‘ರಾಜಕೀಯ ಲಾಭ ಪಡೆದಾಗ ರಾಮಮಂದಿರ ರಾಜ್ಯದ ವಿಷಯವಾಗಿರಲಿಲ್ಲ’: ಪ್ರಿಯಾಂಕಾ ಗಾಂಧಿ

ನವದೆಹಲಿ: ಅಯೋಧ್ಯೆ ರಾಮಮಂದಿರದ ದೇಣಿಗೆ ದುರ್ಬಳಕೆ ಆರೋಪದ ಕುರಿತು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಉತ್ತರ ನೀಡಬೇಕು ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದಿಸಿದ್ದಾರೆ. ರಾಮಮಂದಿರದ ವಿಚಾರವನ್ನು ಈಗ ‘ರಾಜ್ಯದ ವಿಷಯ’ ಎಂದು ಹೇಳುತ್ತಿರುವ ಸರ್ಕಾರ, ಚುನಾವಣೆಗೆ ಮುನ್ನ ಅದೇ ಮಂದಿರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿತ್ತು ಎಂದು ಅವರು ಬಿಜೆಪಿ ವಿರುದ್ಧ ಟೀಕಿಸಿದ್ದಾರೆ. ರಾಮಮಂದಿರ

ಸಂಸತ್‌ ಆವರಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ರಾಮಮಂದಿರ ನಿರ್ಮಾಣಕ್ಕಾಗಿ ದೇಶದಾದ್ಯಂತ ಜನರು ತಮ್ಮ ನಂಬಿಕೆಯ ಆಧಾರದ ಮೇಲೆ ದೇಣಿಗೆ ನೀಡಿದ್ದಾರೆ. ಬಡವರೂ ಸೇರಿದಂತೆ ಅನೇಕರು ಮಂದಿರಕ್ಕಾಗಿ ಹಣ ನೀಡಿದ್ದಾರೆ. ಹೀಗಿರುವಾಗ ದೇಣಿಗೆಗೆ ಸಂಬಂಧಿಸಿದ ಆರೋಪಗಳ ಬಗ್ಗೆ ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ಉತ್ತರಿಸಬೇಕು ಎಂದು ಆಗ್ರಹಿಸಿದರು.

‘ಚುನಾವಣೆಯಲ್ಲಿ ರಾಜ್ಯದ ವಿಷಯವಾಗಿರಲಿಲ್ಲ’

ರಾಮಮಂದಿರದ ವಿಚಾರವನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡು ಬಿಜೆಪಿ ರಾಜಕೀಯ ಲಾಭ ಪಡೆದಾಗ ಅದು ರಾಜ್ಯದ ವಿಷಯವಾಗಿರಲಿಲ್ಲ. ಇದೀಗ ದೇಣಿಗೆ ದುರ್ಬಳಕೆ ಆರೋಪಗಳ ಬಗ್ಗೆ ಪ್ರಶ್ನೆ ಎದುರಾದಾಗ ಮಾತ್ರ ಅದನ್ನು ರಾಜ್ಯದ ವಿಷಯ ಎಂದು ಹೇಳಲಾಗುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರೇ ರಾಮಮಂದಿರವನ್ನು ಉದ್ಘಾಟಿಸಿದ್ದರು. ಅವರು ರಾಜ್ಯದ ಮುಖ್ಯಮಂತ್ರಿಯಲ್ಲ, ದೇಶದ ಪ್ರಧಾನಮಂತ್ರಿ. ರಾಮಮಂದಿರದ ಉದ್ಘಾಟನೆಗೆ ದೇಶದ ವಿವಿಧ ಭಾಗಗಳಿಂದ ಜನರು ಆಗಮಿಸಿದ್ದರು. ಹೀಗಿರುವಾಗ ಈಗ ಮಾತ್ರ ಈ ವಿಚಾರ ರಾಜ್ಯಕ್ಕೆ ಸಂಬಂಧಿಸಿದ್ದು ಎಂದು ಹೇಳಿ ಸಂಸತ್ತಿನಲ್ಲಿ ಉತ್ತರ ನೀಡುವುದರಿಂದ ಸರ್ಕಾರ ಹಿಂದೆ ಸರಿಯುವುದು ಸರಿಯಲ್ಲ ಎಂದು ಅವರು ಹೇಳಿದರು. ರಾಮಮಂದಿರ

ಇದನ್ನೂ ನೋಡಿ : ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್‌ ರೇವಣ್ಣ ಬಳಿ ಆಂಡ್ರಾಯ್ಡ್‌ ಮೊಬೈಲ್ ಪತ್ತೆ

ಸಂಸತ್‌ ಕಲಾಪ ಸ್ಥಗಿತಕ್ಕೂ ಸರ್ಕಾರವೇ ಹೊಣೆ: ಆರೋಪ

ಸಂಸತ್‌ ಕಲಾಪದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಮಾತನಾಡಿದ ಪ್ರಿಯಾಂಕಾ ಗಾಂಧಿ, ಜನರ ಪ್ರಶ್ನೆಗಳಿಗೆ ಉತ್ತರಿಸುವುದು ಸರ್ಕಾರದ ಜವಾಬ್ದಾರಿ ಎಂದರು. ರಾಮಮಂದಿರದ ದೇಣಿಗೆ ಆರೋಪ ಮತ್ತು ಯುವ ಪ್ರತಿಭಟನಾಕಾರರ ವಿರುದ್ಧದ ಪೊಲೀಸ್‌ ಕ್ರಮದ ವಿಚಾರದಲ್ಲಿ ಸರ್ಕಾರ ಉತ್ತರ ನೀಡಬೇಕು ಎಂದು ವಿರೋಧ ಪಕ್ಷಗಳ ಒಕ್ಕೂಟ ಒತ್ತಾಯಿಸುತ್ತಿದೆ.

ಈ ಎರಡು ವಿಷಯಗಳನ್ನು ಮುಂದಿಟ್ಟುಕೊಂಡು ಇಂಡಿಯಾ ಒಕ್ಕೂಟದ ಸಂಸದರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಂಸತ್ತಿಗೆ ಬಂದು ಈ ಕುರಿತು ಹೇಳಿಕೆ ನೀಡಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ. ರಾಮಮಂದಿರ

ಇದನ್ನೂ ಓದಿ : ರೈತ–ಕಾರ್ಮಿಕರ ಜೈಲ್‌ ಭರೋ: ಕೇಂದ್ರದ ನೀತಿಗಳ ವಿರುದ್ಧ ದೇಶಾದ್ಯಂತ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *