ರಾಜ್ಯಗಳ ಮೇಲೆ ಹಸ್ತಕ್ಷೇಪ ನಿಲ್ಲಿಸಿ – ಪ್ರಧಾನಿಗೆ ಪತ್ರ ಬರೆದ ಸಿಪಿಐ(ಎಂ) ಕರ್ನಾಟಕ

ಬೆಂಗಳೂರು: ಭಾರತದ ಒಕ್ಕೂಟವಾದಿ ಸ್ವರೂಪವನ್ನು ಬಲಗೊಳಿಸಲು ಮತ್ತು ರಾಜ್ಯಗಳ ಮೇಲೆ ಒಕ್ಕೂಟ ಸರಕಾರದ ಹಸ್ತಕ್ಷೇಪಗಳನ್ನು ನಿಲ್ಲಿಸಲು ಸಿಪಿಐ(ಎಂ) ರಾಜ್ಯ ಸಮಿತಿ ಮಂಗಳವಾರ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ಹಲವಾರು ಹಕ್ಕೊತ್ತಾಯಗಳನ್ನು ಮಂಡಿಸಿ ರಾಜ್ಯಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯ ಮಾಡಿದೆ. 

ಅಲ್ಲದೆ, ಕೇಂದ್ರ ಸರ್ಕಾರವು ಕರ್ನಾಟಕ ಹಾಗೂ ಕೇರಳ ಸರಕಾರಗಳಿಗೆ ನೀಡುತ್ತಿರುವ ಕಿರುಕುಳ ಹಾಗೂ ತಾರತಮ್ಯ ನೀತಿಯ ವಿರುದ್ದ ಫೆಬ್ರವರಿ 7,8 ರಂದು ನವದೆಹಲಿಯಲ್ಲಿ ನಡೆಸಲಿರುವ ಹೋರಾಟಕ್ಕೆ ಸಿಪಿಐ(ಎಂ) ಪಕ್ಷವು ಸಂಪೂರ್ಣ ಬೆಂಬಲ ನೀಡಿದೆ.

ಇದನ್ನೂ ಓದಿ: ಗುಜರಾತ್ | ಬಿಜೆಪಿ ಶಾಸಕನ ಶೈಕ್ಷಣಿಕ ಅರ್ಹತೆ ಪ್ರಶ್ನಿಸಿದ ಪತ್ರಕರ್ತೆ ವಿರುದ್ಧ ಎಫ್‌ಐಆರ್

ಪಕ್ಷವು ಪತ್ರದಲ್ಲಿ, ರಾಜ್ಯಗಳು ತಮ್ಮ ತೆರಿಗೆ ಹಾಗೂ ಸಂಪನ್ಮೂಲಗಳ ಪಾಲು ಪಡೆಯುವಲ್ಲಿ ಒಕ್ಕೂಟ ಸರಕಾರ ಅಡ್ಡಿಯಾಗಬಾರದು. ಕರ್ನಾಟಕಕ್ಕೆ ಬರಗಾಲದ ಅನುದಾನವನ್ನು ಈ ಕೂಡಲೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದು, “ಒಕ್ಕೂಟ ಸರಕಾರ ತನ್ನ ಮನಸ್ಸಿಗೆ ತೋಚಿದಂತೆ ರಾಜ್ಯ ಸರಕಾರಗಳು ಸಾಲ ಪಡೆಯುವಂತೆ ಮಾಡುವುದನ್ನು ನಿಲ್ಲಿಸಬೇಕು” ಎಂದು ಹೇಳಿದೆ.

“ಕೇಂದ್ರ ಪ್ರಾಯೋಜಿತ ಯೋಜನೆಗಳ ರಾಜ್ಯಗಳಿಗೆ ಸಂಬಂದಿಸಿದ ವಿಷಯಗಳಲ್ಲಿ ಒಕ್ಕೂಟ ಸರಕಾರದ ಮದ್ಯಪ್ರವೇಶ ಮಾಡಬಾರದು. ರಾಜ್ಯ ಸರ್ಕಾರಗಳನ್ನು ಗುರಿಯಾಗಿಸಿಕೊಂಡು ಒಕ್ಕೂಟ ಸರಕಾರ ED ,CBI ಹಾಗೂ ಆದಾಯ ತೆರಿಗೆ ವಿಭಾಗಳನ್ನು ದುರ್ಬಳಕೆ ಮಾಡುವುದನ್ನು ನಿಲ್ಲಿಸಬೇಕು” ಎಂದು ಸಿಪಿಐ(ಎಂ) ಹೇಳಿದೆ.

“ರಾಜ್ಯ ಸರಕಾರಗಳ ವಿಷಯಗಳಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಹಾಗು ಅವರ ಸಂವಿಧಾನಾತ್ಮಕ ಸ್ಥಾನದ ದುರುಪಯೋಗವನ್ನು ತಡೆಯಬೇಕು. ರಾಜ್ಯದ ವಿಶ್ವ ವಿದ್ಯಾಲಯಗಳ ವಿಷಯದಲ್ಲಿ ಕುಲಪತಿಗಳಾಗಿ ರಾಜ್ಯಪಾಲರ ಹಸ್ತಕ್ಷೇಪ ಮಾಡುವುದನ್ನು ತಡೆಯಬೇಕು. ರಾಜ್ಯ ಶಾಸಕಾಂಗ ಅಂಗೀಕರಿಸಿದ ಶಾಸನಗಳನ್ನು ರಾಜ್ಯಪಾಲರು ತಡೆ ಹಿಡಿಯಬಾರದು ಮತ್ತು ವಿಳಂಬ ಮಾಡದೆ ಸಹಿ ಮಾಡುವಂತೆ ಕ್ರಮವಹಿಸಬೇಕು” ಎಂದು ಸಿಪಿಐ(ಎಂ) ಕರ್ನಾಟಕ ಕಾರ್ಯದರ್ಶಿ ಯು. ಬಸವರಾಜ ಅವರು ಹೇಳಿದ್ದಾರೆ.

ವಿಡಿಯೊ ನೋಡಿ: ಚಂಡೀಗಢ ಮೇಯರ್‌ ಚುನಾವಣೆಯಲ್ಲಿ ಮತ ತಿರುಚಿದ ಚುನಾವಣಾ ಅಧಿಕಾರಿ – ವಿಡಿಯೋ ಬಹಿರಂಗ! Janashakthi Media

Donate Janashakthi Media

Leave a Reply

Your email address will not be published. Required fields are marked *