- ಭಾರತದ ಮೇಲೆ ಶೇ.25ರಷ್ಟು ಸುಂಕ ವಿಧಿಸಲು ಅಮೆರಿಕ ಪ್ರಸ್ತಾಪ.
- ವ್ಯಾಪಾರ ಒಪ್ಪಂದವಾದರೆ ಸುಂಕ ಶೇ.17ಕ್ಕೆ ಇಳಿಸುವ ಅವಕಾಶ.
- ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯದ ಆರೋಪವನ್ನು ತಳ್ಳಿಹಾಕಿದ ಭಾರತ
- ಅಮೆರಿಕದೊಂದಿಗೆ ಶೀಘ್ರ ವ್ಯಾಪಾರ ಒಪ್ಪಂದಕ್ಕೆ ಭಾರತದ ಒಲವು.
ಭಾರತ US ವ್ಯಾಪಾರ ಒಪ್ಪಂದ: ಭಾರತದ ಮೇಲೆ ಶೇ.25ರಷ್ಟು ಆಮದು ಸುಂಕ ವಿಧಿಸುವ ಅಮೆರಿಕದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಇದೇ ವೇಳೆ ಅಮೆರಿಕದೊಂದಿಗೆ ಶೀಘ್ರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಭಾರತ ಬದ್ಧವಾಗಿದೆ ಎಂದು ವಾಣಿಜ್ಯ ಸಚಿವಾಲಯ ಬುಧವಾರ ತಿಳಿಸಿದೆ. ವ್ಯಾಪಾರ ಒಪ್ಪಂದ
ಭಾರತದಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚುವರಿಯಾಗಿದೆ ಎಂಬ ಅಮೆರಿಕದ ಆರೋಪವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಈ ಸಂಬಂಧ ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ (USTR) ಹೊರಡಿಸಿರುವ ನೋಟಿಸ್ ಪರಿಶೀಲನೆಯಲ್ಲಿದೆ ಎಂದು ಸಚಿವಾಲಯ ಹೇಳಿದೆ.
ಚೀನಾ ಸೇರಿದಂತೆ 16 ಆರ್ಥಿಕ ವಲಯಗಳ ಉತ್ಪಾದನಾ ಸಾಮರ್ಥ್ಯ ಮತ್ತು ಉತ್ಪಾದನಾ ನೀತಿಗಳ ಕುರಿತು ಅಮೆರಿಕ ತನಿಖೆ ನಡೆಸಿದೆ. ಇದರ ಭಾಗವಾಗಿ ಭಾರತದ ಮೇಲೂ ಹೊಸ ಸುಂಕ ವಿಧಿಸುವ ಪ್ರಸ್ತಾಪ ಮಾಡಲಾಗಿದೆ.
ಪ್ರಸ್ತಾವಿತ ಸುಂಕವನ್ನು ಶೇ.25ಕ್ಕೆ ನಿಗದಿಪಡಿಸಲಾಗಿದ್ದು, ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮಗೊಂಡರೆ ಶೇ.17ಕ್ಕೆ ಇಳಿಸುವ ಅವಕಾಶವಿದೆ. ಈ ಮೂಲಕ ಏಷ್ಯಾದ ಇತರ ಸ್ಪರ್ಧಿ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತಕ್ಕೆ ಸ್ವಲ್ಪ ಅನುಕೂಲವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಕ್ಯೂಬಾ ಮೇಲೆ ಅಮೆರಿಕದ ಇಂಧನ ದಿಗ್ಬಂಧನಕ್ಕೆ WHO ಗರಂ! ತಕ್ಷಣ ತೆರವುಗೊಳಿಸಲು ಆಗ್ರಹ
ಭಾರತ ಈ ಹಿಂದೆ ನಡೆದ ತನಿಖೆಯಲ್ಲೂ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಯಾವುದೇ ವಲಯದಲ್ಲಿ ರಚನಾತ್ಮಕ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ ಇಲ್ಲ ಎಂದು ತಿಳಿಸಿದೆ. ವ್ಯಾಪಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದ್ವಿಪಕ್ಷೀಯ ಒಪ್ಪಂದದ ಮಾತುಕತೆಗಳ ಮೂಲಕವೇ ಪರಿಹರಿಸಿಕೊಳ್ಳಬೇಕು ಎಂಬುದು ಭಾರತದ ನಿಲುವಾಗಿದೆ.
ಇದನ್ನೂ ನೋಡಿ: ಇರಾನ್ ಮೇಲೆ ಯು.ಎಸ್.-ಇಸ್ರೇಲ್ ದಾಳಿ: ಜಾಗತಿಕ ಪರಿಣಾಮಗಳು – ಎನ್.ಕೆ. ವಸಂತರಾಜ್ Janashakthi Media
