ಬೆಂಗಳೂರು : ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರ ಕನ್ನಡದ ದಿನಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿಯೂ ದೇಶದ ಮೊದಲ ಪ್ರಧಾನಿ, ಸ್ವಾತಂತ್ರ್ಯ ಹೋರಾಟಗಾರ ಜವಾಹರಲಾಲ್ ನೆಹರು ಭಾವಚಿತ್ರ ನಾಪತ್ತೆಯಾಗಿರುವುದು ವಿವಾದಕ್ಕೆ ಕಾಣೆಯಾಗಿದೆ.
ರಾಷ್ಟ್ರನಾಯಕರಾದ ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್ ಚಂದ್ರಶೇಖರ್ ಆಜಾದ್, ಲಾಲಾ ಲಜ್‌ಪತ್ ರಾಯ್, ಬಾಲ ಗಂಗಾಧರ್ ತಿಲಕ್, ಬಿಪಿನ್ ಚಂದ್ರ ಪಾಲ್, ಡಾ.ಬಿ.ಆರ್.ಅಂಬೇಡ್ಕರ್, ಲಾಲ್ ಬಹದ್ದೂರ್ ಶಾಸ್ತ್ರಿ, ಲಾಲ್ ಬಹುದ್ದೂರ್ ಶಾಸ್ತ್ರಿ, ಮೌಲಾನ ಅಬ್ದುಲ್ ಕಲಾಂ ಆಜಾದ್ ಫೋಟೋಗಳ ಜೊತೆಗೆ ಸಾವರ್ಕರ್ ಫೋಟೋವನ್ನು ಮುದ್ರಿಸಲಾಗಿದೆ.
ಜಾಹೀರಾತಿನಲ್ಲಿ ರೇಖಾಚಿತ್ರದ ಮಾದರಿಯಲ್ಲಿ ರಾಷ್ಟ್ರನಾಯಕರ ಫೋಟೋಗಳನ್ನು ಬಳಸಲಾಗಿದ್ದು, ಅಲ್ಲಿ ನೆಹರೂ ಚಿತ್ರವನ್ನು ನೀಡಲಾಗಿದೆ. ಸಾವರ್ಕರ್ ಚಿತ್ರವನ್ನು ಅಲ್ಲಿಯೂ ಹಾಕಲಾಗಿದೆ. ಅದರ ಕೆಳಗಡೆ ಫೋಟೊ ಮತ್ತು ಕಿರು ವಿವರಣೆ ಮೂಲಕ ಹಲವು ರಾಷ್ಟ್ರ ನಾಯಕರ ವಿವರಣೆ ನೀಡಲಾಗಿದೆ. ಆದರೆ ದೇಶದ ಮೊದಲ ಪ್ರಧಾನಿಯ ಫೋಟೊ, ವಿವರಣೆ ನೀಡದೆ ಅವಮಾನ ಮಾಡಲಾಗಿದೆ ಎಂದು ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗಿದೆ.
ಜಾಹಿರಾತನ್ನು ವಾರ್ತಾ ಇಲಾಖೆ ಪ್ರಕಟಿಸಿದ್ದು, ಮೊದಲ ಪ್ರಧಾನಿಯ ವಿವರಣೆಯನ್ನು ಬೇಕದೆ ನಿರ್ಲಕ್ಷಿಸಿದೆ ಹಾಗೂ ಅವಮಾನಿಸಿದೆ. ಜವಾಹರಲಾಲ್ ನೆಹರು ಒಳಗೊಂಡಿರುವ ಜಾಹಿರಾತನ್ನು ಪುನರ್ ಪ್ರಕಟಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಜಾಹಿರಾತಿನಿಂದ ಸಾವರ್ಕರ್ ಫೋಟೊ ಕೈಬಿಡುವಂತೆ ಇದೇ ವೇಳೆ ಆಗ್ರಹಿಸಿದ್ದಾರೆ.