ಅದಾನಿ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್‍ ತೀರ್ಪು ನಿರಾಶಾದಾಯಕ-ಸಿಪಿಐ(ಎಂ)

ಅದಾನಿ ಪ್ರಕರಣದಲ್ಲಿ, ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸುವ ಸುಪ್ರೀಂ ಕೋರ್ಟ್ ತೀರ್ಪು ನಿರಾಶಾದಾಯಕ ಮತ್ತು ಹಲವಾರು ಕಾರಣಗಳಿಗಾಗಿ…

ಕಲ್ಲಡ್ಕ ಪ್ರಭಾಕರ ಭಟ್‌ನನ್ನು ಕೂಡಲೇ ಬಂಧಿಸಿ | ಸಿಪಿಐ(ಎಂ) ನಾಯಕಿ ಕೆ. ನೀಲಾ

ಕಲಬುರಗಿ: ಮುಸ್ಲಿಂ ಮಹಿಳೆಯರನ್ನು ನಿಂದಿಸುವ ಹಾಗೂ ಸೌಹಾರ್ಧತೆಗೆ ಭಂಗ ಉಂಟು ಮಾಡುವ ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ…

ಧರ್ಮ ವೈಯಕ್ತಿಕ ಆಯ್ಕೆ: ರಾಮ ಮಂದಿರ ಉದ್ಘಾಟನೆ ಸಮಾರಂಭದ ಆಹ್ವಾನ ತಿರಸ್ಕರಿಸಿದ ಸೀತಾರಾಮ್ ಯೆಚೂರಿ

ನವದೆಹಲಿ: ಬಾಬರಿ ಮಸೀದಿ ಧ್ವಂಸ ಮಾಡಿ ಅಯೋಧ್ಯೆಯಲ್ಲಿ ಕಟ್ಟಲಾಗಿರುವ ರಾಮ ಮಂದಿರ ಎಂಬ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಆಹ್ವಾನವನ್ನು ಸಿಪಿಐ(ಎಂ)…

ಕಲ್ಲಡ್ಕ ಪ್ರಭಾಕರ ಭಟ್ ನನ್ನು ಕೂಡಲೇ ಬಂಧಿಸಿ – ಸಿಪಿಐಎಂ ಆಗ್ರಹ

ಬೆಂಗಳೂರು :  ಮುಸ್ಲಿಂ ಮಹಿಳೆಯರನ್ನು ನಿಂದಿಸುವ ಹಾಗೂ ಸೌಹಾರ್ಧತೆಗೆ ಭಂಗ ಉಂಟು ಮಾಡುವ ಪ್ರಚೋದನಾಕಾರಿ ಹೇಳಿಕೆ ನೀಡಿದ ಕಲ್ಲಡ್ಕ ಪ್ರಭಾಕರ ಭಟ್…

ಬೆಂಗಳೂರು | ಸಂಸದರ ಅಮಾನತು ವಿರೋಧಿಸಿ ಸಿಪಿಐ(ಎಂ) ಪ್ರತಿಭಟನೆ

ಬೆಂಗಳೂರು: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 146 ಪ್ರತಿಪಕ್ಷಗಳ ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಸಿಪಿಐ(ಎಂ) ರಾಜ್ಯದ ಹಲವು ಭಾಗಗಳಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದೆ.…

ತುಳುನಾಡಿನ ದುಸ್ಥಿತಿಗೆ 3 ದಶಕಗಳ ಬಿಜೆಪಿಯ ದುರಾಡಳಿತವೇ ಕಾರಣ: ಜಿಲ್ಲಾಧಿಕಾರಿ ಕಚೇರಿ ಚಲೋದಲ್ಲಿ ಸಿಪಿಐ(ಎಂ) ಆರೋಪ

ಮಂಗಳೂರು: ಮೂರು ದಶಕಗಳ ಬಿಜೆಪಿ ದುರಾಡಳಿತವೇ ತುಳುನಾಡಿನ ಇಂದಿನ ದುಸ್ಥಿತಿಗೆ ಕಾರಣ ಎಂದು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಕೆ.…

ತೆಲಂಗಾಣ | ಕಾಂಗ್ರೆಸ್ ಜೊತೆ ಸೀಟು ಹೊಂದಾಣಿಕೆ ವಿಫಲ; 17 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಿದ ಸಿಪಿಐ(ಎಂ)

