ಮಧ್ಯಪ್ರದೇಶ: 2023 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ರಾಮಕೃಷ್ಣ ಶುಕ್ಲಾನನ್ನು ಆರ್ ಎಸ್ ಎಸ್ ಕಾಂಗ್ರೆಸ್ ಗೆ ಕಳಿಸಿತ್ತು. ಆಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತಿದ್ದ ಶುಕ್ಲಾ, ಬಿಜೆಪಿಯ ಗೆಲುವಿಗೆ ಕಾರಣವಾಗಿದ್ದರು. ಈಗ ಬಿಜೆಪಿಗೆ ವಾಪಸ್ ಬಂದಿದ್ದು ಲೋಕಸಭೆ ಚುನಾವಣೆಯ ಟಿಕೆಟ್ ಗಿಟ್ಟಿಸಿದ್ದು, ಸಂಘಿಗಳ ತಂತ್ರಗಾರಿಕೆಯನ್ನ ಸ್ವತಃ ಬಿಚ್ಚಿಟ್ಟಿದ್ದಾರೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ ಮುಖಂಡ ರಾಮಕೃಷ್ಣ ಶುಕ್ಲಾ ನೀಡಿರುವ ಈ ಹೇಳಿಕೆ ಬಿಜೆಪಿ ಸೇರಿದಂತೆ ಸಂಘಪರಿವಾರದಲ್ಲಿ ರಾಜಕೀಯ ಬಿರುಗಾಳಿ ಬೀಸಿದೆ. 2023 ರ ವಿಧಾನಸಭಾ ಚುನಾವಣೆಗೂ ಮುನ್ನ ರಾಮಕೃಷ್ಣ ಶುಕ್ಲಾ, ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದಿದ್ದರು. ಕಾಂಗ್ರೆಸ್‌ನಿಂದ ಮೋವ್ ಸ್ಥಾನಕ್ಕೆ ಸ್ಪರ್ಧಿಸಿ, 29,144 ಮತಗಳನ್ನು ಚುನಾವಣೆಯಲ್ಲಿ ಪಡೆದು ಮೂರನೇ ಸ್ಥಾನಕ್ಕೆಕುಸಿದು ಠೇವಣಿಯನ್ನೂ ಕಳೆದುಕೊಂಡಿದ್ದರು.
ಇದನ್ನೂ ಓದಿ: ಕರ್ನಾಟಕ ರಾಷ್ಟ್ರೀಯ ಅಂತರರಾಷ್ಟ್ರೀಯ ಇತರೆ ವಿದ್ಯಮಾನ ಎಎಪಿ ನಾಯಕರು ಸುನೀತಾ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದರು
ಬಿಜೆಪಿಯ ಹಿರಿಯ ನಾಯಕಿ ಉಷಾ ಠಾಕೂರ್, ದರ್ಬಾರ್ ಅವರನ್ನು 34,392 ಮತಗಳ ಅಂತರದಿಂದ ಸೋಲಿಸುವ ಮೂಲಕ ಕ್ಷೇತ್ರವನ್ನು ಗೆದ್ದಿದ್ದಾರೆ. ದರ್ಬಾರ್ ಎರಡು ಬಾರಿ ಮೊವ್ ಸ್ಥಾನವನ್ನು ಗೆದ್ದಿದ್ದರು, ಆದರೆ 2023 ರಲ್ಲಿ ಕಾಂಗ್ರೆಸ್ ಶುಕ್ಲಾಗೆ ಟಿಕೆಟ್ ನೀಡಿದ ನಂತರ ಬಂಡಾಯವಾಗಿ ಸ್ಪರ್ಧಿಸಿದರು.
ಹೀಗೆ ಬಿಜೆಪಿಯಿಂದ ಕಾಂಗ್ರೆಸ್ಗೆ ಬಂದಿದ್ದು ಸುಮ್ಮನೆ ಅಲ್ಲ, ಉದ್ದೇಶಪೂರಕವಾಗಿಯೇ ಸಂಘಪರಿವಾರವೇ ತಮ್ಮನ್ನಬೇಕಂತಲೇ ಕಾಂಗ್ರೆಸ್‌ಗೆ ಸೇರಿಕೊಳ್ಳುವಂತೆ ಕಳುಹಿಸಿತ್ತು ಹಾಗೂ 2023 ರ ಚುನಾವಣೆಯಲ್ಲಿ ಆರ್‌ಎಸ್‌ಎಸ್ ಸ್ವತಂತ್ರ ಅಭ್ಯರ್ಥಿಯನ್ನು ಹೇಗೆ ಗೆಲ್ಲಿಸಿತು?ಸಂಘಿಗಳಿಗೆ ಬಲಿಯಾಗಿದ್ದು ಯಾರು? ಎನ್ನುವ ಮೂಲಕ ಆರ್‌ಎಸ್‌ಎಸ್‌ನ ಹಿಡನ್ ಅಜೆಂಡಾವನ್ನು ಬಿಚ್ಚಿಟ್ಟಿದ್ದಾರೆ.
ಇತ್ತೀಚೆಗೆ ಮಾವ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶುಕ್ಲಾ, “ನಾನು ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್‌ಗೆ ಸೇರಿ, ಕಾಂಗ್ರೆಸ್ ಟಿಕೆಟ್‌ನಲ್ಲಿ ಮೋವ್‌ನಿಂದ ಸ್ಪರ್ಧಿಸಿ ಸೋತಿದ್ದೆ. ಇದೆಲ್ಲವೂ ಆರ್‌ಎಸ್‌ಎಸ್‌ನ ಹಿರಿಯ ನಾಯಕರೊಬ್ಬರ ಸೂಚನೆ ಮೇರೆಗೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಚುನಾವಣಾ ತಂತ್ರದ ಭಾಗವಾಗಿ ಮಾಡಲ್ಪಟ್ಟಿತ್ತು. ಆ ಸೂಚನೆಯಂತೆ ನಾನು ನಡೆದುಕೊಂಡೆ ಎಂದಿದ್ದಾರೆ. ಶುಕ್ಲಾ ಅವರು 29,144 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು ಮತ್ತು ಠೇವಣಿ ಕಳೆದುಕೊಂಡರು.
ಬಿಜೆಪಿಯ ಹಿರಿಯ ನಾಯಕಿ ಉಷಾ ಠಾಕೂರ್, ದರ್ಬಾರ್ ಅವರನ್ನು 34,392 ಮತಗಳ ಅಂತರದಿಂದ ಸೋಲಿಸುವ ಮೂಲಕ ಕ್ಷೇತ್ರವನ್ನು ಗೆದ್ದಿದ್ದಾರೆ. ದರ್ಬಾರ್ ಎರಡು ಬಾರಿ ಮೊವ್ ಸ್ಥಾನವನ್ನು ಗೆದ್ದಿದ್ದರು, ಆದರೆ 2023 ರಲ್ಲಿ ಕಾಂಗ್ರೆಸ್ ಶುಕ್ಲಾಗೆ ಟಿಕೆಟ್ ನೀಡಿದ ನಂತರ ಬಂಡಾಯವಾಗಿ ಸ್ಪರ್ಧಿಸಿದ್ದರು. ಇವರಿಬ್ಬರೂ ಈಗ ಬಿಜೆಪಿಯಲ್ಲಿದ್ದಾರೆ. ಅಂತರ್ ಸಿಂಗ್ ದರ್ಬಾರ್ ಕಳೆದ ತಿಂಗಳು ಮಾಡಿದ್ದರು, ಮತ್ತು ಶುಕ್ಲಾ ನಾಲ್ಕು ದಿನಗಳ ಹಿಂದೆ ಘರ್‌ವಾಪಸಿ ಆಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಉಷಾ ಠಾಕೂರ್ ಅವರ ದುರ್ಬಲ ಸ್ಥಿತಿಯೇ ಇದಕ್ಕೆ ಕಾರಣವಾಗಿತ್ತು. ಪಕ್ಷದೊಳಗೆ ಉಷಾಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್ ನ ಮಾಜಿ ಶಾಸಕ ಅಂತಾರ್ ಸಿಂಗ್ ದರ್ಬಾರ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಈ ಎಲ್ಲಾ ಸಮೀಕರಣಗಳನ್ನು ಪರಿಗಣಿಸಿ ದರ್ಬಾರ್ ಅವರನ್ನು ಬಿಜೆಪಿ ಪಕ್ಷವು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು ಎಂದು ಶುಕ್ಲಾ ಆರೋಪಿಸಿದ್ದಾರೆ.
