ಡ್ರಾಪ್‌ ಕೊಡುವ ನೆಪದಲ್ಲಿ ಬಾಲಕನಿಗೆ ಕಿರುಕುಳ ನೀಡಿದ ಬಿಜೆಪಿ ಕಾರ್ಯಕರ್ತ

ಚೆನ್ನೈ: ಬೈಕ್‌ನಲ್ಲಿ ಡ್ರಾಪ್‌  ಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕನಿಗೆ ಬಿಜೆಪಿ ಕಾರ್ಯಕರ್ತನೊಬ್ಬ ಕಿರುಕುಳ ನೀಡಿದ ಘಟನೆ ತಮಿಳುನಾಡಿನ ವಿಲ್ಲಿವಕ್ಕಂ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.

ಅಪ್ರಾಪ್ತ ಬಾಲಕ ಬೈಕ್‌ ನಲ್ಲಿ ಹೋಗುತ್ತಿದ್ದ ಬಾಲಚಂದ್ರನ್ (47) ಅವರ ಬಳಿ ಲಿಫ್ಟ್‌ ಕೇಳಿದ್ದಾನೆ. ಈ ವೇಳೆ ಬೈಕ್‌ ನಿಲ್ಲಿಸಿ ಬಾಲಕನಿಗೆ ಬಾಲಚಂದ್ರನ್‌ ಲಿಫ್ಟ್‌ ನೀಡಿದ್ದಾನೆ. ಗಾಡಿಯಲ್ಲಿ ಹೋಗುವ ವೇಳೆ ನಿರ್ಜನ ಪ್ರದೇಶವಾದ ಪಾಡಿ ಸೇತುವೆಯ ಕೆಳಗಿರುವ ಸ್ಥಳಕ್ಕೆ ಕರೆದೊಯ್ದು ಕಿರುಕುಳ ನೀಡಿದ್ದಾನೆ. ಈ ಕುರಿತು ಬಾಲಚಂದ್ರನ್‌ ತಾಯಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ.

ಇದನ್ನೂ ಓದಿಮಹಿಳೆಯನ್ನು ರೇಪ್ ಮಾಡಿದ್ದೀನಾ? ನಾಲಿಗೆ ಹರಿಬಿಟ್ಟ ಅರವಿಂದ ಲಿಂಬಾವಳಿ

ಪ್ರಕರಣದ ಹಿನ್ನಲೆ? :  ಅಪ್ರಾಪ್ತ ವಯಸ್ಕ ಬಾಲಕನಿಗೆ ಬಂಧಿತ ಆರೋಪಿ ಬಾಲಚಂದ್ರನ್​ ಲಿಫ್ಟ್​ ಕೊಡುವ ನೆಪದಲ್ಲಿ ಮೊದಲಿಗೆ ಬೈಕ್​ ಹತ್ತುವಂತೆ ಹೇಳಿದ್ದಾನೆ. ಬಳಿಕ ಆತನನ್ನು ಪಾಡಿ ಎಂಬ ಪ್ರದೇಶದಲ್ಲಿರುವ ಸೇತುವೆ ಬಳಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ಧಾನೆ.

ಇದಾದ ಕೆಲ ಹೊತ್ತಿನ ಬಳಿಕ ಬಾಲಕ ಹೇಳಿದ ಜಾಗಕ್ಕೆ ಆರೋಪಿ ಲಿಫ್ಟ್​ ನೀಡಿದ್ದಾನೆ. ಈ ವೇಳೆ ಅಪ್ರಾಪ್ತ ವಯಸ್ಕ ಜೋರಾಗಿ ಅಳುತ್ತಿದ್ದನ್ನು ಗಮನಿಸಿದ ಸ್ಥಳೀಯರು ಏನಾಯಿತು ಎಂದು ವಿಚಾರಿಸಿದಾಗ ನಡೆದ ಘಟನೆಯನ್ನು ಸಂತ್ರಸ್ತ ಬಾಲಕ ಹೇಳಿಕೊಂಡಿದ್ದಾನೆ.

ಈ ವೇಳೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಹಿಡಿದ ಸಾರ್ವಜನಿಕರು ಗಾಡಿಯನ್ನು ಪರಿಶೀಲಿಸಿದಾಗ ಬಿಜೆಪಿ ಪಕ್ಷದ ಶಾಲು ಹಾಗೂ ಐಡಿ ಕಾರ್ಡ್​ ದೊರೆತಿದೆ. ಬಳಿಕ ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕನ ತಾಯಿ ನೀಡಿದ ದೂರಿನ ಮೇರೆಗೆ ಬಾಲಚಂದ್ರನ್​ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

 

 

Donate Janashakthi Media

Leave a Reply

Your email address will not be published. Required fields are marked *