ಹೈದರಾಬಾದ್: ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ವಾದಿ (ಸಿಪಿಐ-ಎಂ) ಪಕ್ಷವೂ ಕಾಂಗ್ರೆಸ್ ಜೊತೆಗಿನ ಉದ್ದೇಶಿತ ಮೈತ್ರಿಯನ್ನು ಹಿಂತೆಗೆದುಕೊಂಡಿದೆ.…

‘ಇಂಡಿಯ’ ಬಣದ ವಿಸ್ತರಣೆಗೆ, ಜನಚಳುವಳಿಗಳನ್ನು ಸೆಳೆಯಲು ವಿಶೇಷ ಗಮನ ನೀಡಬೇಕು-ಸಿಪಿಐ(ಎಂ) ಪೊಲಿಟ್ ಬ್ಯೂರೋ

ಭಾರತೀಯ ಗಣರಾಜ್ಯದ ಜಾತ್ಯತೀತ ಪ್ರಜಾಸತ್ತಾತ್ಮಕ ಸ್ವರೂಪ, ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಜನರ ಮೂಲಭೂತ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ರಕ್ಷಿಸಲು ಬಿಜೆಪಿಯನ್ನು…

ಏಕರೂಪ ನಾಗರಿಕ ಸಂಹಿತೆ ವಿರುದ್ಧ ಸಿಪಿಐಎಂ ರಾಷ್ಟ್ರೀಯ ವಿಚಾರ ಸಂಕಿರಣ

ಏಕರೂಪ ನಾಗರಿಕ ಸಂಹಿತೆಯ ನೆಪದಲ್ಲಿ ದೇಶದಾದ್ಯಂತ ಧಾರ್ಮಿಕ ಪ್ರತ್ಯೇಕತೆಯನ್ನು ಸೃಷ್ಟಿಸುವುದೆ ಬಿಜೆಪಿ ಸರ್ಕಾರದ ಅಜೆಂಡಾ ಎಂದು ಸಿಪಿಐಎಂ ಆಕ್ರೋಶ ಕೇರಳ: ಏಕರೂಪ…

ಕೆಲವು ಕೊರತೆಗಳಿದ್ದರೂ, ಒಟ್ಟಾರೆ ಸ್ವಾಗತಾರ್ಹ: ರಾಜ್ಯ ಬಜೆಟ್‌ಗೆ ಸಿಪಿಐ(ಎಂ) ಪ್ರತಿಕ್ರಿಯೆ

ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಒದಗಿಸಲಾದ ಮೊತ್ತವು ಸಮರ್ಪಕವಾಗಿಲ್ಲ ಎಂದು ಸಿಪಿಐ(ಎಂ) ಅಸಮಾಧಾನ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿದ 2023-24…

ಆಡಳಿತ ಸರಾಗವಾಗಿ ನಡೆಯಬೇಕಿದ್ದರೆ ರಘು ಸಕಲೇಶಪುರನಂತಹ ದುಷ್ಟರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಸಿಪಿಐ(ಎಂ)

ಹಾಸನ: ಸಂವಿಧಾನದ ಕಾನೂನುಗಳ ಆಡಳಿತ ಸರಾಗವಾಗಿ ನಡೆಯಬೇಕಿದ್ದರೆ ರೌಡಿ ಶೀಟರ್‌ ರಘು ಸಕಲೇಶಪುರನಂತಹ ದುಷ್ಟರ ವಿರುದ್ಧ ಅತ್ಯಂತ ಕಠಿಣ ಕ್ರಮ ಜರುಗಿಸಬೇಕು.…

ಮೋದಿ ಸರ್ಕಾರದಿಂದ ರಾಜ್ಯಕ್ಕೆ ಅಕ್ಕಿ ನಿರಾಕರಣೆ ರಾಜಕೀಯ: ಸಿಪಿಐ(ಎಂ) ಪ್ರತಿಭಟನೆ

ಬೆಂಗಳೂರು: ಒಕ್ಕೂಟ ಸರಕಾರ ರಾಜ್ಯ ಹಿತದ ವಿರುದ್ಧ ನಗ್ನವಾಗಿ ನಿಂತಿದ್ದು, ರಾಜ್ಯದ ಬಹುತೇಕ ಸಂಸದರು ಬಿಜೆಪಿಯವರಾಗಿದ್ದರೂ ಅವರೆಲ್ಲರೂ ಬಾಯಿ ಹೊಲೆದುಕೊಂಡಿರುವುದು ಅವರ…

