ರಾಮ ಮಂದಿರ ದೇಣಿಗೆ ದುರುಪಯೋಗ ಪ್ರಕರಣ: 8 ಮಂದಿ ಬಂಧನ

ಅಯೋಧ್ಯ: ರಾಮ ಮಂದಿರಕ್ಕೆ ಬಂದ ದೇಣಿಗೆ ಮತ್ತು ಕಾಣಿಕೆ ಹಣ ದುರ್ಬಳಕೆ ಮಾಡಿದ ಆರೋಪದ ಪ್ರಕರಣದಲ್ಲಿ ಎಫ್‌ಐಆರ್‌ನಲ್ಲಿ ಹೆಸರು ಉಲ್ಲೇಖಗೊಂಡಿದ್ದ ಎಲ್ಲ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಣಿಗೆ 

ಉತ್ತರ ಪ್ರದೇಶ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡ (SIT) ನೀಡಿದ ಪ್ರಾಥಮಿಕ ವರದಿ ಆಧರಿಸಿ ಬಂಧನ ಕ್ರಮ ಕೈಗೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ಸದ್ಯ ಅಯೋಧ್ಯೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ದೇಣಿಗೆ 

ಬಂಧಿತರನ್ನು ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ಸುಭಾಶ್ ಶ್ರೀವಾಸ್ತವ ಹಾಗೂ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಎಂದು ಗುರುತಿಸಲಾಗಿದೆ. ಇವರೆಲ್ಲರೂ ದೇಗುಲಕ್ಕೆ ಬರುವ ನಗದು ಮತ್ತು ಕಾಣಿಕೆಗಳ ಎಣಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಗ್ರಾಮಗಳಿಗೆ ಉಚಿತ ಫೈಬರ್ ಸಂಪರ್ಕ: ಭಾರತ್‌ನೆಟ್‌ ಯೋಜನೆಯಡಿ ಬಿಎಸ್‌ಎನ್‌ಎಲ್‌ನಿಂದ ವಿಶೇಷ ಅವಕಾಶ

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 306 (ಸೇವಕರಿಂದ ಆಸ್ತಿಯ ಕಳ್ಳತನ), 316 (ನಂಬಿಕೆ ದ್ರೋಹ), 317 (ಕದ್ದ ಆಸ್ತಿಯ ಅಕ್ರಮ ಸ್ವೀಕಾರ) ಹಾಗೂ 61 (ಕ್ರಿಮಿನಲ್ ಪಿತೂರಿ) ಸೇರಿದಂತೆ ವಿವಿಧ ಕಲಮಗಳಡಿ ಪ್ರಕರಣ ದಾಖಲಾಗಿದೆ.

ಜೂನ್ 7ರಿಂದ ಈ ದುರುಪಯೋಗದ ಆರೋಪಗಳು ಕೇಳಿಬಂದಿದ್ದವು. ಬಳಿಕ ಜೂನ್ 13ರಂದು ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿ ತನಿಖೆ ಆರಂಭಿಸಿತ್ತು. ಪ್ರಾಥಮಿಕ ವರದಿ ಆಧರಿಸಿ ಜೂನ್ 25ರಂದು ಎಫ್‌ಐಆರ್ ದಾಖಲಿಸಲಾಗಿದ್ದು, ನಂತರ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಆರೋಪ ಮಾಡಿದ ನಂತರ ವಿಷಯವು ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿತ್ತು. ವಿರೋಧ ಪಕ್ಷಗಳು ಹಾಗೂ ಬಿಜೆಪಿ ನಾಯಕರು ಸಹ ತನಿಖೆಗೆ ಒತ್ತಾಯಿಸಿದ್ದರು.

ಬಂಧಿತರಲ್ಲಿ ಸುಭಾಶ್ ಚಂದ್ರ ಶ್ರೀವಾಸ್ತವ ಅವರು ನಗದು ಎಣಿಕೆ ಸಿಬ್ಬಂದಿಯ ಮುಖ್ಯಸ್ಥರಾಗಿದ್ದು, ಉಳಿದವರು ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು. ಆರೋಪಿಗಳಲ್ಲಿ ಒಬ್ಬರಾದ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಕಾರಿನ ಮಾಜಿ ಚಾಲಕರಾಗಿದ್ದರು ಎನ್ನುವುದು ವಿಶೇಷವಾಗಿ ಗಮನ ಸೆಳೆದಿದೆ.

ಇದನ್ನೂ ನೋಡಿ: ವಿದ್ಯುತ್ ಖಾಸಗೀಕರಣ ಆದರೆ ದುಬಾರಿ ಹೊರೆ ಗ್ಯಾರಂಟಿ! | ಟಾಟಾ ಪವರ್‌ಗೆ ಲೈಸೆನ್ಸ್ ಬೇಡ, ಆಕ್ಷೇಪಣೆ ಸಲ್ಲಿಸಿ

Donate Janashakthi Media

Leave a Reply

Your email address will not be published. Required fields are marked *