ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜ್ ರಾಜೀನಾಮೆ ನೀಡಿರುವ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿದ್ದೂ, ತಾಯಿಯ ಅನಾರೋಗ್ಯ ಹಿನ್ನೆಲೆಯಲ್ಲಿ ಅವರನ್ನು ನೋಡಿಕೊಳ್ಳಬೇಕಾಗಿದೆ ಹಾಗಾಗಿ ಕಾಸಾಪದ ಮಹತ್ವದ ಜವಾಬ್ದಾರಿ ಹೊರಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ.
ಆದರೆ, ಅಧ್ಯಕ್ಷ ಮಹೇಶ್ ಜೋಷಿ ರ ನಡೆಯನ್ನು ವಿರೋಧಿಸಿ ಅವರು ರಾಜೀನಾಮೆ ನೀಡಿದ್ದಾರೆಂಬ ಮಾತುಗಳೂ ಕೂಡ ಕೇಳಿ ಬರುತ್ತಿವೆ.
ಇದನ್ನೂ ಓದಿ: ಬಾಲಕಿಯ ಮೇಲೆ ಅತ್ಯಾಚಾರ: ಬಿಜೆಪಿ ಶಾಸಕನ ಸೋದರಳಿಯ ಸೇರಿ ಇಬ್ಬರ ಬಂಧನ
ಕಳೆದ ಹಲವು ದಿನಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುತ್ತಿರುವ ಹಲವು ವಿದ್ಯಾಮಾನಗಳು ಸಾಕಷ್ಟುಅಸಮಾಧಾನಗಳಿಗೆ ಕಾರಣವಾಗುತ್ತಿವೆ. ಬಹಿರಂಗವಾಗಿ ಕೆಲ ಜಿಲ್ಲಾ ಸಂಘಟನೆಗಳು ಹಾಗೂ ಸಾಹಿತಿಗಳು ಮತ್ತು ಕಸಾಪದ ಹಿತ ಚಿಂತಕರು, ಅಧ್ಯಕ್ಷರು ಸರ್ವಾಧಿಕಾರಿ ದೋರಣೆ ತಳೆದಿದ್ದಾರೆ ಕೂಡಲೇ ರಾಜೀನಾಮೆ ನೀಡಬೇಕೆಂದು ಹೇಳುತ್ತಿದ್ದಾರೆ.
ಇದರ ನಡುವೆ ಕಸಾಪದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಪದ್ಮನಿ ನಾಗರಾಜ್ ಅವರು ರಾಜೀನಾಮೆ ನೀಡುತ್ತಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.ಇದರ ನಡುವೆ ಪದ್ಮನಿ ನಾಗರಾಜ್ ಅವರು ಯಾರ ಕರೆನೂ ಸ್ವೀಕರಿಸುತ್ತಿಲ್ಲ.
ಇದನ್ನೂ ನೋಡಿ: ಬಾನು ಮುಷ್ತಾಕ್ಗೆ ಬೂಕರ್ ಪ್ರಶಸ್ತಿ | ಅಕ್ಷರಕ್ಕಾಗಿ ಸಂಭ್ರಮಿಸುವ ವಾತಾವರಣ: ಅನುಪಮಾJanashakthi Media