ಈ ಮಾಸ್ಟರ್ ಪ್ಲ್ಯಾನ್ ನೀಡಿದ್ದ ಆ ಆರ್‌ಎಸ್‌ಎಸ್ ನಾಯಕ ಯಾರು?ಎಂಬ ಪ್ರಶ್ನೆಗೆ ಶುಕ್ಲಾ ಹೇಳಿರುವ ಹೆಸರು ವಿಶ್ವ ಹಿಂದೂ ಪರಿಷತ್‌ನ ಇಂದೋರ್ ವಿಭಾಗದ ಸಂಘಟನಾ ಪ್ರಮುಖ್ “ಅಭಿಷೇಕ್ ಉದೇನಿಯಾ”. ಹೀಗೆ ಶುಕ್ಲಾ ನೀಡಿದ ಸಂಘಪರಿವಾರದ ಒಡೆದು ಆಳುವ ಹಿಡನ್ ಅಜೆಂಡಾದ ಹೇಳಿಕೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡಲು ಪ್ರಾರಂಭಿಸಿದ್ದು ,ಇದು ಬಿರುಗಾಳಿಯನ್ನು ಉಂಟುಮಾಡಿದೆ.
ತನ್ನ ಸಹವರ್ತಿ ಪಕ್ಷದ ನಾಯಕ ಶುಕ್ಲಾನ ವಿರುದ್ಧ ದರ್ಬಾರ್ ಪ್ರತಿಕ್ರಿಯಿಸಿ “ಇದು ಶುಕ್ಲಾ ಅವರಂತಹ ಹಿರಿಯ ನಾಯಕನ ಬೇಜವಾಬ್ದಾರಿಯ ಪರಮಾವಧಿ. ಬಿಜೆಪಿ ನನ್ನನ್ನು ಅಭ್ಯರ್ಥಿ ಮಾಡಿದೆ ಎಂಬುದು ಸಂಪೂರ್ಣ ಸುಳ್ಳು ಆರೋಪ. ವಿವರಣೆ ನೀಡುವಂತೆ ಶುಕ್ಲಾಗೆ ವರದಿ ನೀಡುವಂತೆ ಕೇಳಿದ್ದೇನೆ. ನಿಗದಿತ ಅವಧಿಯೊಳಗೆ ಶುಕ್ಲಾ ವಿವರಾತ್ಮಕ ಉತ್ತರ ನೀಡದೇ ಹೋದಲ್ಲಿ,ಶುಕ್ಲಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.
ಇನ್ನು ವಿಶ್ವ ಹಿಂದೂ ಪರಿಷತ್‌ನ ಅಭಿಷೇಕ್ ಉದೇನಿಯಾ ,ಶುಕ್ಲಾ ನೀಡಿರುವ ಹೇಳಿಕೆ ನಿರಾಧಾರ ಎಂದರೆ, ಮೊವ್ ಶಾಸಕಿ ಉಷಾ ಠಾಕೂರ್ ಪ್ರತಿಕ್ರಿಯಿಸಲು ನಿರಾಕರಿಸಿದರು. ಕಾಂಗ್ರೆಸ್ ವಕ್ತಾರ ಕೆಕೆ ಮಿಶ್ರಾ ಕೂಡ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.