₹84,084 ಕೋಟಿ ‘ಸಮುದ್ರ ಮಂಥನ’ ಯೋಜನೆ: ಅದಾನಿಗೆ ಲಾಭ ಮಾಡಿಕೊಡುವ ಹುನ್ನಾರವೇ? ಕಾಂಗ್ರೆಸ್ ಆರೋಪ

ನವದೆಹಲಿ: ಕೇಂದ್ರ ಸರ್ಕಾರದ ₹84,084 ಕೋಟಿ ಮೊತ್ತದ ‘ಸಮುದ್ರ ಮಂಥನ ಯೋಜನೆ’ಯಿಂದ ಖಾಸಗಿ ಕಂಪನಿಗಳಿಗೆ, ವಿಶೇಷವಾಗಿ ಅದಾನಿ ಸಮೂಹಕ್ಕೆ ಲಾಭವಾಗಲಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಯೋಜನೆಯನ್ನು ತಕ್ಷಣವೇ ರದ್ದುಗೊಳಿಸಿ, ಅನುದಾನವನ್ನು ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮಕ್ಕೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. 

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಶಕ್ತಿಸಿನ್ಹ ಗೋಹಿಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮುದ್ರದ ಆಳದಲ್ಲಿನ ತೈಲ ಮತ್ತು ಅನಿಲ ಶೋಧನೆಗೆ ಕೇಂದ್ರ ಸಚಿವ ಸಂಪುಟ ₹84,084 ಕೋಟಿ ಮಂಜೂರು ಮಾಡಿದೆ. ಈ ಯೋಜನೆಯಡಿ ಶೋಧನೆ ನಡೆಸುವ ಕಂಪನಿಗೆ ಯೋಜನಾ ವೆಚ್ಚದ ಶೇ.50ರಷ್ಟು ಹಣವನ್ನು ನೇರವಾಗಿ ನೀಡುವ ವ್ಯವಸ್ಥೆ ಇದೆ ಎಂದು ಆರೋಪಿಸಿದರು.

ಈ ಯೋಜನೆಯಿಂದ ಅದಾನಿ ಸಮೂಹಕ್ಕೆ ಈಗಾಗಲೇ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗೋಹಿಲ್ ದೂರಿದರು. ಅದಾನಿ ಸಮೂಹವು ಮೂರು ತೈಲ–ಅನಿಲ ಬ್ಲಾಕ್‌ಗಳಿಗೆ ಅಗತ್ಯ ಅನುಮತಿಗಳನ್ನು ಪಡೆದುಕೊಂಡಿದ್ದು, ಅವುಗಳಲ್ಲಿ ಶೋಧನೆ ಆರಂಭಿಸಲು ಸಿದ್ಧವಾಗಿದೆ ಎಂದು ಅವರು ಹೇಳಿದರು.

ಅದಾನಿ ಮತ್ತು ವೆಲ್ಸ್‌ಪನ್ ಸಂಸ್ಥೆಗಳು 2005ರಲ್ಲಿ ತೈಲ ಮತ್ತು ಅನಿಲ ಶೋಧನೆಗಾಗಿ ಜಂಟಿ ಸಹಭಾಗಿತ್ವದ ಸಂಸ್ಥೆ ಸ್ಥಾಪಿಸಿವೆ. ಅದರಲ್ಲಿ ಅದಾನಿ ಸಮೂಹ ಶೇ.65ರಷ್ಟು ಮತ್ತು ವೆಲ್ಸ್‌ಪನ್ ಶೇ.35ರಷ್ಟು ಪಾಲು ಹೊಂದಿವೆ ಎಂದು ಗೋಹಿಲ್ ತಿಳಿಸಿದರು. ಹೊಸ ಯೋಜನೆಯಿಂದ ಈ ಸಂಸ್ಥೆಯ ವಾಣಿಜ್ಯ ಸ್ಥಿತಿಗೆ ಅನುಕೂಲವಾಗಲಿದೆ ಎಂಬುದು ಕಾಂಗ್ರೆಸ್‌ನ ಆರೋಪವಾಗಿದೆ.

ಇದನ್ನೂ ಓದಿ : ಫುಟ್‌ಪಾತ್ ಖಾಲಿ ಮಾಡಲು ಬುಲ್ಡೋಜರ್‌: ಬೀದಿ ವ್ಯಾಪಾರಿಗಳ ಬದುಕಿನ ಗತಿ ಏನು?

Donate Janashakthi Media

Leave a Reply

Your email address will not be published. Required fields are marked *