೇಳಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಬಳಿಕ ನಾವು ನೀಡಿದ ನಿರ್ದೇಶನಗಳನ್ನು ಪಾಲಿಸದೇ ಬೈಕ್ ತೆಗೆದುಕೊಂಡು ಹೋಗಿದ್ದಾನೆ. ಕಾನೂನು ಪ್ರಕಾರ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಹೇಳಿದ್ದಾರೆ.

ಆರೋಪಿಯನ್ನು ಬಂಧಿಸಿ, ಬೈಕ್‌ ವಶಪಡಿಸಿಕೊಳ್ಳಲಾಗಿದೆ. ಆತ ಸ್ಥಳೀಯ ಘಟಕದ ಜೆಡಿಎಸ್ ಅಧ್ಯಕ್ಷ ಅಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ನೋಡಿ: ಬಾನು ಮುಷ್ತಾಕ್‌ಗೆ ಬೂಕರ್ ಪ್ರಶಸ್ತಿ | ಅಕ್ಷರಕ್ಕಾಗಿ ಸಂಭ್ರಮಿಸುವ ವಾತಾವರಣ: ಅನುಪಮಾJanashakthi Media

Donate Janashakthi Media

Leave a Reply

Your email address will not be published. Required fields are marked *