ಶಿಕ್ಷಕ ಸೇರಿದಂತೆ ಬಿಇಒ ಲೋಕಾ ಬಲೆಗೆ: ಗೌರವ ಧನ ಬಿಡುಗಡೆ ಮಾಡಲು ಲಂಚ

ನಂಜನಗೂಡು :ಗೌರವ ಧನ ಬಿಡುಗಡೆ ಮಾಡಲು ವ್ಯಕ್ತಿಯೊಬ್ಬರಿಂದ 5 ಸಾವಿರ ಲಂಚ ಪಡೆಯುತ್ತಿದ್ದ ಶಿಕ್ಷಕ ಹಾಗೂ ಬಿಇಓ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ನಂಜನಗೂಡು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಲಿಂಗಯ್ಯ ಹಾಗೂ ಶಿಕ್ಷಕ ರಮೇಶ್ ಲೋಕಾಯುಕ್ತ ಬಲೆಗೆ ಬಿದ್ದವರು. ಮೈಸೂರಿನ ತಿಲಕ್ ನಗರ ನಿವಾಸಿ ನರಸಿಂಹಮೂರ್ತಿ ಎಂಬುವರಿಂದ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

ಶಿವಲಿಂಗಯ್ಯ ಪರವಾಗಿ ಶಿಕ್ಷಕ ರಮೇಶ್ ಬಿಇಒ ಕಛೇರಿಯಲ್ಲಿ ಇವರು ಲಂಚದ ಹಣವನ್ನು ಸ್ವೀಕರಿಸಿದ್ದರು. ಎಸ್ ಪಿ ಶ್ರೀ ಸಜೀತ್. ವಿ.ಜೆ. ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆದಿದೆ.

ಕರ್ನಾಟಕ ಲೋಕಾಯುಕ್ತ ಮೈಸೂರು ಡಿವೈಎಸ್ಪಿ ಕೃಷ್ಣಯ್ಯ. ವಿ, ಕರ್ನಾಟಕ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ರವಿಕುಮಾರ್, ಉಮೇಶ್, ಜಯರತ್ನ, ಹಾಗೂ ಮೈಸೂರು ಲೋಕಾಯುಕ್ತ ಸಿಬ್ಬಂದಿಗಳು ವೀರ ಭದ್ರ ಸ್ವಾಮಿ, ಗೋಪಿ, ಲೋಕೇಶ್, ಆಶಾ, ಕಾಂತರಾಜು, ಮೋಹನ, ಪ್ರದೀಪ್, ಮೋಹನ್ ಗೌಡ ಮೈಸೂರು ಲೋಕಾಯುಕ್ತ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *