ಗಜೇಂದ್ರಗಡ: ಜೂನ್ 10ರಂದು ಗಜೇಂದ್ರಗಡ ನಗರದ ಪುರಸಭೆಯ ಮುಂಭಾಗದಿಂದ ಬೃಹತ್ ಪ್ರತಿಭಟನೆ ಮೆರವಣಿಗೆಯ ಮೂಲಕ ಪ್ರಾರಂಭಗೊಂಡು ಚೌಕಿ ಮಠ, ದುರ್ಗಾ ಸರ್ಕಲ್ ಮೂಲಕ ಕೆಕೆ ಸರ್ಕಲ್ಲಿಗೆ ಬಂದು ತಲುಪಿ ಕೆಕೆ ಸರ್ಕಲ್ ನಲ್ಲಿ ಮಾನವ ಸರಪಳಿ ಮಾಡಿ ಎಸ್‌ಎಫ್‌ಐ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ಮಾಡಿದರು. ನಂತರ ಮಾನ್ಯ ತಹಶೀಲ್ದಾರ ಮನವಿ ಸ್ವೀಕರಿಸಿದರು. ಶಿಕ್ಷಣ
ಈ ಸಂದರ್ಭದಲ್ಲಿ ಎಸ್ ಎಫ್ ಐ ರಾಜ್ಯ ಉಪಾಧ್ಯಕ್ಷರಾದ ಗಣೇಶ ರಾಠೋಡ ಮಾತನಾಡಿ ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ ಅನಧಿಕೃತ ಕೋಚಿಂಗ್ ಸೆಂಟರ್ ಗಳ ಹಾವಳಿ ತಡೆಗಟ್ಟಲು ಒತ್ತಾಯಿಸಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ, ತಹಶಿಲ್ದಾರಗಳಿಗೆ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ, ಹೋರಾಟ ಮಾಡಿ ಪ್ರತಿಭಟನೆ ಮನವಿಗಳನ್ನು ಸಲ್ಲಿಸಿದ್ದರು ಯಾವುದೇ ಕ್ರಮ ಜರುಗಿಸಿಲ್ಲ.
ಹಾಗಾಗಿ ಇಂದು ಅನಿವಾರ್ಯವಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ಮತ್ತೆ ನಾವು ಬೃಹತ್ ಪ್ರತಿಭಟನೆಗಳನ್ನ ಮಾಡಿ ಸರ್ಕಾರದ ಗಮನ ಮತ್ತು ಸಾರ್ವಜನಿಕರ ಗಮನ ಸೆಳೆಯುತ್ತಿದ್ದೇವೆ ಮತ್ತು ತಕ್ಷಣವೇ ಹೋರಾಟದ ಸ್ಥಳಕ್ಕೆ ಡಿಡಿಪಿಐ ಬಂದು ಜನರ ವಿದ್ಯಾರ್ಥಿಗಳ ಸಮಸ್ಯೆಗಳೇನು ಎಂದು ಆಲಿಸಲು ಆಗುತ್ತಿಲ್ಲ ಎಂದರೆ ಅಂತಹ ಡಿಡಿಪಿಐ ನಮ್ಮ ಜಿಲ್ಲೆಗೆ ಬೇಡ ಎಂದು ಒತ್ತಾಯಿಸಿ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಕೇಂದ್ರ ಸಂಪುಟದಲ್ಲಿ ಶೀಘ್ರ ಪುನರ್‌ರಚನೆ ಸಾಧ್ಯತೆ: ಬಿಜೆಪಿ ವಲಯದಲ್ಲಿ ಚರ್ಚೆ
ಇಲ್ಲಿವರೆಗೂ ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲಕರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿದ್ದರು. ನಮ್ಮ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿದೆ ಹಾಗಾಗಿ ಜನತೆಯ ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸಲು ಈ ಹೋರಾಟವನ್ನು ರೂಪಿಸಲಾಗಿದೆ. ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳಿಲ್ಲ ಶುದ್ಧ ಕುಡಿಯುವ ನೀರು ಸೌಚಾಲಯ ಸೂಸಜ್ಜಿತ ಕಟ್ಟಡ ಪಠ್ಯಪುಸ್ತಕ ಸಮವಸ್ತ್ರ ಹೀಗೆ ಯಾವುದನ್ನು ಕೊಡದೆ ವಿದ್ಯಾರ್ಥಿಗಳನ್ನು ಸತಾಯಿಸುತ್ತಿದ್ದಾರೆ. ಮ್ಯಾಗ್ನೆಟ್ ಕೆಪಿಎಸ್ ಹೆಸರಿನಲ್ಲಿ ಕನ್ನಡ ಶಾಲೆಗಳನ್ನ ಮುಚ್ಚಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಎಸ್ ಎಫ್ ಐ ನ ಜಿಲ್ಲಾಧ್ಯಕ್ಷರಾದ ಚಂದ್ರು ರಾಥೋಡ್ ಮಾತನಾಡಿ ಎಲ್ಲಾ ಹಳ್ಳಿಗಳಿಗೂ ಸಮರ್ಪಕವಾಗಿ ಬಸ್ ವ್ಯವಸ್ಥೆಯನ್ನು ಕಲ್ಪಿಸಬೇಕು ಈಗಾಗಲೇ ಸರ್ಕಾರ ಉಚಿತವಾಗಿ ಬಸ್ ಪ್ರಯಾಣಕ್ಕೆ ಅವಕಾಶ ನೀಡಿದ್ದು ಎಲ್ಲಾ ವಿದ್ಯಾರ್ಥಿಗಳಿಗೂ ತಕ್ಷಣವೇ ಉಚಿತ ಬಸ್ ಪಾಸ್ ಅನ್ನು ಸಾರಿಗೆ ಇಲಾಖೆ ನೀಡಬೇಕು ಆದರೆ ಕಾಲೇಜುಗಳು ಶಾಲೆಗಳು ಪ್ರಾರಂಭಗೊಂಡು 15 ದಿನ ಆದರೂ ಬಸ್ ಪಾಸುಗಳನ್ನು ವಿತರಣೆ ಮಾಡುತ್ತಿಲ್ಲ ಎಂದು ದೂರಿದರು ಜೊತೆಗೆ ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಗಳನ್ನ ಕಲ್ಪಿಸಬೇಕು ಹಾಸ್ಟೆಲ್ ಗಳಲ್ಲಿ ಮೂಲಭೂತ ಸೌಕರ್ಯಗಳು ಪೌಷ್ಟಿಕ ಆಹಾರ ನೀಡಬೇಕು ಇಂತಹ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ನೀಡಲು ಒತ್ತಾಯಿಸಬೇಕಾದ ಶಾಸಕರು ಇಂದು ಮಂತ್ರಿ ಗಿರಿಗಾಗಿ ಓಡಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್ ಆಫ್ ಐ ನ ಮಾಜಿ ಜಿಲ್ಲಾ ಅಧ್ಯಕ್ಷರಾದ ಪೀರು ರಾಠೋಡ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು ಅವುಗಳನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಜೊತೆಗೆ ಬಡವರ ಮಕ್ಕಳಿಗೊಂದು ಶಿಕ್ಷಣ ಶ್ರೀಮಂತರ ಮಕ್ಕಳಿಗೆ ಅಥವಾ ಉಳ್ಳವರಿಗೊಂದು ಶಿಕ್ಷಣ ಎಂಬಂತೆ ಹಿಂದಿನ ಶಿಕ್ಷಣ ವ್ಯವಸ್ಥೆ ರೂಪಗೊಳ್ಳುತ್ತಿದ್ದು ಅದನ್ನು ಪ್ರಜ್ಞಾಪೂರ್ವಕವಾಗಿ ಸರ್ಕಾರಗಳೇ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಬೆಳೆಸುವ ಮೂಲಕ ರೂಪಿಸುತ್ತಿದ್ದಾರೆ ಇದರ ವಿರುದ್ಧ ವಿದ್ಯಾರ್ಥಿಗಳು ಪಾಲಕರು ಹೋರಾಟ ಮಾಡಿ ಇಂತಹ ವ್ಯವಸ್ಥೆಯನ್ನು ಹಿಮ್ಮೆಟ್ಟಿಸಬೇಕು ಎಸ್ ಎಫ್ ಐ ನಡೆಸುತ್ತಿರುವ ಈ ಮಹತ್ತರ ಹೋರಾಟಕ್ಕೆ ಪಾಲಕರಾಗಿ, ಶಿಕ್ಷಣ ಪ್ರೇಮಿಗಳಾಗಿ ನಾವೆಲ್ಲ ಬೆಂಬಲಿಸೋಣ ಎಂದು ಹೇಳಿದರು.

