ತೆನೆ ಪಕ್ಷಕ್ಕೆ ಎಸ್‌.ಆರ್‌ ಶ್ರೀನಿವಾಸ್‌ ರಾಜೀನಾಮೆ, ಕೈ ಸೇರಲು ಸಕಲ ಸಿದ್ದತೆ

‌‌ಬೆಂಗಳೂರು: ಶಾಸಕ ಸ್ಥಾನಕ್ಕೆ ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ಎಸ್‌.ಆರ್‌ ಶ್ರೀನಿವಾಸ್‌ (ವಾಸು) ರಾಜೀನಾಮೆ ನೀಡಿದ್ದಾರೆ.

ಈ ಬಗ್ಗೆ ವಿಧಾನಸಭೆ ಸಭಾಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ಸ್ವ ಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜೀನಾಮೆ ಅಂಗೀಕಾರ ಆದ ಬಳಿಕ ಕಾಂಗ್ರೆಸ್ ಸೇರುತ್ತೇನೆ. ದೇವೇಗೌಡರು ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ದೇವೇಗೌಡರು, ಕುಮಾರಸ್ವಾಮಿ ನಾಯಕತ್ವದಲ್ಲಿ ಕೆಲಸ ಮಾಡಿದ್ದೇನೆ. ದೇವೇಗೌಡರು ಹೆಚ್ಚಿನ ಪ್ರೋತ್ಸಾಹ ಕೊಟ್ಟು ಮಗನಂತೆ ನೊಡಿಕೊಂಡರು. ಕುಮಾರಸ್ವಾಮಿ ಅವರು ಕೂಡ ಒಡಹುಟ್ಟಿದ ತಮ್ಮನ ಹಾಗೆ ನೊಡಿಕೊಂಡಿದ್ದಾರೆ. ಅದ್ಯಾವ ಸಂದರ್ಭಕ್ಕೊಸ್ಕರ ನನ್ನನ್ನು ಹೊರಹಾಕಿದ್ರೋ ಗೊತ್ತಿಲ್ಲ. ಆದರೂ ಇವತ್ತು ಭಾರವಾದ ಹೃದಯದಿಂದ, ನೋವಿನಿಂದ ಆ ಪಕ್ಷಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ ಎಂದು ಭಾವುಕರಾದರು.

2021ರ ಅಕ್ಟೋಬರ್‌ನಲ್ಲಿ ಕುಮಾರಸ್ವಾಮಿ  ಬಂದು ಗುಬ್ಬಿಗೆ ಬೇರೆ ಅಭ್ಯರ್ಥಿ ಘೋಷಣೆ ಮಾಡಿದರು. ಅವತ್ತಿನಿಂದ ನನ್ನ ಮತ್ತು ಕುಮಾರಸ್ವಾಮಿ ಮಧ್ಯೆ ಅಂತರ ಜಾಸ್ತಿ ಆಯ್ತು. ಅವರು ನನ್ನ ಮೇಲೆ ಇಲ್ಲದ ಆರೋಪ ಮಾಡಿದರು. ದೇವೇಗೌಡರನ್ನು ಸೋಲಿಸಲು ನಾನು ಮುಖ್ಯ ಕಾರಣ ಅಂದರು. ಯಾವತ್ತೂ ನಾನೂ ಅಂತಹ ಪಕ್ಷ ದ್ರೋಹ ಮಾಡಿಲ್ಲ ಎಂದು ಹೇಳಿದರು.
ನಾನು ಮತ್ತು ಕುಮಾರಸ್ವಾಮಿ ನಡುವೆ ಭಾವನಾತ್ಮಕ ಸಂಬಂಧ ಇತ್ತು. ಅವರು ಯಾರ ಮಾತು ಕೇಳಿದ್ರೋ ಗೊತ್ತಿಲ್ಲ. ನಾನು ಪಕ್ಷ ಬಿಡಲ್ಲ ಅಂದರೂ ಅಧಿಕೃತವಾಗಿ ಅವರನೇ ಬೇರೆ ಅಭ್ಯರ್ಥಿ ಘೋಷಣೆ ಮಾಡಿದರು. ಅಡ್ಡ ಮತದಾನ ಮಾಡಿರುವ ಆರೋಪ ಮಾಡಿದರು. ಪಕ್ಷದಿಂದ ವಜಾಗೊಳಿಸಿದರು. ಇದುವರೆಗೂ ನನಗೆ ಸಹಕಾರ ಕೊಟ್ಟ ಜೆಡಿಎಸ್ ಪಕ್ಷದ ಎಲ್ಲಾ ಶಾಸಕರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.

ಇದನ್ನೂ ಓದಿ : ಗುಬ್ಬಿ ವಿಧಾನಸಭಾ ಕ್ಷೇತ್ರ: 100ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರ ರಾಜೀನಾಮೆ

ನಾವು ಕುಟುಂಬದ ಸದಸ್ಯರಂತೆ ಕೆಲಸ ಮಾಡಿದ್ದೇವೆ. ಎಲ್ಲರೂ ನನ್ನ ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನಪಟ್ಟರು. ಕುಮಾರಸ್ವಾಮಿ 20 ವರ್ಷ ತಮ್ಮನ ರೀತಿಯಲ್ಲಿ ನೋಡಿಕೊಂಡಿದ್ದಾರೆ. ರೇವಣ್ಣ ಅವರು ಅಭಿವೃದ್ಧಿ ಕೆಲಸಕ್ಕೆ ಸ್ಪಂದಿಸಿದ್ದಾರೆ. ನಾನು ಮಲಗಿದ್ದರೂ ಫೋನ್ ಮಾಡಿ ನಿನ್ನ ಕ್ಷೇತ್ರಕ್ಕೆ ಏನು ಬೇಕು ಎಂದು ಕೇಳಿ ಕೆಲಸ ಹಾಕಿಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 

Donate Janashakthi Media

Leave a Reply

Your email address will not be published. Required fields are marked *