‘ಸತ್ಯಪಾಲ್ ಮಲಿಕ್ ಸಂದರ್ಶನ : ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮೋದಿ ಸರ್ಕಾರ ಉತ್ತರಿಸಲೇಬೇಕು’

“ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮಾಜಿ ರಾಜ್ಯಪಾಲ ಶ್ರೀ . ಸತ್ಯಪಾಲ್ ಮಲಿಕ್  ಎತ್ತಿರುವ ಎಲ್ಲಾ ಗಂಭೀರ ಆರೋಪಗಳ ಬಗ್ಗೆ  ಮೋದಿ ಸರ್ಕಾರವು ಸ್ಪಷ್ಟಗೊಳಿಸಬೇಕು, ಅವಕ್ಕೆಲ್ಲ ಉತ್ತರಿಸಬೇಕು” ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಆಗ್ರಹಿಸಿದೆ. “40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಕುರಿತಂತೆ ಆರೋಪಗಳು ನಮ್ಮ ದೇಶದ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ. ನಮ್ಮ ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವಲ್ಲಿ ಯಾವುದೇ ಲೋಪವಾಗುವುದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಪೊಲಿಟ್‍ಬ್ಯುರೊ ಹೇಳಿದೆ. ಇದು ಸರಕಾರದ ತಪ್ಪಿನಿಂದಾಗಿ ಸಂಭವಿಸಿರುವ ದುರಂತ, ಸಿಆರ್ ಪಿ ಎಫ್ ನವರು ಕೇಳಿದಂತೆ  ದಳದ ಸದಸ್ಯರನ್ನು ಸಾಗಿಸಲು ಐದು ವಿಮಾನಗಳನ್ನು  ಕೊಟ್ಟಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಪ್ರಧಾನ ಮಂತ್ರಿಗಳಿಗೆ ಹೇಳಿದಾಗ ಅವರು ಈಗ ಈ ಬಗ್ಗೆ ಸುಮ್ಮನಿರಿ ಎಂದು ಹೇಳಿದುದಾಗಿ ಪ್ರಖ್ಯಾತ ಪತ್ರಕರ್ತ ಕರಣ್ ಥಾಪರ್‍ ರೊಂದಿಗೆ ಸಂದರ್ಶನದಲ್ಲಿ ಸತ್ಯಪಾಲ್‍ ಮಲಿಕ್‍ ಅವರು ಹೇಳಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು. ತನಗೆ ಅಷ್ಟು ಹೊತ್ತಿಗೆ ಗೊತ್ತಾಗಿ ಹೋಗಿತ್ತು, ಈ ಎಲ್ಲಾ ದೋಷ ಪಾಕಿಸ್ತಾನದ ಕಡೆಗೆ ತಿರುಗಿಸಬೇಕಾಗಿತ್ತು, ಆದ್ದರಿಂದ ಮಾತಾಡುವುದು ಬೇಡ ಎಂದು ಹೇಳಲಾಗಿತ್ತು ಎಂದೂ ಮಲಿಕ್‍ ಹೇಳಿದ್ದಾರೆ.  ಈ ಘಟನೆಗೆ ಪ್ರತೀಕಾರವೆಂದು ಮುಂದೆ ಬಾಲಾಕೋಟ್‍ ವಿಮಾನ ದಾಳಿ ನಡೆಸಿ ಅದನ್ನು 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಳಸಿಕೊಂಡದ್ದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬಹುದು. “ಸಂವಿಧಾನದ 370 ಮತ್ತು 35 ಎ ಕಲಮುಗಳನ್ನು  ರದ್ದುಗೊಳಿಸಿದ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ರಾಜ್ಯವನ್ನು ವಿಸರ್ಜಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಿದ್ದಕ್ಕೆ ಸಂಬಂಧಿಸಿದ ಆರೋಪಗಳು ಕೂಡ ಅಷ್ಟೇ ಗಂಭೀರವಾಗಿವೆ” ಎಂದೂ ಸಿಪಿಐ(ಎಂ) ಪೊಲಿಟ್‍ಬ್ಯುರೊ ಆತಂಕ ವ್ಯಕ್ತಪಡಿಸಿದೆ.   ಆಗ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯಿದ್ದು, ಅಲ್ಲಿಯ ಆಡಳಿತಕ್ಕೆ  ಪೂರ್ಣ ಹೊಣೆಗಾರರಿದ್ದ ರಾಜ್ಯಪಾಲರಿಗೂ ಹಿಂದಿನ ರಾತ್ರಿಯ ವರೆಗೂ ಇದರ ಸುಳಿವಿರಲಿಲ್ಲ ಎಂದು ಈ ಸಂದರ್ಶನದಿಂದ ಈಗ ತಿಳಿದು ಬಂದಿದೆ. ಅಲ್ಲದೆ ಪ್ರಧಾನಿಗಳಿಗೆ ಕಾಶ್ಮೀರದ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ, ಅದನ್ನು ಪಡೆದುಕೊಳ್ಳಬೇಕು ಎಂದನಿಸದಷ್ಟು ದರ್ಪ ಅವರಲ್ಲಿದ್ದಂತಿತ್ತು ಎಂದೂ ಸತ್ಪಾಲ್‍ ಮಲಿಕ್‍ ಸಂದರ್ಶನದಲ್ಲಿ ಸೂಚಿಸಿದ್ದಾರೆ ಎಂಬುದನ್ನು ಕೂಡ ಇಲ್ಲಿ ಗಮನಿಸಬಹುದು. “ಈ ವಿಷಯಗಳ ಬಗ್ಗೆ ಮೋದಿ ಸರ್ಕಾರದ ಮೌನವು ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಭಾರತದ ಐಕ್ಯತೆ  ಮತ್ತು ಸಮಗ್ರತೆ ಕುರಿತಂತೆ ಬಹಳ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಸಾಂವಿಧಾನಿಕ ಪಾವಿತ್ರ್ಯದ ಹಿತದೃಷ್ಟಿಯಿಂದ ಮೋದಿ ಸರ್ಕಾರ ಈ ಆರೋಪಗಳಿಗೆ ಉತ್ತರಿಸಬೇಕು. ಮೋದಿ ಸರ್ಕಾರ ಮೌನವಾಗಿರಲು ಸಾಧ್ಯವಿಲ್ಲ” ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಮುಂದುವರೆದು ಹೇಳಿದೆ. 