ಹೋರಾಟದ ಸ್ಥಳಕ್ಕೆ ಮಾನ್ಯ ತಹಸಿಲ್ದಾರರಾದ ಶ್ರೀ ಕಿರಣ್ ಕುಮಾರ್ ಕುಲಕರ್ಣಿ ಮತ್ತು ಸಿಪಿಐ ಶ್ರೀ ವಿಜಯಕುಮಾರ್ ಅವರು ಆಗಮಿಸಿ ಮಾನ್ಯ ಡಿಡಿಪಿಐ,ಡಿಡಿಪಿಯು , ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯವರ ಜೋತೆ ದೂರವಾಣಿ ಮೂಲಕ ಸಂಪರ್ಕಿಸಿ ಲಿಖಿತವಾಗಿ ಜಿಲ್ಲಾಮಟ್ಟದ ಡೊನೇಷನ್ ನಿಯಂತ್ರಣ ಸಮಿತಿ ಅಥವಾ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ರಚಿಸಿ ಸಭೆ ಕರೆಯುವುದಾಗಿ ಭರವಸೆ ನೀಡಿದರು ನಂತರ ಮಾನ್ಯ ತಹಸಿಲ್ದಾರರು ಕೂಡ ತಾಲೂಕು ಮಟ್ಟದ ತಾಲೂಕು ಶಿಕ್ಷಣ ನಿಯಂತ್ರಣ ಪ್ರಾಧಿಕಾರ ರಚಿಸಿ ದಿನಾಂಕ 12/06/2026 ರಂದು ಸಭೆಯನ್ನು ಕರೆಯಲಾಗುತ್ತದೆ ಎಂದು ಭರವಸೆ ನೀಡಿದ ಮೇಲೆ ಎಸ್ಎಫ್ಐ ಮತ್ತು ವಿದ್ಯಾರ್ಥಿಗಳು ಎರಡು ದಿನದ ಗಡವುವನ್ನು ಇಲಾಖೆಯ ಅಧಿಕಾರಿಗಳಿಗೆ ನೀಡಿ ತಮ್ಮ ಹೋರಾಟವನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ಎಸ್ ಎಫ್ ರಾಜ್ಯ ಸಮಿತಿ ಸದಸ್ಯರಾದ ಶರಣು ಮಾಟರಂಗಿ ಅನಿಲ್ ಕುಮಾರ್ ಆರ್ ತಾಲೂಕು ಮುಖಂಡರಾದ ಪ್ರಸನ್ನ ಮೂರ್ತಿ ಗುರುಕಿರಣ್ ಜಿಗೇರಿ ಹನುಮೇಶ್, ಪ್ರವೀಣ್, ವೀರಪ್ಪ, ಹೊನ್ನೇಶ್, ಸುನಿಲ್, ಐಶ್ವರ್ಯ ಕುರಿಗಡೆ, ಉಮಾ ತಾಳಿ, ಬಸಮ್ಮ ಕಡಿವಾಳರ, ಲಲಿತಾ ಕುರಿ, ಭೀಮವ್ವ ಕಟ್ಟಿಮನಿ, ಗಣೇಶ್, ಪವಾರ, ಹಿಮಾಮ್ ಹುಸೇನ್, ವೀರೇಶ್ ಅಂಗಡಿ, ಶಿವಮ್ಮ ಮಂಡಗೇರಿ, ಅನಿತಾ ಮಣ್ಣೂರ್, ಕೀರ್ತಿ ಕಾರಡಗಿ, ಜ್ಯೋತಿ, ಜ್ಯೋತಿ ಗೊರ್ಪಡೆ, ಕೀರ್ತಿ ಕಲಾಕಾಪುರ್, ರೇಖಾ ಗಾರ್ಗಿ, ಶ್ವೇತಾ ರೊಟ್ಟಿ, ಕವಿತಾ ರಾಠೋಡ್, ಅನುಷಾ ಕೌಸಗಿ, ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷರಾದ ಬಾಲು ರಾಥೋಡ, ಕೆ ಪಿ ಆರ್ ಎಸ್ ಮುಖಂಡರಾದ ಚೆನ್ನಪ್ಪ ಗುಗಲೋತ್ತರ, ವಿರೇಶ ರಾಠೋಡ, ಕಾರ್ಮಿಕ ಸಂಘಟನೆ ಮುಖಂಡರಾದ ಮೈಬು ಹವಾಲ್ದಾರ್ ,ಕನಕಪ್ಪ ಮಾದರ್, ವಿರಪ್ಪ ಮುಶೀಗೇರಿ, ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದನ್ನೂ ನೋಡಿ: ಖಾತೆ ಹಂಚಿಕೆಯಲ್ಲಿ ಅಸಮಾಧಾನ: ಹಿರಿತನ ಪರಿಗಣಿಸುತ್ತಿಲ್ಲ ಎಂದ ಸಚಿವ ಕೆ ಹೆಚ್ ಮುನಿಯಪ್ಪ Janashakthi Media
