ಪಬ್ ಗೆ ತೆರಳಿದ್ದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ; ನಾಲ್ವರ ಬಂಧನ

ಮಂಗಳೂರು:  ಪಬ್ ಒಂದರಲ್ಲಿ ಯುವತಿಯ ಮೇಲೆ ಯುವಕರು ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಪಾಂಡೇಶ್ವರ ಠಾಣೆ ವ್ಯಾಪ್ತಿಯಲ್ಲಿ ಇಂತಹ ಘಟನೆ ನಡೆದಿದ್ದು,  ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿರುವ  ನಾಲ್ವರು ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ವಿಜಯಪುರ : ಹಿರಿಯ ರೈತ ನಾಯಕ ಭೀಮಶಿ ಕಲಾದಗಿ ನಿಧನ

ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮಾಲ್ ಒಂದರ ಪಬ್ ಗೆ ಸ್ನೇಹಿತೆಯರೊಂದಿಗೆ ಯುವತಿಯೊಬ್ಬಳು ತೆರಳಿದ್ದಳು. ಈ ವೇಳೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂತಿಸಿದಂತ ಪುಂಡರು, ಬೈದು ಯುವತಿಗೆ ಬಿಯರ್ ಬಾಟಲಿಯಿಂದಲೂ ಹಲ್ಲೆ ನಡೆಸಲು ಯತ್ನಿಸಿದ್ದಾರೆ.

ಇದಷ್ಟೇ ಅಲ್ಲದೇ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಲಾಗಿದೆ. ಜೊತೆಗೆ ಯುವತಿಗೆ ಕಿರುಕುಳ ಕೂಡ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಯುವತಿಯು ಪಾಂಡೇಶ್ವರ ಪೊಲೀಸ್ ಠಾಮೆಗೆ ತೆರಳಿ ದೂರು ನೀಡಿದ್ದರು. ಈ ದೂರು ಆಧರಿಸಿ ಪೊಲೀಸರು, ಪುತ್ತೂರಿನ ವಿನಯ್, ಮಹೇಶ್, ಪ್ರೀತೇಶ್ ಹಾಗೂ ನಿತೇಶ್ ಎಂಬ ನಾಲ್ವರು ಕಾಮಕುರನ್ನು ಬಂಧಿಸಿದ್ದಾರೆ.

ಇದನ್ನು ನೋಡಿ : ರಾಜಭವನ,ಪಕ್ಷಾತೀತವಾಗಿರಬೇಕು,ಬಿಜೆಪಿಯ ಕಚೇರಿ ಆಗಬಾರದುJanashakthi Media

Donate Janashakthi Media

Leave a Reply

Your email address will not be published. Required fields are marked *