ಉಡುಪಿ: ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆಯನ್ನು ತೆರೆದು ಹಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಹಿಸಿ ಹಣಕ್ಕಾಗಿ ಬೇಡಿಕೆ ಇಟ್ಟ ಘಟನೆ ನಡೆದಿದೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಕಲಿ
ಪೇಸ್ಬುಕ್ ಸಾಮಾಜಿಕ ಜಾಲತಾಣದಲ್ಲಿ ನನ್ನ ಫೋಟೋ ದುರ್ಬಳಕೆ ಮಾಡಿಕೊಂಡು ಪೇಸ್ಬುಕ್ ಖಾತೆ ಸೃಜಿಸಿ Friend request ಕಳುಹಿಸಿ ಹಣದ ಬೇಡಿಕೆ ಸಲ್ಲಿಸುತ್ತಿರುವುದು ನನ್ನ ಗಮನಕ್ಕೆ ಬಂದಿರುತ್ತದೆ ಎಂದು ಡಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಲಂಚ, ವಂಚನೆ ಪ್ರಕರಣ : ಸಿಬಿಐ ತಕ್ಷಣವೇ ಗೌತಮ್ ಅದಾನಿ ಮೇಲೆ ಭ್ರಷ್ಟಾಚಾರದ ಕೇಸು ದಾಖಲಿಸಬೇಕು-ಸಿಪಿಐ(ಎಂ) ಆಗ್ರಹ
ಈ ಬಗ್ಗೆ ಠಾಣಾಧಿಕಾರಿ ಸೆನ್ ಪೊಲೀಸ್ ಠಾಣೆ ಉಡುಪಿ ಜಿಲ್ಲೆ ಇವರಿಗೆ ದೂರನ್ನು ನೀಡಲಾಗಿದೆ. ಆದ್ದರಿಂದ ಅಂತಹ ಯಾವುದೇ ತರಹದ ಸಂದೇಶಗಳಿಗೆ ಸ್ಪಂದಿಸದೆ ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುವಂತೆ ಕೋರಿದೆ.
ಇದನ್ನೂ ನೋಡಿ: ದೇಶದ ರಾಜ ವ್ಯಾಪಾರಿಯಾದ ಕಾರಣ ದೇಶದ ಜನ ಬಿಕಾರಿಯಾಗುತ್ತಿದ್ದಾರೆ – ಡಾ. ಕೆ.ಪ್ರಕಾಶ್ Janashakthi Media