ಹತ್ಯೆಗೀಡಾದ ಗೋ ವ್ಯಾಪಾರಿ ಇದ್ರಿಶ್ ಪಾಷಾ ಕುಟುಂಬಕ್ಕೆ ಪರಿಹಾರದ ಜೊತೆಗೆ ಸರ್ಕಾರಿ ಉದ್ಯೋಗ ನೀಡುವಂತೆ ಸಿಪಿಐಎಂ ಒತ್ತಾಯ

ಮಂಡ್ಯ : ಕೆಲವು  ದಿನಗಳ ಹಿಂದೆಯಷ್ಟೇ ಪುನೀತ್‌ ಕೆರೆಹಳ್ಳಿ ಎಂಬುವವರಿಂ ಹತ್ಯೆಗೀಡಾದ ಎನ್ನಲಾದ ಗೋ ವ್ಯಾಪಾರಿ ಇದ್ರಿಶ್ ಪಾಷಾ ಅವರು ಕುಟುಂಬಕ್ಕೆ…

ಸಿಪಿಐಎಂ ಅಭ್ಯರ್ಥಿ ಸೈರಾಗೆ ಬೆಂಬಲ ಸೂಚಿಸಿದ ನಟ ನಾಸಿರುದ್ದೀನ್ ಶಾ

ನವದೆಹಲಿ : ಪಶ್ಚಿಮ ಬಂಗಾಳದ ಬ್ಯಾಲಿಗಂಜ್ ಉಪಚುನಾವಣೆಯ ಎಡರಂಗದ ಅಭ್ಯರ್ಥಿ ಸೈರಾ ಶಾ ಹಲೀಮ್ ಅವರಿಗೆ ಹಿರಿಯ ನಟ ನಾಸಿರುದ್ದೀನ್ ಶಾ…

ದೇಶದ ನೆಚ್ಚಿನ ನಾಯಕ ಹರಿಕಿಷನ್ ಸಿಂಗ್ ಸುರ್ಜಿತ್

ಹೋಷಿಯಾಪುರ್ ನ್ಯಾಯಾಲದ ಕಂಪೌಂಡಿನೊಳಗೆ ಒಬ್ಬ ಹದಿನಾಲ್ಕು ವರ್ಷ ಪ್ರಾಯದ ಬಾಲಕ ಗೋಡೆ ಹಾರಿ ಶರ ವೇಗದಲ್ಲಿ ಬರುವ ಬಂದೂಕಿನ ಗುಂಡುಗಳನ್ನು ಲೆಕ್ಕಿಸದೆ…

ಮೊಟ್ಟೆ ಹಗರಣ : ಶಶಕಲಾ ಜೊಲ್ಲೆ, ಪರಣ್ಣ ರಾಜೀನಾಮೆಗೆ ಆಗ್ರಹಿಸಿ ಸಿಪಿಐಎಂ ಪ್ರತಿಭಟನೆ

ಗಂಗಾವತಿ : ಮಾತೃಪೂರ್ಣ ಯೋಜನೆ ಅಡಿಯಲ್ಲಿ ಅಂಗನವಾಡಿ ಮೂಲಕ ಮೊಟ್ಟೆ ಪೂರೈಕೆ ಗುತ್ತಿಗೆಯಲ್ಲಿ ಅಕ್ರಮ ಭ್ರಷ್ಟಾಚಾರ ಮಾಡಿದ ಶಾಸಕರಾದ ಪರಣ್ಣ ಮುನವಳ್ಳಿ…

ಕೇರಳ ಬಿಜೆಪಿ ಅಧ್ಯಕ್ಷನ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ಅನುಮತಿ

ಕಾಸರಗೋಡು : ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ವಿರುದ್ಧ ಚುನಾವಣಾ ಆಕ್ರಮ ಆರೋಪ ಕೇಳಿ ಬಂದಿದ್ದು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎಫ್‌ಐಆರ್…

ಉಚಿತ ಲಸಿಕೀಕರಣ ಮುಂದೂಡಿ ಯುವಜನರನ್ನು ಖಾಸಗಿ ಆಸ್ಪತ್ರೆಯಲ್ಲಿ ಹಣಕೊಟ್ಟು ಕೊಂಡುಕೊಳ್ಳುವಂತೆ ಮಾಡಿದೆ

ಬೆಂಗಳೂರು : ಮೇ ಒಂದರಂದು ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ಉದ್ಘಾಟಿಸಿರುವ 18 ವಷ೯ ಮೇಲ್ಪಟ್ಟವರಿಗೆ ಲಸಕೀಕರಣ ಮುಂದೂಡುತ್ತಾ ಖಾಸಗಿ ಸಂಸ್ಥೆಗಳಲ್ಲಿ ಲಭ್ಯವಿರುವ ಪಾವತಿಸಿ…

ರಾಜ್ಯಸಭೆ ಚುನಾವಣೆ: ಕೇರಳದ ಹಾಲಿ ವಿಧಾನಸಭೆ ಅವಧಿಯಲ್ಲೇ ನಡೆಸಲು ಕೋರ್ಟ್‌ ಆದೇಶ

ಕೊಚ್ಚಿ: ಕೇರಳ ರಾಜ್ಯದ ರಾಜ್ಯಸಭೆಯ ಮೂರು ಸ್ಥಾನಗಳಿಗೆ ವಿಧಾನಸಭೆಯಿಂದ ನಡೆಯಬೇಕಿರುವ ಚುನಾವಣೆಯನ್ನು ಪ್ರಸಕ್ತ ವಿಧಾನಸಭೆ ಅವಧಿ ಮುಗಿಯುವುದರೊಳಗೆ ನಡೆಸಬೇಕೆಂದು ಕೇರಳ ಹೈಕೋರ್ಟ್‌ ಚುನಾವಣಾ…